ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆ ಅನುಭವಿಸಿದ್ದು ಘನೀಕರಿಸಿದ ನಡುಕವಾ?

ವೈರುಧ್ಯ

ಮಂಜುಳಾ ಬಬಲಾದಿ

ಠಳ್…

ಹೊಡೆದ ಕಲ್ಲಿನ ರಭಸಕೆ

ಕನ್ನಡಿಯದಾಯ್ತು ಚೂರು-ಚೂರು

ನುಚ್ಚು-ನೂರಾದ ಆ ಚೂರುಗಳಲಿ

ಹೊಸ ಹೊಳಪು ನೂರು-ನೂರು!

ಘಲ್…

ಬೆಳಕ ತುಣುಕುಗಳ

ಆಯ್ವ ಕೈಗಳಲಿ

ಬಳೆಗಳ ನಿನಾದ…

ಮರೆಮಾಚಿತಿದೆ

ಆ ಚೂರುಗಳ ಮೊನಚು

ಅವುಗಳ ಹಿಂದಿನ ವಿಷಾದ!

ಝಲ್…

ಎದೆ ಅನುಭವಿಸಿದ್ದು

ಘನೀಕರಿಸಿದ ನಡುಕವಾ?

ಅಥವಾ?

ಕುಡಿಯೊಡೆಯುತಿರುವ ಪುಳಕವಾ?

ಸರ್ರ್…

ಅರೆಕ್ಷಣವೇ ಸಾಕು

ವಿಷವ ಅಮೃತವಾಗಿಸಲು

ನೋವ ನಲಿವಾಗಿಸಲು!

ದೃಷ್ಟಿ ಬದಲಾದಂತೆ

ಆಗುವವು ಇಲ್ಲಿ

ಎಲ್ಲ ಅದಲು-ಬದಲು!

ಪುರ್ರ್…

ರೆಕ್ಕೆ ಕೊಡವಿ ಹಾರಿದೆ ಹಕ್ಕಿ

ದಿಗಂತದೆಡೆಗೆ

ಗಾಳಿಯ ಗೆಳೆತನದಲ್ಲಿ

ಅಳುಕಿದರೂ, ಬಳುಕಿ

ಬೆಳಗುತಿದೆಯೊಂದು

ದೀವಿಗೆ!

 ]]>

‍ಲೇಖಕರು G

21 September, 2012

16 Comments

  1. D.RAVI VARMA

    very nice……

  2. Nataraju S M

    :))

  3. Ramesh Kumar

    ಠಳ್, ಘಲ್, ಝಲ್, ಸರ್ರ್, ಪುರ್ರ್ ಗಳ ಮೂಲಕ
    ನಿಮ್ಮ ಈ ಕವನದಲಡಗಿದೆ ಶಬ್ದ ಚಿತ್ತಾರ ಪುಳಕ
    ……… ಚೆನ್ನಾಗಿದೆ.

  4. gurunath boragi

    sogasaada saalugalu.ishtavaadavu…

  5. shanthi k.a.

    very nice….

  6. Swarna

    ಸುಂದರ ಝೇಂಕಾರ
    ಸ್ವರ್ಣಾ

  7. prakash hegde

    ತುಂಬಾ ಚೆನ್ನಾಗಿದೆ…

  8. umesh desai

    its simply good i envy u

  9. Gopaal Wajapeyi

    ‘ಶಬ್ದ’ ನುಡಿಯತೊಡಗುವುದಿದೆಯಲ್ಲ ಅದೇ ಒಂದು ಅಚ್ಚರಿ. ಅದೇ ಒಂದು ಅನುಭವ…
    ನೀವು ಶಬ್ದಗಳನ್ನು ನುಡಿಸಿದ್ದೀರಿ. ಅವುಗಳೊಂದಿಗೆ ನಮ್ಮನ್ನು ಭಾವಲೋಕದಲ್ಲಿ ನಡೆಸಿದ್ದೀರಿ.
    ಒಂದು ಅಪೂರ್ವ ಕವಿತೆ ನೀಡಿದ್ದೀರಿ ಮಂಜುಳಾ… ಅಭಿನಂದನೆಗಳು.

  10. Badarinath Palavalli

    ಸದ್ದಿನ ಚೊತೆ ಮಿಳಿತವಾದ ಕಾವ್ಯ. ದೃಶ್ಯ ಕಾವ್ಯ. ಭಾವ ತೀವ್ರತೆಯ ಏರಿಳಿತ ಸಮರ್ಥವಾಗಿ ಮೂಡಿಬಂದಿದೆ.

  11. Mohan V Kollegal

    ಒಳ್ಳೆಯ ಕವಿತೆ ಅಕ್ಕ… ಬಳಸಿರುವ ಶಬ್ದಗಳಲ್ಲಿ ಒಳ ಪುಳಕ ಮತ್ತು ಸೆಳೆತವಿದೆ… ಕವಿತೆಯಲ್ಲಿ ಪ್ರತೀ ಪಾದ(ಸಾಲು)ವನ್ನೂ ಗಟ್ಟಿಗೊಳಿಸುವುದಲ್ಲದೇ, ಉಪಯೋಗಿಸುವ ಪದ ಪದಗಳ ನಡುವೆ ಸೆಳೆತವಿರುವಂತೆ ಪ್ರಯತ್ನಿಸಬೇಕು…

  12. Prasad

    ನಿಮ್ಮ ಈ ಹನಿಗವನಗಳು ಅರ್ಥಪೂರ್ಣವಾಗಿವೆ.

  13. ಮಂಜುಳಾ ಬಬಲಾದಿ

    @Prasad ನಿಮ್ಮ ಮೆಚ್ಚುಗೆಗೆ ವಂದನೆಗಳು.. ಆದರೆ ಇವು ಹನಿಗವನಗಳಲ್ಲ.. ವಿವಿಧ ಭಾವಗಳು ತಳಕು ಹಾಕಿಕೊಂಡಿರೋ ಒಂದೇ ಕವಿತೆ!

  14. mmshaik

    nice…beautiful!!

  15. ಮಂಜುಳಾ ಬಬಲಾದಿ

    ತಮ್ಮೆಲ್ಲರ ಅಮೂಲ್ಯ ಅಭಿಪ್ರಾಯಕ್ಕೆ, ಮೆಚ್ಚುಗೆಗೆ ವಂದನೆಗಳು 🙂

  16. Sunaath

    ಕವನವೆಂದರೆ ಇದು! ವೈರುಧ್ಯಗಳನ್ನು ಅನುಭವವನ್ನು ಸೊಗಸಾದ ರೂಪಕಗಳಲ್ಲಿ ಚಿತ್ರಿಸಿದ್ದೀರಿ. ಕೊನೆಯ ಸಾಲಂತೂ ಸುಪರ್. ಅದನ್ನೇ ಕೊಂಚ ಬದಲಾಯಿಸಿ ಹೀಗೆ ಹೇಳಲೆ?:
    ಭಾವನೆಗಳ ಸೆಳೆತದಲ್ಲಿ
    ಅಳುಕಿದರೂ, ಬಳುಕಿ
    ಬೆಳಗುತಿದೆಯೊಂದು
    ಕವನ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading