ಚರ್ಚೆಗಾಗಿ

ಅಶೋಕ್ ಶೆಟ್ಟರ್
ಕರ್ನಾಟಕದ ಸಾರ್ವಜನಿಕ ಬದುಕಿನ ಮೌಲ್ಯಗಳ ಕುಸಿತದ ಸಂಕೇತಗಳಾಗಿ ಉಳಿಯಲು ಹಟ ತೊಟ್ಟಂತೆ ಯಾಕೆ ಲೋಕಾಯುಕ್ತ ಆಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಮತ್ತು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರರು ತಮ್ಮ ಸ್ಥಾನಗಳಿಗೆ ಅಂಟಿಕೊಂಡರೋ ಗೊತ್ತಿಲ್ಲ. ಗಂಭೀರ ಅಪಾದನೆಗಳು ಮೈಮೇಲಿರುವಾಗ ಆ ಸ್ಥಾನದಲ್ಲ್ಲಿ ಮುಂದುವರಿಯುವದು ತರವಲ್ಲ ಎಂದು ಅವರು ಕೆಳಗಿಳಿದಿದ್ದರೆ ಅವರು ತಪ್ಪಿತಸ್ಥ ಎಂದಾಗುತ್ತಿರಲಿಲ್ಲ. ಅವರಲ್ಲಿರುವ ನೈತಿಕತೆಯ ಪ್ರಜ್ಞೆಯ ಸಂಕೇತವಾಗಿ ಅದಕ್ಕೆ ಒಂದು ಗೌರವವಿತ್ತು….
ಸಿನಿಮಾದ ಯಾವುದೋ ಹಾಡಿನಲ್ಲಿ ಬರುವ ಶಬ್ದ, ಯಾರೋ ಚಿತ್ರಕಾರನ ರೇಖೆ ಬಣ್ಣಗಳು ಧಾರ್ಮಿಕ ಭಾವನೆಗಳಿಗುಂಟು ಮಾಡುವ ಧಕ್ಕೆಗಿಂತ ಲಕ್ಷಾಂತರ ಜನ ಉನ್ನತ ಸ್ಥಾನಗಳ ಕುರಿತು ಇಟ್ಟುಕೊಂಡಿರುವ ಅಮಾಯಕ ನಂಬುಗೆಗೆ ಆಗುವ ಘಾಸಿ ಸಣ್ಣದೆಂದು ಹೇಗೆ ಹೇಳುವದು?
ಈ ಮಾತನ್ನು ಬೇಸರದಿಂದ ಹೇಳುತ್ತಿರುವೆ.





ಖಂಡಿತವಾಗಿ ಇದು ಬೇಸರ ಹಾಗು ಹೇಸಿಗೆ. ಅದರಲ್ಲು ಇನ್ನೂ ರಾಘವೇಶ್ವರ ಭಾರತಿಗೆ ಕೋಟೆ ಕಟ್ಟಿ ನಿಂತು ರಕ್ಷಣೆ ಕೊಡುತ್ತಿರುವವರಿಗೆ ಏನೆಂದು ಹೇಳುವುದೋ? ಇದೆಲ್ಲ ಸಾಲದೆಂಬಂತೆ ಆರೋಪ ಸಾಬೀತಾದರೆ ದೇಹ ತ್ಯಜಿಸುವ ಮಾತು ಹುಟ್ಟುಹಾಕಿ ವಿಚಾರಣೆಯ ಮೇಲೂ ಒತ್ತಡ ಹೇರುವ ತಂತ್ರವಲ್ಲವೆ?
ಅನುಪಮಾ ಪ್ರಸಾದ್.
ನಿಮ್ಮ ಬೇಸರ ಸಕಾಲಿಕ ಮತ್ತು ಸಾಧುವಾಗಿದೆ. ಎಲ್ಲ ಬಿಟ್ಟು ಈಗ ಯಾಕೆ ಈ ತಕರಾರು, ಇದರ ಹಿಂದಿನ hidden agenda ಏನು? ಈ ಪ್ರಶ್ನೆಗಳನ್ನು ಎತ್ತುವ ಮೂಲಕ ನೀವು ಪಕ್ಷವೊಂದರ ಕೈಗೊಂಬೆ ಇರಬಹುದೆ ಎಂಬ ಸಂಶಯ ಹುಟ್ಟು ಹಾಕಿದ್ದೀರಿ ಮುಂತಾದ ತಗಾದೆಗಳು ಈಗ ಶುರುವಾಗಬಹುದು 🙂
Sedition charge
s ಬಾರದೇ ಇದ್ದರೆ ಅದು ನಿಮ್ಮ ಪುಣ್ಯ 🙂