ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂದೋ ಬರೆದ ಪತ್ರ ಇನ್ನೂ ಬಳಿ ಇದೆ..

 

ಲಕ್ಷ್ಮಿ ಹೆಚ್

ಪದೇ ಪದೇ ನೆನಪಾಗಬೇಕೆಂದು
ಉಡುಗೊರೆಗಳ ಜೊತೆಗಿಟ್ಟಿದ್ದೇನೆ
ನಾ ಮೆಚ್ಚುವ ಪುಸ್ತಕಗಳಿಗಿಂತಲು
ಹೆಚ್ಚು ಪ್ರೀತಿಯಿಂದ ಜತನವಾಗಿರಿಕೊಂಡಿದ್ದೇನೆ.

ಅಕ್ಷರಗಳು ಧೂಳಿಡಿದಿರಬಹುದು
ಅದರ ಭಾವನೆಗಳು ಇನ್ನೂ
ಹಸಿಹಸಿ ಎಷ್ಟು ಕಾಲಕ್ಕೂ.
ಸ್ಪೂರ್ತಿ ನೀಡುವ ಬೆಲೆ ಬಾಳುವ ಬರಹಗಳು.
ನನ್ನ ಹಸ್ತಾಕ್ಷರವಿದೆ ಕೊನೆಗೆ.

ಕಾಲ ಕೃತಿ ದೇಶವನೂ ಮೀರಿದ ಪತ್ರವದು.
ನಿನ್ನ ತಲುಪುವವರೆಗು ಅದರ ಹೊಣೆ
ನನ್ನದೆಂದು. ನಿನಗೆ ತಲುಪಿಸಿಬಿಟ್ಟರೆ ನನ್ನ ಜವಾಬ್ದಾರಿ ಕಳೆದುಕೊಳ್ಳುವೆನೆಂದು.
ನಂತರ ಅದು ನಿನಗೆ ಸೇರಿದ್ದೆಂದು.

ಅಲ್ಮೆರದ ಬದಿಗೆ ಕೈಗೆಟುಕುವಂತೆ
ಇರಿಸಿರುವೆ ನನಗಷ್ಟೆ ಎಟುಕುವಂತೆ
ಬಿಟ್ಟರೆ ನಿನಗಷ್ಟೆ ಸಿಕ್ಕುವಂತೆ.
ಎಂದೊ ಬರೆದ ಪತ್ರ  ಇನ್ನೂ ಬಳಿ ಇದೆ.

 

‍ಲೇಖಕರು Avadhi Admin

21 May, 2019

4 Comments

  1. Nagraj Harapanahalli.karwar

    ಬೆಚ್ಚನೆಯ ಪತ್ರವದು….
    ಯುಗ ಯುಗಗಳ ಒಲವ ಹಾಡದು..

    ಚೆಂದ ಪದ್ಯ

    • Lakshmi H Kurki

      ನೀವು ಹೇಳಿದ ಮೇಲೆ ಅದಕ್ಕೆ ನಿಜಕ್ಕೂ ಜೀವ ಬಂದಿದೆ ಎನಿಸುತ್ತಿದೆ ಸರ್,ಧನ್ಯವಾದಗಳು.

  2. S. Mahesh

    ಪತ್ರ ತಲುಪಿದೆ… ಅದರ ಚಿಂತೆ ಬಿಡಿ..

  3. Lakshmi H Kurki

    ಥ್ಯಾಂಕ್ಯೂ ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading