ಮೆಹಬೂಬೀ
ಊರಿಗೊಂದೇ
ಸ್ಮಶಾನವಂತೆ
ಬೀದಿಯಲ್ಲಿ
ಸುಡುತ್ತಿರುವ
ಹೆಣಗಳ ತಕರಾರು…!
**
ಹುಯಿಲಿಟ್ಟಿತೋ ಚಿತೆ
ಮುಕ್ತಿ ಕಾಣಲು
ಸರದಿ ಸಾಲಿನ ಚೀಟಿ..
**
ದನಿಗಳಿಗೀಗ
ಗಿಡುಗನದೇ
ಹೆದರಿಕೆಯಂತೆ…
**

ಅರ್ಧರಾತ್ರಿಗೆ
ಉರಿದ ಚಿತೆ
ಹಗಲ ಪಾಲಾಯಿತು..
**
ಶವಸಂಸ್ಕಾರವೀಗ
ವಾರ್ತಾ ಪತ್ರಿಕೆಯ
ಮೊದಲ ಪುಟದ ಸುದ್ದಿ..
**
ನೀರು ಕುಡಿಯಲು ಬಂದು
ಏಟು ತಿಂದು ಹೋದ
ಮಂದಿರದೊಳಗೆ
ಮನ ಗುನುಗತೊಡಗಿತು
ಇಳೆ ನಿಮ್ಮ ದಾನ…
ಬೆಳೆ ನಿಮ್ಮ ದಾನ..
**
ಹುಳುಕುಗಳನ್ನು
ಗೋಡೆ ಕಟ್ಟಿ ಮರೆಮಾಚಿದ
ದಶಕಗಳಿಗೆ ಮೈ ತುಂಬಾ ಬಾಯಿ..






ಮಾರ್ಮಿಕ ಹನಿಗಳು ಬೀಜೀ…
ಧನ್ಯವಾದಗಳು ನೂರ್ ಜಿ