ಅವನಿಲ್ಲದ ಕಾಡು…
ಚಿತ್ರ ಕೃಪೆ : ಅಜಿತ್
ಭೀಮನ ಅಮಾವಾಸ್ಯೆಯ ಮರುದಿನ ಸುಪ್ರಭಾತಕೆ ತಲ್ಲಣಿಸಿತಲ್ಲ ನಾಡು, ಹುಂಬನು ಹೊತ್ತೊಯ್ದ ಮೇರು ನಟರೂ ನೂರೆಂಟು ದಿನ ವನವಾಸ ಪಾಡು… ಅಸಲವನ ಕಾಡೇ ಅಭೇದ್ಯ ಒಮ್ಮೆ ಕುರುಚಲು ಬೀಡು ಮುಗಿಲೆತ್ತರಕೆ ಆನೆ ಹುಲ್ಲು ನಿಬಿಡ ಮರಗಿಡ ಸಂಪತ್ತು ಮತ್ತೆ ಬಟಾ ಬಯಲು… ನಡುವಿವನ ಗುನ್ನೆ ಪ್ರಪ್ರಂಚ ಅಪಹರಣ ಅಟ್ಟಹಾಸ ಮರಸು ಬೇಟೆ ನಿರ್ಧಯಿ ಕಾಡುಗಳ್ಳನವನು ವೀರಪ್ಪನ್, ಕಾಲಧರ್ಮಕೆ ಅವನೇ ಸತ್ತರೂ ಕಳ್ಳ ಗಂಟಿನ ಕುಂಭ ಬಯಲಾಗಲಿಲ್ಲ! ಈಗಲ್ಲಿ ನೆಲ ಬಾಂಬು ಸಿಡಿಯುವುದಿಲ್ಲ ತುಪಾಕಿ ಮೊರೆಯುವುದಿಲ್ಲ ಸುಳ್ಳು ಸಂಧಾನಕಾರರಿಲ್ಲ “ಹರಹರ ಮಹಾದೇವ್” ಉದ್ಘೋಷವಿಲ್ಲ ನಿರಮ್ಮಳವಾಗಿದೆ ಕಾಡು ಮೇಡು ಮಡಿದ ಪೊಲೀಸರ ನಿಟ್ಟುಸಿರ ಹೊತ್ತು ಹರಿಯುತ್ತೆ ಅದೇ ಪಾಲಾರ್, ಘೀಳಿಟ್ಟು ಅತ್ತ ಆನೆಗಳೇ ಮುದಿಬಿದ್ದು ಮರೆತಿವೆ ಕಳಕೊಂಡ ತಮ್ಮ ದಂತ, ಚಿಗುರೊಡೆದು ನಳನಳಿಸಿದೆ ಶ್ರೀಗಂಧ… ರುಂಡ ಕತ್ತರಿಸಿ ಎಸೆದ ಶ್ರೀನಿವಾಸನ್ ಕಾಹು ಕೊಂದಿಟ್ಟ ಶಕೀಲ್ ಅಹಮದ್ ತಾ ಕೊಂದಿಲ್ಲವೆಂದಿದ್ದ ನಾಗಪ್ಪನಂತವರೂ ಬದುಕಿ ಬಂದಾರೇ ಹೇಳು ಮತ್ತೆ ಈಗ? ಉತ್ತರಿಸಲವನೇ ಜೀವಂತವಿಲ್ಲ… ಉಸಿರಾಡುತಿದೆ ಈಗೀಗ ಆವನಿಲ್ಲದ ಕಾಡು…]]>





ನನ್ನ ಕವನವನ್ನು ಅವಧಿಯಲ್ಲಿ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಒಲುಮೆ ಹೀಗೇ ಇರಲಿ.
“ರುಂಡ ಕತ್ತರಿಸಿ ಎಸೆದ ಶ್ರೀನಿವಾಸನ್
ಕಾಹು ಕೊಂದಿಟ್ಟ ಶಕೀಲ್ ಅಹಮದ್
ತಾ ಕೊಂದಿಲ್ಲವೆಂದಿದ್ದ ನಾಗಪ್ಪನಂತವರೂ
ಬದುಕಿ ಬಂದಾರೇ ಹೇಳು ಮತ್ತೆ ಈಗ?
ಉತ್ತರಿಸಲವನೇ ಜೀವಂತವಿಲ್ಲ…
ಉಸಿರಾಡುತಿದೆ ಈಗೀಗ
ಆವನಿಲ್ಲದ ಕಾಡು…”
ಬದರಿ ಸರ್…
ತುಂಬಾ ಮಾರ್ಮಿಕವಾಗಿದೆ ಕವನದ ಸಾಲುಗಳು….
ತುಂಬಾ ಇಷ್ಟವಾಯ್ತು….
ಚೆನ್ನಾಗಿದೆ.ಒಂದು ಆವೇಶವು,ಕಕ್ಕುಲಾತಿ,ನಿರ್ಜನ ಮೌನ ಪ್ರೇರಣೆ ಇಲ್ಲಿದೆ .ಕಠಿಣ ಪದಗಳಲ್ಲಿ ಗದ್ಯ ಪದ್ಯದ೦ತೆ ಅನ್ನಿಸಿರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಮೆಯ ಅನಾವರಣ ಮೈ ನವಿರೇಳಿಸುತ್ತದೆ.ಅದ್ಬುತ ಪದಗಳ ಹಿಡಿತವಿರುವ ಸಾಹಿತ್ಯ ನಿಮ್ಮದು.ಅಂತಹವರ ಬರಹಗಳು ಇಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತಿರುತ್ತವೆ. ಮೊತ್ತ ಮೊದಲ ಬಾರಿಗೆ ಅವಧಿಯಲ್ಲಿ ನಿಮ್ಮ ಬರಹ ನೋಡಿ ಖುಷಿ ಆಯಿತು. ಗುರುತಿಸಿದ ಅವಧಿಗೆ ಮತ್ತು ನಿಮಗೆ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು.
tumba chennagide. Avadhi ge namma article kalisuvudu hege, yaru prakatisuvavaru?
avadhimag.online vilasakke ನೀವು, ನಿಮ್ಮ ಲೇಖನ ಬರಹವನ್ನು ನುಡಿ, ಬರಹ, ಅಥವಾ ಗೂಗಲ್ transliteration ನಲ್ಲಿ ಪ್ರತಿ ಶಬ್ದ ದ ನಂತರ ಸ್ಪೇಸ್ ಬಳಸಿದರೆ ನಿಮ್ಮ ಶಬ್ದ ಕನ್ನಡಕ್ಕೆ ತರ್ಜುಮೆ ಆಗುತ್ತೆ . ಇಲ್ಲವಾದಲ್ಲಿ ಮೇಲ್ ನಲ್ಲಿ ‘ ಅ’ ಶಬ್ಧದ ಮೇಲೆ entermaadi ದಲ್ಲಿ ನಿಮ್ಮ ಶಬ್ದ ಕನ್ನಡಕ್ಕೆ ತರ್ಜುಮೆ ಆಗುತ್ತೆ ಅದನ್ನು ನೀವು ನೆರವಾಗಿ ಅವಧಿ ಗೆ ಕಳಿಸಿಕೊಡಬಹುದು. ನೋಡಿ ಕಲಿ ಮಾಡಿ ಕಲಿ ಅನ್ನೋ ಹಾಗೆ ಪ್ರಾರಂಭದಲ್ಲಿ ಒಂದೆರಡು tappugaladaru ಮತ್ತೆ ಮತ್ತೆ ಪ್ರಯತ್ನಿಸಿ ,ನಾನು ಹಾಗೆ ಕಲೆತದ್ದು , ಆಲ್ ದಿ ಬೆಸ್ಟ್
ರವಿ ವರ್ಮ ಹೊಸಪೇಟೆ
ಉಸಿರಾಡುತಿದೆ ಈಗೀಗ
ಆವನಿಲ್ಲದ ಕಾಡು…
ಒಳ್ಳೆಚಿಂತನೆ .
ಅದೆಷ್ಟು ಪ್ರಾಣಿಗಳು, ಅದೆಷ್ಟು ಜೀವಗಳ ಮಾರಣ ಹೋಮ ನಡೆದದ್ದು ಇಲ್ಲಿ, ದಾಖಲಾಗಿದ್ದೆಸ್ತು, ಇತಿಹಾಸದ ಒಳಗೆ ಮುಚ್ಚಿಹೋದದ್ದೆಸ್ತು . ಈ ಸರಕಾರಗಳ ನರಹೇಡಿತನ, ಬ್ರಸ್ತ್ಟತನ,ಕ್ಕೆ ಬಲಿಯಾದ ಜೀವಗಳ ಗೋರಿಗಳ ಅಂತರ್ನಾದ ಕೇಳುವವರು ಯಾರು . ಆ ಕಾಡಿನ ಹಾಡಿಗಳಲಿದ್ದವರ ಬದುಕು ಅದೆಲ್ಲಿ ಕಳೆದು ಹೋಯಿತು . ಎಲ್ಲವು ಪ್ರಸ್ನೇಗಳೇ…. ಅವು ನಮ್ಮನ್ನು ಕಾಡುತ್ತಿವೆ …..
ರವಿ ವರ್ಮ ಹೊಸಪೇಟೆ
ನೀವು ಕೈಗೊಳ್ಳುವ ಪ್ರತಿಮೆಗಳ ಅನಾವರಣ ಅರ್ಥೈಸಿಕೊಳ್ಳುವುದು ಸಾಮಾನ್ಯ ಓದುಗನಾದ ನನಗೆ ಬಹಳ ಕಷ್ಟ.
ಈ ರಚನೆಯೊಳಗೆ ಕೊನೆಯ ಸಾಲಿನ ನಿಟ್ಟುಸಿರು ಬಹು ಸೂಕ್ತವೆನಿಸಿತು.
ಬಹುಷಃ ಒಂದು ಭೀಕರತೆಯನ್ನು ಎದುರಿಸಿ ನಿಂತ ನಾವುಗಳು ಆ ಭಯಾನಕ ಸರಣಿಯೊಳಗಿನ ಊಹಾಪೋಹಗಳನ್ನು ದಂತಕತೆಯಾಗಿ ಇಂದಿಗೂ ನೆನಪಿಸಿಕೊಳ್ಳಬೇಕೇ ವಿನಹ ಅದರ ಸತ್ಯಾಸತ್ಯತೆ ಕಾಡಿನೊಳಗಿನ ಜೀವಸಂಕುಲಗಳಷ್ಟೇ ಅಭೇದ್ಯವೆನಿಸಿತು. ಸತ್ಯ ಎಲ್ಲೋ ಪೊದೆಯೊಳಗೆ ಅವಿತುಕೊಂಡಂತೆ ಭಾಸ. ಕಾಡುವವು ಅವನಿಲ್ಲದ ಕಾಡಿನೊಳಗಿನ ದಂತ ಕಳೆದುಕೊಂಡ ಆನೆಗಳ ನೋವಿನಂತೆ!
ಉತ್ತಮ ರಚನೆ ಬದರಿ ಸರ್