ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಆರ್ ಲೀಲಾವತಿ ಹೊಸ ಕವಿತೆ ‘ಕನಸ ಮೊಟ್ಟೆ’

ಎಚ್ ಆರ್ ಲೀಲಾವತಿ

**

ರಾತ್ರಿ ಮೊಟ್ಟೆಯಿಟ್ಟ
ಕನಸುಗಳೆಲ್ಲ
ಹಗಲು ಚಿಟ್ಟೆಯಾಗಿ
ಹಾರಿಹೋಗುವಾಗ
ನಿನ್ನದೇ ನೆನಪು

ಎದೆ ತುಂಬ ಬೆಚ್ಚನೆಯ
ಸಾವಿರದ ಪ್ರೇಮದುಸಿರ
ಮಲ್ಲಿಗೆಯ ಕಂಪು
ಅಕಾಲದಲ್ಲೂ

ನಿಜದ ನಡತೆಯ ನಂಬಿ
ಮುಡಿಗೆ ಏರಿಸುವ ವೇಳೆ
ಕೈ ಬರಿದು ಮುಡಿ ಬರಿದು
ಹಾರಿಹೋಗಿತ್ತು ಚಿಟ್ಟೆ

ಆಟಗಳ ಬೇಟಕ್ಕೆ
ಬಲಿಯಾದ ಮುಗ್ಧತೆ
ಉಸಿರುಸಿರು ಬೆರೆವಾಗ
ಎದ್ದ ಅಪರಿಚಿತ ಗೋಡೆ

ನೆನಪಿನಂಗಳ ತುಂಬ
ಅಗ್ನಿಜ್ಜಾಲೆಯ ಕುಣಿತ
ಶೃತಿ ಇರದ ರಾಗಗಳು
ಬಿಕ್ಕುತಿಹ ಭಾವಗಳು

ಪಾಳು ಬಿದ್ದ ಹೃದಯ
ಬರಡು ಬಂಜರು ಭೂಮಿ
ಕನಸು ಮೊಟ್ಟೆಯಿಡುವುದಿಲ್ಲ
ಚಿಟ್ಟೆ ಹಾರುವುದಿಲ್ಲ

‍ಲೇಖಕರು Admin MM

14 February, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading