ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಎಂ ಶೇಕ್ ಬರೆದ ಕೆಲವು ಹಾಯ್ಕುಗಳು

ಎಂ ಎಂ ಶೇಕ್


ನೀನಿಲ್ಲದ ಹೊತ್ತಿಗೆ
ಕಾಮನಬಿಲ್ಲಾದರು
ಸರಿ ಈ ಇಳೆಗೆ ..
 
ಉಸ್ಸೆಂದು ಉಸುರಿದ
ಸಂಜೆಗೆ ..
ಕೊಟ್ಟ ಉತ್ತರ
ಚಂದ್ರ ..
 
ಎದ್ದ ಸಿಗರೇಟಿನ
ಹೊಗೆ…
ಎದ್ದ ಹುಡಿ ಮಣ್ಣಿನ
ಧೂಳು …
 
ತಾರೆ ತರಚಿದ
ಗಾಯಕ್ಕೆ
ಬೆಳದಿಂಗಳು
ಮುಲಾಮು ..
 
ನಾನೆದ್ದು ನಿಂತುದಕ್ಕೆ
ಉದುರಿ ಬಿತ್ತು
ತಾರೆಯೊಂದು
ಭೂಮಿಗೆ ..
 
ಎಲ್ಲೋ ಹೂ
ಅರಳಿದುದಕ್ಕೆ
ನನ್ನದೆಯ ಗಾಯವೊಂದು
ಮಾಯ್ದಿರ್ಬೇಕು ..
 
ನನ್ನ ಬೆವರ ಹನಿ
ಸವಾಲು
ಇಬ್ಬನಿಗೆ !!!!!!
 

‍ಲೇಖಕರು G

23 June, 2014

6 Comments

  1. Renuka Shripad Bada

    nice lines

  2. pratibha kage

    nice

  3. vidyashankar

    ನನ್ನ ಬೆವರ ಹನಿ
    ಸವಾಲು
    ಇಬ್ಬನಿಗೆ…. Excellent one 🙂

  4. satish javaregowda

    Super .odalu kushi agutthe.

  5. smitha Amrithraj

    nice..

  6. mmshaik

    dhanyavaadagaLu..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading