ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಕವಿತೆ ಬರೆದ ಕವಿಯ ಹುಡುಕಲಾಗುತ್ತಿದೆ..

ಆಜಾದಿ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಕು..ಮಧುಸೂದನನಾಯರ್ ರಂಗೇನಹಳ್ಳಿ

 

ಆಜಾದಿ ಬೇಕೆಂದೆ.

ಯಾವುದರಿಂದ  ಎಂದು ಕೇಳಿದ್ದರೆ ಹೇಳಬಹುದಿತ್ತು:

ನಿಮ್ಮ ಸನಾತನ ಧರ್ಮದ ವರ್ಣವ್ಯವಸ್ಥೆಯಿಂದ

ನಿಮ್ಮ ಜಾತಿ ವೈಷಮ್ಯದ ಕ್ರೂರತೆಯಿಂದ

artನಿಮ್ಮ ಸಿರಿವಂತಿಕೆಯ ತೆವಲಿನ  ಶೋಷಣೆಯಿಂದ

ನಿಮ್ಮ ಅಧಿಕಾರದ ಅಮಲಿನಿಂದ ನಡೆಸುವ ದಬ್ಬಾಳಿಕೆಯಿಂದ

ನಿಮ್ಮ  ದೊಡ್ಡಸ್ತಿಕೆಯ ದೌರ್ಜನ್ಯದಿಂದ.

ಅವರದೇನನ್ನೂ ಕೇಳಲಿಲ್ಲ

ಮರುಮಾತಾಡದೆ ದೇಶದ್ರೋಹಿಯ ಪಟ್ಟ ಕಟ್ಟಿದರು

ಸಾರ್ವಜನಿಕ ವೃತ್ತದಲಿ ನೇಣುಗಂಬವನೊಂದ ನೆಟ್ಟು

ನಮ್ಮನ್ನೆಲ್ಲ ಸರತಿಯ ಸಾಲಲ್ಲಿ ನಿಲ್ಲಿಸಿದರು.

 

ಎಲ್ಲ ಮುಗಿದಾದ ಮೇಲೆ-

ನ್ಯಾಯಾಧೀಶರೊಬ್ಬರನ್ನು ಕರೆತಂದು ವಿಚಾರಣೆ ಮಾಡಿಸಲಾಯಿತು.

ಶಿಕ್ಷೆಯನ್ನು ಊರ್ಜಿತಗೊಳಿಸಲಾಗಿದೆಯೆಂದು ಷರಾ ಬರೆಯಲಾಯಿತು

ಇದೀಗ ಊರ  ನೆತ್ತಿಯ ತುಂಬಾ ಹದ್ದುಗಳ ಗಸ್ತು…

ಈಗ ದೇಶಭಕ್ತಿಗೆ ಹೊಸ ವ್ಯಾಖ್ಯಾನ ಬರೆಯಲಾಗಿದೆ

ಪ್ರಶ್ನೆಗಳನ್ನು ನಿಷೇಧಿಸಲಾಗಿದೆ.

 

ಈ ಕವಿತೆ ಬರೆದ ಕವಿಯ ಹುಡುಕಲಾಗುತ್ತಿದೆ

ಹುಡುಕಿಕೊಡುವವರಿಗೆ ಬಹುಮಾನ ಘೋಷಿಸಲಾಗಿದೆ.

 

 

‍ಲೇಖಕರು Admin

2 September, 2016

2 Comments

  1. Sangeeta Kalmane

    ಕವಿತೆಗಿಲ್ಲ ಜಾತಿ
    ಕವಿತೆಗಿಲ್ಲ ಮತ
    ಕವಿತೆಗಿಲ್ಲ ಊರು
    ಕವಿತೆಗಿಲ್ಲ ಕೇರಿ
    ಕವಿತೆಗಿಲ್ಲ ಭೇದ
    ಕವಿತೆಗೆ ಬೇಕಿಲ್ಲ ಪ್ರಶಸ್ತಿ
    ಕೇವಲ ಕವಿತೆಗೆ ಬೇಕು
    ಎಲ್ಲರಿಂದ ಮನ್ನಣೆ
    ಅದಕೆ ಕವಿ ಎಂದೆಂದಿಗೂ
    ಭಾವನೆಗಳ ಬಿತ್ತಿ
    ಆಗುವ ಸದಾ
    ನಿಶ್ರಾಳ, ನಿಶ್ಚಿಂತ.

  2. ನಾಗರಾಜ್ ಹರಪನಹಳ್ಳಿ

    ಸರ್ವಾಧಿಕಾರಿ ಮನಸಿನ ವರ್ತನೆಯನ್ನು ಕವಿತೆ ಶಾಂತ ಸ್ವರೂಪದಲ್ಲಿ ದಾಖಲಿಸುತ್ತಲೇ ಸಹೃದ ಓದುಗನಲ್ಲಿ ಬಂಡಾಯ ಹುಟ್ಟಿಸುತ್ತದೆ ಕಾವ್ಯ. ಕವಿ ಎಂದೂ ಶಾಂತನಲ್ಲ. ಆತ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ನಿರಂತರವಾಗಿ ಸೆಣಸಾಡುತ್ತಲೇ ಇರುತ್ತಾನೆ. ಬರೆಯುತ್ತಾನೆ. ಅಂಥವರಲ್ಲಿ ನಮ್ಮ ಮಧುಸೂದನ ನಾಯರ್ ಒಬ್ಬರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading