ಮೇವು
– ಅಕ್ಕಿಮಂಗಲ ಮಂಜುನಾಥ

ದನಗಳಿಗೆ ಒಂದು ಹೊರೆ
ಆಡು ಕುರಿಗಳಿಗೆ ಒಂದೆರಡು ಕೆ.ಜಿ.
ಕೋಳಿ ಕೊಕ್ಕ ಹಕ್ಕಿ ಪಿಕ್ಕಗಳಿಗೆ ಹಿಡಿ-
ಯಾದರೆ ಮಸ್ತು
ಅಷ್ಟು ತಿಂದರೆ ಸುಸ್ತು.
ಆದರೆ-
ಈ ನರನಿಗೆ
ಆಲದ ಮರದಷ್ಟೂ ಸಾಲದು
ಅಜೀರ್ಣವೇ ಆಗದು
ಉದಾಹರಣೆಗೆ
ನಮ್ಮ ನಾಯಕರನ್ನೇ ನೋಡಿ:
ಮೇವು ಬೇಕು ಅಂತ-ದನದ ಬೂಸ, ಶಾಲೆಯ ಬಿಸಿಯೂಟ, ಬಡವರ ರೇಷನ್ನು
ಛಾಪಾ ಕಾಗದ, ಯೂರಿಯ, ಬಾಟ್ಲಿಂಗ್ , ಬೋಫೋರ್ಸ, ಗಣಿ ….
ಇತ್ಯಾದಿ ಇತ್ಯಾದಿ…
ಹಗರಣ ಮಾಡಿ ತಿಂದರೂ
ಹಳ್ಳಿಯಿಂದ ದಿಳ್ಳಿವರೆಗೆ ರಸ್ತೆ-
ಬೆಟ್ಟ- ಗುಡ್ಡ, ಕಾಡು -ಮೇಡು, ಯಂತ್ರ-ಗಿಂತ್ರ
ತಂತ್ರ ಮಾಡಿ ತಿಂದರೂ
ಸಾಲದು ಅಂಥ
ಚಂದ್ರನ ಮನೆಗೂ ಕನ್ನ ಹಾಕಿ
ನೆಗೆದಿದ್ದಾನೆ-ಮಂಗಳನ ಅಂಗಳಕ್ಕೆ
ಹೊಕ್ಕು-ನಕ್ಕಿ ಮುಕ್ಕಲಿಕ್ಕೆ.





Wow!!!!
Todays Mirror Reflection of our Society’s situation.
Yella Maayavo…………………