ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಷಾ ನರಸಿಂಹನ್ ಕವಿತೆ- ಮತ್ತೆ ಪ್ರೀತಿ… ಮತ್ತೆ ಬದುಕು…

ಉಷಾ ನರಸಿಂಹನ್

ಹೊಂಗೆ ಚಿಗುರಿದೆ ಹೊಸತು…
ಯುಗಾದಿಗೆ ಹಸಿರುಟ್ಟು ಹೂತು
ಹಳೆಯ ಕಹಿಯನು ಮರೆತು !
ಮೈಬೋಳಾಗಿಸಿದ ಶಿಶಿರ ಇಷ್ಟೂ ನೆನಪಿಲ್ಲ !
ಚಾಚಿದ ಕೊಂಬೆ ಕತ್ತರಿಸಿದ ಕೊಡಲಿ ಖದರಿಲ್ಲ;
ಕೊಂಬೆಯೆಲೆಮನೆಯಲಿಟ್ಟಿದ್ದ ಹಕ್ಕಿ ಮೊಟ್ಟೆಯ ಕಬಳಿಸಿದ
ಹಾವಿನ ಮೇಲಿದ್ದ ದ್ವೇಷ ಮರೆಯಾಗಿದೆ !
ಮೈಮೇಲಣ ಹಣ್ಣೆಲೆಗಳು ಉದುರಿದಾಗ
ಹರಿದ ಕಂಬನಿ ಒರೆಸಿ ಹೋಗಿದೆ…

ಇಣಚಿಗಳ ಕೊಂಡಾಟ, ಹಕ್ಕಿಗಳ ಹಾರಾಟ
ಎಲ್ಲವೂ ಮುದ್ದು ವೃದ್ಧ ಮರಕ್ಕೆ !
ಮೈತುಂಬ ಹಸಿರುಟ್ಟ ಟೊಂಗೆಯಲಿ
ತನಿಗಾನವೇಳಿಸುವ ಇನಿಗೊರಳನು
ಸುಖಿಸುವಂತೆಯೇ ಸಖನಾಗುತ್ತದೆ ಕರ್ಕಶ ಕಾಗೆಗು !
ಮೈಮೇಲೆಲ್ಲ ಹರಿವ ಹುಳಹುಪ್ಪಟೆಗಳಿಗೆ
ಅಪ್ಪಟ ಪ್ರೀತಿಯಾಗುತ್ತೆ ಮರ;
ದೇವರಲ್ಲೊಂದು ವರ ಕೇಳಿತ್ತಂತೆ ಮರ !
ಎಲ್ಲವನು ಮರೆತು ಬದುಕಾಗಿಸು
ಬದುಕಾಗುತ್ತ ಪ್ರೀತಿಸುವುದು ಕಲಿಸು ಅಂತ !

‍ಲೇಖಕರು Admin

15 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading