ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಮಾ ಮತ್ತು ಉಪ್ಪಿಟ್ಟು

ಪ್ರಥಮ್ ಬುಕ್ಸ್
ಚಿತ್ರಗಳು: ರೇಣುಕಾ ರಾಜೀವ್

ಶಾಲೆ ಇದ್ದಾಗ ಮನೆಯಲ್ಲಿ ಮಾಡಿದ ತಿಂಡಿ ಮಕ್ಕಳಿಗೆ ಇಷ್ಟ ಆಗದಿದ್ದರೂ ಒತ್ತಾಯ ಮಾಡಿ ಸ್ವಲ್ಪ ತಿನಿಸಿ ಕಳುಹಿಸಬಹುದು. ಮಧ್ಯಾಹ್ನ ಊಟದ ಡಬ್ಬಿಯಲ್ಲಿ ಇರೋದನ್ನ ಖಾಲಿ ಮಾಡೆ ಮಾಡುತ್ತಾರಲ್ಲ! ಫ್ರೆಂಡ್ಸ್ ಒಟ್ಟಿಗೆ ತಿನ್ನುತ್ತಾರಾದ ಕಾರಣ ಇಷ್ಟ ಇದೆ, ಇಷ್ಟಿಲ್ಲ ಎನ್ನುವ ಪ್ರಶ್ನೆ ಏಳುವುದೆ ಇಲ್ಲ.

ಆದರೆ ರಜೆಯ ಕಷ್ಟ… ‘ಕೊರೊನ ವೇಳೆ’ಯಿಂದಾಗಿ ತಿಂಗಳು ಮುಂಚೆಯೆ ಬೇಸಿಗೆ ರಜೆ ಶುರುವಾಗಿದೆ. ಮಕ್ಕಳು ಹೇಗೊ ಸಮಯ ಕಳೆಯುತ್ತಾರೆ. ಆದರೆ ಕೆಲಸಕ್ಕೆ ಹೋಗುವ ಅಮ್ಮಂದಿರು ಮನೆಯಲ್ಲಿ ತಮಗಿರುವ ಕಡಿಮೆ ಸಮಯದಲ್ಲಿ ಮಕ್ಕಳಿಗೆ ತಿಂಡಿ ತಿನಿಸಬೇಕಲ್ಲ, ಅದರ ಕತೆ ಹೇಳಿ! ನಮ್ಮ ಉಮಾ ಕೂಡ ಯಾವ ತಿಂಡಿಯನ್ನೂ ಇಷ್ಟಪಡುವುದೇ ಇಲ್ಲ.

ಆದರೂ ಅವಳ ಅಮ್ಮ ಕೂಡ ನಿಮ್ಮಂತೆಯೇ ಬಗೆ ಬಗೆ ತಿಂಡಿ ಮಾಡಿ ಅವಳಿಗೆ ತಿನಿಸಲು ಪ್ರಯತ್ನ ಪಡುತ್ತಲೇ ಇರುತ್ತಾರೆ. ಈ ಕತೆ ನಿಮ್ಮ ಮತ್ತು ಉಮಾ ಅಮ್ಮನದು ಅಂತ ಮಾತ್ರ ತಿಳಿದಿದ್ದೀರ? ಇಲ್ಲ, ಸೋಹಾ ಅಲಿ ಖಾನ್ ಕತೆ ಕೂಡ! ಎರಡೂವರೆ ವರ್ಷದ ಮಗಳಿಗೆ ತಿಂಡಿ ಊಟ ಮಾಡಿಸಲು ಮಾಡುವ ಪ್ರಯತ್ನವನ್ನೆ ಸೋಹಾ ನಮ್ಮ ಉಮಾ ಕತೆಯಲ್ಲಿ ಕಂಡಿದ್ದಾರೆ.

ಕೇಳಲು ಇಲ್ಲಿ ಕ್ಲಿಕ್ಕಿಸಿ.

ವಿಡಿಯೋಗೆ ಇಲ್ಲಿ ಕ್ಲಿಕ್ಕಿಸಿ.

ನೀವು ಉಮಾಳನ್ನು ಭೇಟಿಯಾಗಿ ತಿಂಡಿ ತಿನ್ನು ಅಂತ ಹೇಳಬೇಕೆ? ಇಲ್ಲಿಗೆ ಬನ್ನಿ

‍ಲೇಖಕರು avadhi

21 March, 2020

1 Comment

  1. T S SHRAVANA KUMARI

    ಇದು ಒಂಥರಾ ಹೊಸತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading