ಎಚ್ ಆರ್ ರಮೇಶ
ಅರಿಯಲಾರದ ಕಾಲ ಅನುಭವಕ್ಕೆ
ಮನದ ಭಾವ ಭಾಷೆಯಲ್ಲಿ
ಅಸ್ತಿತ್ವ
ವ್ಯಕ್ತವಾಗಿದ್ದದ್ದು ಘಟಿಸಲಿಲ್ಲ
ಮಂಜುಗಡ್ಡೆ ಕರಗದೆ ಕೊರೆಯುವುದು
ಅಂದಿನದ್ದು ಇಂದು ಇರಬೇಕಿತ್ತು
ಎನ್ನುವ ಕಾಲದ ವಿರುದ್ಧ
ಭಾವ
ಸನ್ನಿವೇಶ ಮಾಡುವುದು ವಕ್ರ
ತಪ್ಪಿಸಿ ಆಗಬೇಕಾಗಿದ್ದದ್ದನ್ನು ಆಗಿ
ಕಾಲವನ್ನೇ ತನ್ನ ಸುಳಿಯೊಳಗೆ
ಎಳೆದು ಕರಗಿಸಿಕೊಳ್ಳುವ
ಕಪ್ಪುರಂಧ್ರ
ಇದೋ ಹಬ್ಬಿಕೊಂಡು

ಅಗೋಚರ
ಆವರಿಸಿಕೊಳ್ಳುವವೆಲ್ಲವೂ ಹಾಗೆಯೇ ಏನೋ
ಅದರ ಎಳೆತಕ್ಕೆ ಸೆಳೆತಕ್ಕೆ
ಸ್ಥಿತಿಗಳು
ಸ್ಥಿತ್ಯಂತರ
ಭಾವದಲ್ಲಿ ಮೂಡಿದ್ದು ನಡೆಯಬೇಕೆಂದಿಲ್ಲ
ಕಾಲದ ಗತಿಯೇ ಅದಕ್ಕೆ ಅರಿವಿಲ್ಲದಿರುವಾಗ
ಅಲೌಕಿಕದ ಸಮರ್ಥನೆಗೆ ಲೋಕ
ತನ್ನ ಅಹಮ್ಮನ್ನು ಬಿಟ್ಟುಕೊಡದು
ದುಃಖಿಸುವುದು
ನಿರಂತರ
ಭಾವ ಮೂಡಿ
ಭಾಷೆ ಮೂಡಿ.






0 Comments