-ದೀಪಾ ಗೋನಾಳ
ನಿದ್ದೆ ತೊರೆದು ಎದ್ದು ಬಂದ
ತೋಳ ತೆರೆದ ಹಿಗ್ಗಿನಿಂದ
ಎಳೆದ ಅವಳ ಬಳುಕಿನಿಂದ
ಮುಖದ ತುಂಬ ಮುಖವ ತಂದ
ಎದೆಗೆ ಎದೆಯ ಅಡ್ಡವಿಟ್ಟ
ತುಟಿಯ ತುಂಬ ನಗುವತೊಟ್ಟ
ನಾಸಿಕಕೆ ಬಿಸಿ ಉಸಿರಕೊಟ್ಟ
ನಯನ ಬಿಲ್ಲಿನಿಂದ ಪ್ರೇಮ ಬಾಣ ಬಿಟ್ಟ
ಒತ್ತಿ ನಿಂತ ತನ್ನತಾ ಮತ್ತ ತುಂಬಿ
ಒಲ್ಲೆನೆಂದಳು ನಲ್ಲೆ ಬಿಡಿಸಿಕೊಳುವ
ನಾಟಕವ ನಂಬಿ
ತುಟಿಯ ಸರಸಿ ಗಲ್ಲ ಕೊಟ್ಟು
ತಿರುಗಿದಳು ಹುಸಿಗೋಪ ತೋರಿ
ಸಕ್ಕರೆ ಗೊಂಬಿ
ಸೆರಗು ಜಾರಿ ಎದೆಯು ತೋರಿ
ಇಲ್ಲವಾಗಿ ತಪ್ಪಿಸಿಕೊಳುವ ದಾರಿ
ನಲ್ಲೆ ಮುಡಿದ ಮಲ್ಲಿಗೆಯು
ನಲುಗಿತು ನಲ್ಲನದೆಗೆ ಜಾರಿ..
ಬಣ್ಣ ಬಂತು ಮುಗಿಲತುಂಬ ಕಾಮನಬಿಲ್ಲೇರಿ






0 Comments