'ಊಟವೆಂದರೆ ಬಾಡೂಟ ಮಾತ್ರ'

ಮೂಳೆಗಳ ಕಡಿಯುತ್ತಲೇ ಮನಸ್ಸುಗಳ ಬೆಸೆಯುವ ‘ಬಾಡೂಟದ ಬಳಗ’
ಇದು ವಾಟ್ಸಪ್ ಗ್ರೂಪ್ ಹಾಗೂ ಫೇಸ್ ಬುಕ್ ಪೇಜ್ ಗಳ ಕಾಲ. ಒಂದು ವಿಭಿನ್ನ, ವಿಶಿಷ್ಟ ಯೋಜನೆ/ಯೋಚನೆಗೆ ಕೈ ಜೋಡಿಸುವವರು, ಬೆಂಬಲಿಸುವವರಿರುತ್ತಾರೆ ಎನಿಸಿದ ಮರುಕ್ಷಣವೇ ಅಲ್ಲೊಂದು ಫೇಸ್ ಬುಕ್ ಪೇಜ್ ಸಿದ್ದವಾಗಿರುತ್ತದೆ.
ನೆಚ್ಚಿನ ಲೇಖಕರ ಬಗ್ಗೆ, ನಟರ ಬಗ್ಗೆ, ರಾಜಕೀಯ/ಸಾಮಾಜಿಕ ವಿಷಯಗಳ ಬಗ್ಗೆ, ಹೀಗೆ ಎಲ್ಲದಕ್ಕೂ (ಊಹಿಸಿಯೂ ಇರದ ವಿಷಯಗಳ ಬಗ್ಗೆಯೂ) ಒಂದೊಂದು ಪೇಜ್, ಗ್ರೂಪ್ ಚಾಲನೆಯಲ್ಲಿ ಇದ್ದೇ ಇರುತ್ತದೆ. ಅಂತಹುದೇ ಒಂದು ಗ್ರೂಪ್ ‘ಬಾಡೂಟದ ಬಳಗ’.
ಇದರಲ್ಲೇನು ವಿಶೇಷ?!
baadoota balaga2ಬಾಡೂಟವನ್ನು ಇಷ್ಟಪಡುವ ಒಂದಷ್ಟು ಮಂದಿ ಈ ಪೇಜಿನಲ್ಲಿ ತಮ್ಮ ನೆಚ್ಚಿನ ಬಾಡೂಟದ ಖಾದ್ಯಗಳ ಬಗ್ಗೆ, ಹೋಟೆಲ್ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ, ಥೇಟ್ ಟಿ.ವಿ.ಚಾನೆಲ್ ಗಳ ನಿರೂಪಕರಂತೆ ಎಂದು ನೀವು ತಿಳಿದರೆ, sorry; ನಿಮ್ಮ ಊಹೆ ಅಕ್ಷರಶಃ ತಪ್ಪು.
ಇದು ಕೇವಲ ಮಾಹಿತಿ ಹಂಚಿಕೊಳ್ಳಲು ಅಥವಾ ಅಭಿಪ್ರಾಯ ರೂಪಿಸಲು ಇರುವ ವೇದಿಕೆಯಲ್ಲ, ಬಾಡೂಟದ ರುಚಿಯನ್ನು ಎಲ್ಲರೂ ಜೊತೆಗೂಡಿ ಸವಿಯುವ ಅನುಭವಕ್ಕಾಗಿ ಇರುವ ವೇದಿಕೆ. ‘ಬಾಡೂಟ ಬಳಗ’ದ ವೈಶಿಷ್ಟ್ಯವೇ ಇದು. ಹಾಗಾಗಿಯೇ, ಉಳಿದ ಹಲವಾರು ಗ್ರೂಪ್ ಗಳಂತೆ ‘ಬಾಡೂಟದ ಬಳಗ’ ಕೇವಲ Virtually Active ಇರುವ ಗ್ರೂಪ್ ಅಲ್ಲವೇ ಅಲ್ಲ. This group is very much active or only active outside Facebook also.
ಹಾಗೆ ನೋಡಿದರೆ, ‘ಬಾಡೂಟದ ಬಳಗ’ ‘ಬೈಟು ಮಾತೇ ಇಲ್ಲ’ ಎಂಬ ಟ್ಯಾಗ್ ಲೈನಿನೊಂದಿಗೆ, ತನ್ನದೇ ಆದ ಲೋಗೊದೊಂದಿಗೆ ಫೇಸ್ ಬುಕ್ ಪೇಜ್ ಮಾಡಿಕೊಂಡಿದ್ದು ತೀರಾ ಇತ್ತೀಚೆಗೆ. ಆದರೆ ಅದಕ್ಕೂ ಮೊದಲು ಈಮೈಲ್, ಎಸ್.ಎಂ.ಎಸ್ ಸಮಯದಿಂದಲೇ ಈ ಬಳಗ ತನ್ನ ಬೇಟೆ ಆರಂಭಿಸಿತ್ತು.
ತಿಂಗಳಿಗೊಮ್ಮೆ ಒಟ್ಟಾಗಿ ಸೇರಿ ಬಾಡೂಟದ ಹೋಟೆಲಿಗೆ ಲಗ್ಗೆ ಹಾಕಿ ಮನಸ್ಪೂರ್ತಿಯಾಗಿ ‘ಬ್ಯಾಟಿಂಗ್’ ಮಾಡುವುದು ಬಳಗದ ಖಾಯಂ ಕಾರ್ಯಕ್ರಮ. ಪ್ರತಿ ತಿಂಗಳು ಒಂದಿಲ್ಲೊಂದು ವೈಶಿಷ್ಟ್ಯ ಇರುವ ಹೋಟೆಲನ್ನು ಶೋಧಿಸುತ್ತಾರೆ. ಈ ಹೋಟೆಲ್ಲುಗಳು ಬೆಂಗಳೂರಿನಲ್ಲೇ ಇರಬೇಕೆಂದೇನಿಲ್ಲ. ಬೆಂಗಳೂರಿನ ಸುತ್ತಮುತ್ತವಾದರೂ ಆಯಿತು. ಒಮ್ಮೊಮ್ಮೆ ಬಾಡೂಟದ ನೆಪದಲ್ಲಿ ಪಿಕ್ನಿಕ್ ಆಗುವುದೂ ಉಂಟು. ಸದ್ಯಕ್ಕೆ ಫೇಸ್ ಬುಕ್ಕಿನಲ್ಲಿ ಸುಮಾರು 3 ಸಾವಿರ ಸದಸ್ಯರನ್ನು ಒಳಗೊಂಡಿರುವ ‘ಬಾಡೂಟದ ಬಳಗ’ ಇತ್ತೀಚೆಗೆ ತನ್ನ ಮೂರನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.
 
ಬಾಡೂಟದ ಬಳಗವು ಥೀಮ್ ಸಾಂಗ್ ಒಂದನ್ನು ಕಟ್ಟಿಕೊಂಡು ಪ್ರಸ್ತುತ ಪಡಿಸಿದ್ದು ಈ ವಾರ್ಷಿಕೋತ್ಸವದ ಮತ್ತೊಂದು ವಿಶೇಷ. ‘ಮಯೂರ’ ಚಲನಚಿತ್ರದ ‘ನಾನಿರುವುದೆ ನಿಮಗಾಗಿ’ ಹಾಡಿನ ಧಾಟಿಯಲ್ಲಿರುವ (ರಾಗದಲ್ಲಿ) ಹಾಡು ಹೀಗಿದೆ:
ಬಾಡಿರುವುದೆ ನಮಗಾಗಿ
ಬಾಡಿರುವುದೆ ನಮಗಾಗಿ
ನಾವಿರುವುದೆ ಅದಕ್ಕಾಗಿ
ಕಲ್ಮೀ ಬೇಕೆ? ಕರ್ಮೀನ್ ಸಾಕೆ?
ಕಲ್ಮೀ ಬೇಕೆ? ಕರ್ಮೀನ್ ಸಾಕೆ?
ಕಡಿಯಿರಿ ಎಲ್ಲಾ ಒಂದಾಗಿ
ಕಡಿಯಿರಿ ಎಲ್ಲಾ ಒಂದಾಗಿ
ಬಾಡಿರುವುದೆ ನಮಗಾಗಿ!!
ಒಂದೇ ಬಳಗದ ಗೆಳೆಯರು ನಾವು
ಆದ್ರೂ ಬೈ-ಟೂ ಮಾತಿಲ್ಲ
ಒಂದೇ ಬಳಗದ ಗೆಳೆಯರು ನಾವು
ಆದ್ರೂ ಬೈ-ಟೂ ಮಾತಿಲ್ಲ
ಸೀಗಡಿ ಆಗ್ಲಿ, ನಾಟಿಕೋಳಿ ಇರ್ಲಿ
ಸೀಗಡಿ ಆಗ್ಲಿ, ನಾಟಿಕೋಳಿ ಇರ್ಲಿ
ಯಾವ್ದನ್ನು ನಾವು ಬಿಡೋದಿಲ್ಲ
ಬನ್ನೂರು ಕುರಿಯನು ತಂದು
ನಾವ್ ಮಸಾಲೆ ಅರಿದೆವು ಇಂದು
ಬನ್ನೂರು ಕುರಿಯನು ತಂದು
ನಾವ್ ಮಸಾಲೆ ಅರಿದೆವು ಇಂದು
’ಅಣ್ಣ’ನ ಆಣೆ ಕಡಿದ ಕುರಿಯ ಮೂಳೆನು ಉಳಿಸೋಲ್ಲ
ಬಾಡಿರುವುದೆ ನಮಗಾಗಿ…..
ನಾವಿರುವುದೆ ಅದಕ್ಕಾಗಿ
ಕಲ್ಮೀ ಬೇಕೆ? ಕರ್ಮೀನ್ ಸಾಕೆ?
ಕಲ್ಮೀ ಬೇಕೆ? ಕರ್ಮೀನ್ ಸಾಕೆ?
ಕಡಿಯಿರಿ ಎಲ್ಲಾ ಒಂದಾಗಿ
ಕಡಿಯಿರಿ ಎಲ್ಲಾ ಒಂದಾಗಿ
ಬಾಡಿರುವುದೆ ನಮಗಾಗಿ!!
ಸಾವಿರ ಜನುಮದ ಪುಣ್ಯವೊ ಏನೋ
ಬಾಡೂಟಕ್ಕಾಗಿ ಸೇರಿದೆವು
ಸಾವಿರ ಜನುಮದ ಪುಣ್ಯವೊ ಏನೋ
ಬಾಡೂಟಕ್ಕಾಗಿ ಸೇರಿದೆವು
ಬೋಟಿ ಗೊಜ್ಜು, ಕೋಳಿ ಕಾಲು
ಬೋಟಿ ಗೊಜ್ಜು, ಕೋಳಿ ಕಾಲು
ಜಮಾಯ್ಸಿಬಿಡುವುದ ಕಲಿತಿಹೆವು
ಬಿರ್ಯಾನಿಯ ಬಾರಿಸಿಬಿಡುತಾ
ಈ ಹಸಿವಿಗೆ ಬಿಡುಗಡೆ ಕೊಡುತಾ
ಬಿರ್ಯಾನಿಯ ಬಾರಿಸಿಬಿಡುತಾ
ಈ ಹಸಿವಿಗೆ ಬಿಡುಗಡೆ ಕೊಡುತಾ
ಕೋಳಿಗೆ, ಕುರಿಗೆ ಮೋಕ್ಷವ ನೀಡಿ
ಪುಣ್ಯವ ಗಳಿಸೋಣ
ಬಾಡಿರುವುದೆ ನಮಗಾಗಿ…..
ನಾವಿರುವುದೆ ಅದಕ್ಕಾಗಿ
ಕಲ್ಮೀ ಬೇಕೆ? ಕರ್ಮೀನ್ ಸಾಕೆ?
ಕಲ್ಮೀ ಬೇಕೆ? ಕರ್ಮೀನ್ ಸಾಕೆ?
ಕಡಿಯಿರಿ ಎಲ್ಲಾ ಒಂದಾಗಿ
ಕಡಿಯಿರಿ ಎಲ್ಲಾ ಒಂದಾಗಿ
ಬಾಡಿರುವುದೆ ನಮಗಾಗಿ!!
baadoota balaga1
ಈ ಬಾಡೂಟದ ಬಳಗ, ಊಟಕ್ಕಾಗಿ ಕಾರ್ಯಕ್ರಮ, ಇವೆಲ್ಲಾ ಕೇವಲ ಜಿಹ್ವ ಚಾಪಲ್ಯವೇ? ಎಂದು ಕೇಳಿದರೆ, ‘ಖಂಡಿತವಾಗಿಯೂ ಇಲ್ಲ’ ಎನ್ನುತ್ತಾರೆ ಬಳಗವನ್ನು ಹುಟ್ಟುಹಾಕಿದ ಕೆ.ಟಿ.ಸತೀಶ್.
ಇವರಿಗೆ ಊಟ ಎಂದರೆ, ಅದರಲ್ಲೂ ಬಾಡೂಟವೆಂದರೆ ಹೊಟ್ಟ ತುಂಬಿಸಿಕೊಳ್ಳುವ ಯಾಂತ್ರಿಕ ಕೆಲಸ ಅಲ್ಲವೇ ಅಲ್ಲ. ಬಾಡೂಟದ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಇವರಿಗೆ ಬಾಡೂಟ ಮಾಡುವುದೆಂದರೆ ಒಂದು ವಿಶಿಷ್ಟ ಅನುಭವ. ಸಮಾನ ಅಭಿರುಚಿಯ ಎಲ್ಲರೂ ಒಟ್ಟಾಗಿ ಸೇರಿ ಈ ಅನುಭವದಲ್ಲಿ ಭಾಗಿಗಳಾದಾಗ ಆ ಅನುಭವ ಹಾಗೂ ತೃಪ್ತಿ ಇಮ್ಮಡಿಯಾಗುತ್ತದೆ ಎಂದು ನಂಬಿರುವ ಇವರಿಗೆ ಸಾಥ್ ನೀಡುತ್ತಿರುವವರು ನಾಗರಾಜ್ ರೋಣೂರು.
ಇವರ ಆಶಯದಂತೆ ಬಳಗದ ಸದಸ್ಯರೆಲ್ಲರೂ ಬಾಡೂಟದ ಬಗ್ಗೆ ಸಮಾನ ರೀತಿಯ ಪ್ರೀತಿ ಹೊಂದಿರುವವರೇ ಆಗಿದ್ದಾರೆ.
‘ಊಟವೆಂದರೆ ಬಾಡೂಟ ಮಾತ್ರ’ ಎನ್ನುವ,’ಬಾಡೂಟವೆಂದರೆ ಪ್ರಾಣ’ ಎಂದು ಹೇಳಿಕೊಳ್ಳುವ, ‘ಚೆನ್ನಾಗಿ ತಿನ್ನಬೇಕು, ದೇಹ ದಂಡಿಸಿ ದುಡಿಯಬೇಕು’ ಎಂದು ನಂಬಿರುವ, ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಎಂದು ವೇದಾಂತ ಹೇಳುವ ಸದಸ್ಯರು ಬಾಡೂಟದ ಉಪಯುಕ್ತತೆಯನ್ನೂ ಅನಿವಾರ್ಯತೆಯನ್ನು ವಿವರಿಸುತ್ತಾರೆ. ಒಟ್ಟಿನಲ್ಲಿ, ಮೂಳೆಗಳನ್ನು ಕಡಿಯುತ್ತಲೇ, ಮನಸ್ಸುಗಳನ್ನು ಕೂಡುತ್ತಿರುವ, ಕೂಡಿಸುತ್ತಿರುವ ಬಾಡೂಟ ಬಳಗದ ಸಾಮೂಹಿಕ ಬೇಟೆ ಭರ್ಜರಿಯಾಗಿ ಸಾಗಲಿ.
ಮರೆವ ಮುನ್ನ:
ನಮಗೆಲ್ಲಾ ಗೊತ್ತಿರುವಂತೆ, ನಮ್ಮ ನೆಚ್ಚಿನ ವರನಟ ರಾಜ್ ಅವರಿಗೆ ಮಾಂಸಾಹಾರವೆಂದರೆ ಬಹಳ ಪ್ರೀತಿ. ರಾಜ್ ಅವರ ಜನುಮ ದಿನದಂದು, ಅವರ ನೆನಪಿನಲ್ಲಿ ‘ಬಾಡೂಟ ಕಾರ್ಯಕ್ರಮ’ವನ್ನು ಏರ್ಪಡಿಸಿ ಸಂಭ್ರಮಿಸಿದ ಜಗತ್ತಿನ ಏಕೈಕ ಹಾಗೂ ವಿಶಿಷ್ಟ ಅಭಿಮಾನಿಗಳೆಂದರೆ ‘ಬಾಡೂಟ ಬಳಗ’ದವರು ಮಾತ್ರ.
Cheers to the team!

‍ಲೇಖಕರು Avadhi

July 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: