ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಯೊಳಗೆ, ಮೋಡಗಳ ಜೊತೆಗೆ..

girija shastri

ಗಿರಿಜಾಶಾಸ್ತ್ರಿ

ಮಾಯಾ ಯುದ್ಧ

she on cloudsರಚ್ಚೆ ಹಿಡಿದು ಹೀಗೆ ಕಾಡಲು
ಹಕ್ಕು ನಿನಗೆ ಕೊಟ್ಟವರಾರು
ಕಸಿವ ಕಲೆಯನ್ನೂ
ಹುಸಿವ ಮನವನ್ನೂ
ಕರತಲಾಮಲಕ ಮಾಡಿಕೊಳ್ಳಲು?
ಕೊಲ್ಲಲೇಬೇಕೆಂದಿದ್ದರೆ
ವಿಷ ಚೂರಿ ಬೆಂಕಿ ಹಗ್ಗ
ಎಲ್ಲ ಇತ್ತಲ್ಲ
ಕೈ ಕಣ್ ಅಳತೆಯಲ್ಲೇ
ಒಂದು ಕೂಗು ಹಾಕಿದ್ದರೂ
ಸಾಕಿತ್ತು..
ಮಾಯಾ ಯುದ್ಧ ಹೂಡುವ ಗರಜೇನಿತ್ತು?

ನಿನ್ನ ರುಜುವಾತು

ಮೋಡಗಳ ಮೇಲೆ ಮುಗಿಲುದ್ದ ಹಾರುವಾಗ
ನಿನ್ನ ಭಾಸವಾಗುತ್ತದೆ.
ಬಗಲಲ್ಲೇ ಅಂಟಿ ಕುಳಿತಂತೆ
ನದಿ ಸಾಗರಗಳೂ ಹಾಯುತ್ತವೆ
ಎದೆಯೊಳಗೆ ಮೋಡಗಳ ಜೊತೆಗೆ
ಜಗತ್ತಿನ ತುತ್ತತುದಿಗೆ.
ನಿನ್ನ ಗಾಳಿ ಬೀಸುತ್ತದೆ.
ಅದರ ಪರಿಮಳ ಹೊತ್ತು
ಹಾರುತ್ತವೆ ಅರಳೆ ಪರ್ವತಗಳು
ನಿನ್ನ ರುಜುವಾತುಗಳು

‍ಲೇಖಕರು Admin

29 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading