ಗಜಲ್
– ಎಂ ಎಂ ಶೇಕ್ ಯಾದಗಿರಿ
ಹೊತ್ತಿ ಉರಿಯುತ್ತವೆ ಗುಡಿಸಿಲಿನಲ್ಲಿ ದೀಪಗಳು
ಹೊತ್ತಿ ಬೆಳಕಾಗುತ್ತವೆ ಮಹಲಿನಲ್ಲಿ ದೀಪಗಳು
ಒಲೆ ಉರಿಸಲು ಹೊಯ್ದಾಡುತ್ತವೆ ನಿಜ
ಘಾಟು ವಾಸನೆಗೂ ಹೆದರುತ್ತವೆ ಕನಸಿನಲ್ಲಿ ದೀಪಗಳು
ನನ್ನಲ್ಲಿ ಉರಿಯುತ್ತಿರುವ ಅಗ್ನಿಗೇನು ಹೊಸದಲ್ಲ
ಬೆಂದು ಹೊಯ್ದಾಡು ತ್ತವೆ ಮನಸಿನಲ್ಲಿ ದೀಪಗಳು
ಬಿಸಿಲಲ್ಲಿ ಬಣ್ಣಗೆಟ್ಟು ಹೊತ್ತಿಕೊಳ್ಳುತ್ತದೆ ದೇಹ
ಹೀಗೂ ಬೆಳೆಸುತ್ತೇವೆ ಸಾವಿರಾರು, ಉಸಿರಿನಲ್ಲಿ ದೀಪಗಳು
ತುತ್ತಿಗಾಗಿ ಚೀರಿ ಕೂಗುವ ಅ ದ್ವನಿಗೆ
ಎಣ್ಣೆಯಿಲ್ಲದೆ ಮ0ದವಾಗುತ್ತವೆ ಬದುಕಿನಲ್ಲಿ ದೀಪಗಳು





ಉಸಿರಿನಲ್ಲಿ ದೀಪಗಳು , ಬದುಕಿನಲ್ಲಿ ದೀಪಗಳು, ಗುಡಿಸಲು – ಮಹಲು ಈ ಪದ ಪ್ರಯೋಗಗಳಿಂದ ಕವಿತೆ ಚೆನ್ನಾಗಿದೆ. ಸಿ ವಿ ಶೇಷಾದ್ರಿ ಹೊಳವನಹಳ್ಳಿ .