ಸೊಬಗ ಸೀರಿಯೊಳಗೆ ಬಚ್ಚಿಟ್ಟ ಹಸಿರ ಹಸಿವು
ಚಣ್ಣೆಂದು ಎಗರಿ ಎಪ್ಪತ್ತಾರು ಗಾವುದ ಹಾರಿ ಹರಿದುಹೋದ ಹರಿಣ
ಸರಿ ಹೊತ್ತಾದರೂ ಗೊಣಗುತ್ತಲೇ ಮುಸುಕಿನೊಳಗೇ ಮುದುಡಿ ಮಲಗಿದ್ದ ಟಾಮಿ
ಹೆಬ್ಬಾರ ಎತ್ತಲಾರದೇ ಹೆಳವನ ಮಾಡಿದ್ದ ಬಂಡಿ
ಸೆರೆಸಿಕ್ಕಾಗ ಗಕ್ಕೆಂದು ಗಾಳಕ್ಕಿಡಿದು ಗುಳುಂ ಮಾಡಲು
ಸದಾ ಬಿಲ್ಲನ್ನು ಹೊತ್ತೇ ನಿಂತಿರುತ್ತಿದ್ದ ತಪಸ್ವಿ
ಇಲ್ಲ ಈಗಿಲ್ಲ ಇಲ್ಲಿಲ್ಲ,ಅಲ್ಲಲ್ಲ, .ಇಲ್ಲೆಲ್ಲ ಅಲ್ಲೆಲ್ಲ . ಅಲಲಾ . .
ಹಾಡಿ ಹರಿಯುತಿತ್ತೋ ಬನ್ದೇ ನವಾಜನ್ನ ಲಾಲಿ ಖವ್ವಾಲಿ.
“ಬಂದೆಯಾ ಮಗುಬಂದೆಯಾ” -¬ಊರ ಗಿರಿಸೀಮೆಯಾಚೆಗಿನ ಹೆಂಬಂಡೆ ತಂದೆಯಾ !
ಪಂಕ್ತಿ ಪಂಕ್ತೀಗೂ ಮಧ್ಯ ಚಿಗುರಿದ್ದ ಹಸಿ ಚಿಗುರ ಕರಳೆ
ಅಲ್ಲೆ ಆ ನಡುವಲ್ಲೆ ನೆಟ್ಟಿದ್ದ ಕತ್ತಾಳೆ ತಾಳೆ
ಅಚೆ,ಅತ್ತಾಚೆಗೆಲ್ಲೋ ಗೋಳಿಡುತ್ತಿದ್ದ ಗೌಳಿಗರ ಗಂಗ
ಪಾತಿಯತ್ತಲೆಲ್ಲೆಲ್ಲೋ ಪತರುತಿದ್ದ ಪಾತರಗಿತ್ತಿ
ಗೆರೆ ಗೀರಿ ಗೋರಿದರೆ ಗೋಗರೆವ ಗೋಧಾರೆ
ಅರೆ ರಾತ್ರಿ ಬರೆ ಗುಲ್ಲು ಗುಲ್ಲೆಂದು ಅಡರುವ ನಲ್ಲೆ ಪಲ್ಲಂಗ ಪರಿಮಳ
ಆಹಾಹ , . ಅಹಹಾ . ಆಹ್ಲಾದ ನಾದ , ಹಾ ಹಾ.
ತಿರು ಠುಮ್ರಿ, ಶ್ರುತಿ ಹೊಮ್ಮಿ ಓಹೋಂಕರೀತಿತ್ತೋ ಬತ್ತೇರಿ ಬುರುಜಲ್ಲಿ ಲಾಲಿ ಖವ್ವಾಲಿ .
“ಉರುಳು ಮೂರೇ ಉರುಳು” ಉಲಿದಿತ್ತೆ ಮಗಳೇ ಉಂಡಾದ ಮೇಲೆ !
ಬಿರಿಯಾನಿ ಬರುವನಕ ಬಾರೊಲ್ಲೆ ಅಂದಿದ್ದ ಕರಿಯನಾ ಕಟ್ಕತೆ
ಹೆಜ್ಜೇನು ಹಿಡಿಕಡಿದು ಮಂದಿಯೊಳಗಲ್ಲೇ ಮಿಂದೆದ್ದ ಮಂದಣ್ಣ
ವಾರ್ವಾರವೂ ವಕ್ಕರಿಸೋ ಕಣಗಾಲು ಕಣಿಯಮ್ಮ
ಬಬ್ಬೂರ ಬಡೆನಾಗ ಥೂ ಪೀ ಊದುವ ಪುಂಗಿ ಪುರಾಣ
ಷ್ಟೇಶನ್ನ ಹಳಿಯಾಚೆ “ಹುಳಿಮಾವು ಮರ”ದಲ್ಲಿ ಮೆತ್ತಿದ್ದ ಮಾಸ್ತರರ ಮೋಹ
ಬಾ ಬಾ ಬ , ಅಬ್ಬಬ್ಬ ಹಬ್ಬ. ಹಬ್ಬಬ್ಬ ಬಬ್ಬಾಬ ಬಾರಬ್ಬ ಹಬ್ಬ.
ಉಸ್ತಾದ ಉಸುರೊಳಗೆ ಉಮ್ಮಳಿಸಿ ಉಸುರಿತ್ತೊ ಲಾಲಿ ಖವ್ವಾಲಿ .
” ಕತ್ತಲೆಗೆ ಹತ್ತೆ ತಲೆ ” ಹೆತ್ತಿತ್ತೆ ಗೆಳೆಯಾ ಹೊತ್ತಾದ ಮೇಲೆ !
ಢಮ ಢಮಿರು, ಛಟಿ ಛಟಿರು ಪುಟಿ ಪುಟಿದು ನೆಗೆದಿತ್ತು ರಿಯಾಜುಬಾಜು
ಕೆಂಡ ಕೊಂಡದ ಸುತ್ತ ತಿರು ತಿರುವಿ ತಿರುಗಿತ್ತು ಆಲಾಪ್ರಲಾಪ
ಆಗಸಕೆ ಆಡರಿತ್ತು ಹಗೆಸುಟ್ಟ ಧೂಮ
ಹಾದಿ ಹಾಯಿಸಿದಷ್ಟೂ ದೂರ ನೀಲಿ ನೀಲಿ
ಅಲ್ಲಿ
ತೂರಿ ಸುಯ್ಯುತಲಿತ್ತು
ತನ್ವೀರ ತಾನೊಲಿದ ಲಾಲಿ ಖವ್ವಾಲಿ







quite interesting.
thanks sir
kavana adbhutavagide….
thank you sir
ತುಂಬಾ ಚೆನ್ನಾಗಿದೆ, ಯಾವ ಯಾವದೋ ಓದಿನ, ಪುಸ್ತಕದ ನೆನಪಿಗೆ ಕರೆದೊಯ್ಯುವ ಸಾಲುಗಳ attachmentಗೆ ಶರಣಾಗಿದ್ದೇನೆ.
ಮುಂದುವರೆಯಲಿ ಹೀಗೆ…
yes sir,nimmaanathiyante aagali.will move
ಕವನ ಇಷ್ಟವಾಯಿತು…
Eshtu chanda bareeteeyo tammaa…! Biduviddaaga ondishtu inthaa cholo kavanaa baradu Avadhige kodu. Namaga odalikke anukoola. 🙂