ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಆರ್ ರಮೇಶ ಹೊಸ ಕವಿತೆ- ಪರಾಗ

ಎಚ್. ಆರ್. ರಮೇಶ

ಸೃಷ್ಟಿಯ ಸ್ಪ್ರಿಂಗ್; ಚಿಮ್ಮಿ

ಏನೂ ಇಲ್ಲದ ಬಯಲಿಂದ, ಈಗ,

ಇದೆ ಏನೋ,

ಭ್ರಮೆ, ಭಾಸ;

ತತ್ವ ಹುಟ್ಟಿ ನಿಜ ವಾಸ್ತವದಲ್ಲಿ,

ಅರಳಿತ್ತೊ, ಮೊಗ್ಗೋ

ಹಾರಿ ಬಂದ ಸುಖದಲ್ಲಿ ಹಗೂರಾಗಿ ಎಲ್ಲನೂ ಮರೆತಮೇಲೆ ತನ್ನನೂ ಮರೆತು

ಸ್ಪರ್ಶದ ಗಂಧ,

ಜೀವದ ಧಾತುವಿನ ಎಳೆ

ಎಳೆ

ಎಳೆಯಾಗಿ,

ತೊಟ್ಟು

ಕಳಚಿ, ಬಿದ್ದಲ್ಲಿ ಲೋಕ ಲೋಕಾಂತರ;

ಸೃಷ್ಟಿಗೇ ಆಶ್ಚರ್ಯ

ತಾನೂ ಒಳಗೊಂಡು ಆಗುತ್ತಿರುವುದಕ್ಕೆ,

ತಂತು ತಂತುವಿನಲ್ಲೂ ಹಳವಂಡವಲ್ಲದ ನೆನಪು.

ಆಮೇಲೆ:

ಬೇಕಿಲ್ಲದಿರುವುದ ಬೇಕುಮಾಡಿಕೊಂಡು ಭಾರದ ಬದುಕು;

ಜೀವ ಮಾತ್ರ ಬದುಕಿನ ಗೊಡವೆಯಿಲ್ಲದೆ

ಜಡದಲಿ ಜಲತುಂಬಿ

ಮೀಟುವುದು.

‍ಲೇಖಕರು Avadhi

18 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading