ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಈ ಮನುಷ್ಯ ಇರದೇ ಹೋಗಿದ್ರೆ?!’ – ವಿದ್ಯಾಶಂಕರ ಹರಪನಹಳ್ಳಿ ಕವನ

ವಿದ್ಯಾಶಂಕರ ಹರಪನಹಳ್ಳಿ


ಜಗತ್ತಿನ ತುಂಬಾ ಕೀಟ,ಹುಳಹುಪ್ಪಡಿ, ಸೊಳ್ಳೆ
ಕಪ್ಪೆ ಇರದೇ ಹೋಗಿದ್ರೆ
ಜಗತ್ತಿನ ತುಂಬಾ ವಟರ್ ವಟರ್ ಕಪ್ಪೆ
ಹಾವು ಇರದೇ ಹೋಗಿದ್ರೆ
ಜಗತ್ತಿನ ತುಂಬಾ ಬುಸ್ಸ್ ಬುಸ್ಸ್ ಹಾವು
ಹದ್ದು ಇರದೇ ಹೋಗಿದ್ರೆ
ಮಗುವೇ ಇದುವೇ ಆಹಾರ ಸರಪಳಿ
ಇದನ್ನ ನೀ ತಿಳಿ
 
ಅಪ್ಪಾ ಅಪ್ಪಾ,
ಜಗತ್ತಲ್ಲಿ ಮನುಷ್ಯರು ಇರದೇ ಹೋಗಿದ್ರೆ?
ಜಗತ್ತಿನ ತುಂಬಾ ಹಸಿರು, ನೆಮ್ಮದಿಯ ಪ್ರಾಣಿಗಳು
ಈ ಮನುಷ್ಯ ಇರದೇ ಹೋಗಿದ್ರೆ!
 

‍ಲೇಖಕರು G

30 November, 2014

5 Comments

  1. vasudeva nadig

    wah!

  2. ಗಣನಾಥ. ಮೈಸೂರು

    ಆಶಯ ಚೆನ್ನಾಗಿದೆ. ಆದರೆ ಏಕೋ ವಾಚ್ಯವಾಯಿತೆನ್ನಿಸಿತು.

    • vidyashankar

      ಇದು ಮಕ್ಕಳಿಗಾಗಿ ಬರೆದ ಪದ್ಯ ಹಾಗಾಗಿ ಸಂಭಾಷಣೆ ಶೈಲಿಯಲ್ಲಿ ಬರೆದಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

  3. ಅಮರದೀಪ್.ಪಿ.ಎಸ್.

    ಚೆನ್ನಾಗಿದೆ….. ಮಗು ಕೇಳುವ ಪ್ರಶ್ನೆ……ಮತ್ತು ಉತ್ತರ?

  4. sindhu

    tumba chenaagide.
    ee manushya irade hogidre zoo irtaa irlilla. elru avravara jaagadalle sukhavaagi irta idru.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading