ಎಚ್ ಆರ್ ಲೀಲಾವತಿ
ಕನಸ ಕಣ್ಣಿನ ರಾಗ ಕದಿಯುತ
ಕಂಡ ಹೃದಯಕೆ ಕನ್ನವಿಕ್ಕುತ
ಎದೆಯ ಪುಟಗಳ ಹಾಳೆ ಸರಿಸುತ
ಏಕೆ ಬರೆದೆಯೊ ಪ್ರೇಮ ಕವನವ
ಇರುಳ ಚಂದಿರ ಮಿನುಗು ತಾರಗೆ
ಮಿಂಚ ಸಂಚಿನ ನಗೆಯ ಬೆಳಕಲಿ
ನಿನ್ನ ತುಟಿಗಳ ಮಾಡಿ ಲೇಖನಿ
ಏನ ಬರೆದೆಯೊ ಒಕ್ಕಣಿಕೆಯನು

ಇರುಳ ರಾಗದ ಮೌನ ಕಳೆಯುತ
ಉದಯ ರವಿ ತಾ ಇಣುಕೆ ಪೂರ್ವದಿ
ಕನಸು ಹರಿದಿಹ ಬೆಳ್ಳಿ ಬೆಳಕಲಿ
ನಿನ್ನ ತುಟಿಗಳ ಗುರುತು ಎದೆಯಲಿ






0 Comments