ಈ ಕಲಾ ಕೇಂದ್ರಕ್ಕೆ ನೀವು ಒಮ್ಮೆ ಭೇಟಿ ಕೊಡಿ…

ಗಣಪತಿ ಅಗ್ನಿಹೋತ್ರಿ

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಕಲಾಪ್ರದರ್ಶನ ಆಗಬೇಕು ಎಂಬ ಸರಳ ಕಲ್ಪನೆ ಅನೇಕ ಕಲಾವಿದೆಯರ ಚಿತ್ರಕಲಾ ಹಾಗೂ ಶಿಲ್ಪಕಲಾ ವಿಭಾಗದ ಮೇಲಿನ ಹಿಡಿತ ಎಷ್ಟಿದೆ ಎಂಬ ಸತ್ಯ ಅನಾವರಣ ಆಗಲು ಸಾಧ್ಯವಾಗಿದೆ.

ಹಾಗಂತ ಇದು ಬಹುದೊಡ್ಡ ಸಾಧನೆ ಎನ್ನುವ ಭ್ರಮೆ ನನಗಂತೂ ಇಲ್ಲ. ಹಿಂದೆಯೂ ಇಂಥ ಪ್ರಯತ್ನಗಳು ನಡೆದಿವೆ. ಹಾಗಾಗಿ ಹೊಸತೆನ್ನುವ ಭಾವ ನನ್ನದಲ್ಲ. ಹತ್ತರ ಜೊತೆ ಹನ್ನೊಂದು ಆಗಿರಬಹುದು. ಆದರೆ, ಸದ್ಭಳಕೆ ಮಾಡಿಕೊಳ್ಳುವ ಆಸಕ್ತರಿಗೆ ಹೊಸ ಬಾಗಿಲು ತೆರೆದುಕೊಂಡಿದೆ. ಹಾಗಾಗಿ ಕೆಲ ಸಂಗತಿಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ.

ಖುಷಿಕೊಡುತ್ತಿರುವ ಸಂಗತಿ ಏನೆಂದರೆ ಕನ್ನಡನಾಡಿನ ಕಲಾ ಸಮುದಾಯಕ್ಕೆ ಇನ್ನೊಂದು ಗ್ಯಾಲರಿ ಲಭ್ಯವಾಗಿದೆ. ಪ್ರಯೋಜನ ಪಡೆದುಕೊಂಡರೆ ಇಲ್ಲಿಯೂ ಇನ್ನು ನಮ್ಮ ನೆಲದ, ಹೊರ ರಾಜ್ಯ-ದೇಶದವರ ಕಲಾಕೃತಿಗಳನ್ನು ನೋಡಲು ಸಾಧ್ಯ.

ಈಗ ಆಯೋಜನೆಗೊಂಡಿರುವ ಕಲಾಪ್ರದರ್ಶನ ಈ ಸ್ಥಳದಲ್ಲಿ ಮೊದಲು. ಈ ಹಿಂದೆ ಸಂಗ್ರಹದ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿದ್ದವು. ಈ ನಿಟ್ಟಿನಲ್ಲಿ ಈ ಪ್ರಯತ್ನ ಗಮನಾರ್ಹ. ಖಂಡಿತವಾಗಿ ನಿರ್ದೇಶಕರು ಹಾಗೂ ಸಂಬಂಧಿಸಿದ ಸಿಬ್ಬಂದಿ ಅಭಿನಂದನಾರ್ಹರು. ಈ ವಿಚಾರದಲ್ಲಿ ಯಾವ ಅತಿಶಯೋಕ್ತಿ ಇಲ್ಲ.

ಕಲಾಪ್ರದರ್ಶನದಲ್ಲಿ ಪಾಲ್ಗೊಂಡಿರುವ ಕೆಲ ಯುವ ಕಲಾವಿದೆಯರಿಗೆ ಇದೊಂದು ಮೈಲಿಗಲ್ಲು ಆಗಿದೆ ಎನ್ನುವುದನ್ನು ಹೇಳಿಕೊಳ್ಳಲು ಖುಷಿಯಾಗುತ್ತಿದೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನಷ್ಟು ಕಲಾಕೃತಿಗಳ ರಚನೆಗೆ ಸ್ಫೂರ್ತಿ ದೊರೆತಿದೆ. ಕಲಾ ಪಯಣದ ಹಾದಿಯಲ್ಲಿ ಬೆಳಕು ಕಾಣಿಸಿದೆ. ಆ ಬೆಳಕು ಈ ಪ್ರದರ್ಶನದ ಮೂಲಕ ಪ್ರಜ್ವಲಿಸಲಿ.

ಸಾಧಸರಣ ಅಳತೆಯ 40 ರಿಂದ 50 ಕಲಾಕೃತಿಗಳನ್ನು ಈ ಗ್ಯಾಲರಿಯಲ್ಲಿ ಪ್ರದರ್ಶಿಸಲು ಸಾಧ್ಯವಿದೆ. ಸುಸಜ್ಜಿತ ಲೈಟ್ ಗಳ ವ್ಯವಸ್ಥೆ ಇದೆ.

ಬಹಳ ಮುಖ್ಯವಾಗಿ IGNCA ಒಂದು ಅಧ್ಯಯನ ಕೇಂದ್ರ. ಇಲ್ಲಿ ಕಲೆಯ ಕುರಿತಾದ ಅಧ್ಯಯನ, ಸಂಶೋಧನೆಗೆ ಅವಕಾಶವಿದೆ. ಇಂದಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಆಗಲಿದೆ. ಈ ಮಜಲಿನಲ್ಲಿಯೂ ಕಲಾ ಚಟುವಟಿಕೆಗೆ ಮುಂದಾಗಬಹುದು. ಈಗಿನ ನಿರ್ದೇಶಕರು ಇದಕ್ಕೆ ಮುಕ್ತ ಆಹ್ವಾನ ಕೂಡ ನೀಡಿದ್ದಾರೆ.

ಪರವಾನಿಗೆ ಪಡೆದುಕೊಳ್ಳುವ ಮೂಲಕ ಅಧ್ಯಯನದಲ್ಲಿ ತೊಡಗಿಕೊಳ್ಳಬಹುದು. ಸಾಕಷ್ಟು ಪುಸ್ತಕಗಳ ಸಂಗ್ರಹ ಇಲ್ಲಿದೆ. ಲೈಬ್ರರಿ, ಗ್ಯಾಲರಿ ಹಾಗೂ ಕಲಾಚಟುವಟಿಕೆಯ ವಿಶಾಲ ತಾಣ ಇದು.

ಪ್ರದರ್ಶನದ ಸಂದರ್ಭದಲ್ಲೇ ಕಲೆ, ಕಲಾ ಸಾಹಿತ್ಯದ ಕುರಿತು ಸಂವಾದಕ್ಕೂ 100+ ಆಸನ ವ್ಯವಸ್ಥೆಯ ಚಿಕ್ಕದಾದ ಒಂದು conference hall ಇಲ್ಲಿದೆ.

ಇಷ್ಟೆಲ್ಲಾ ಇರುವ ಈ ಕಲಾ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿ ಬರಬಹುದಲ್ಲವೇ? ಬಿಡುವು ಮಾಡ್ಕೊಳ್ಳಿ. ಕುಟುಂಬ ಸಮೇತ ಒಂದಿಷ್ಟು ಸಮಯ ಕಳೆದು ಬನ್ನಿ.

‍ಲೇಖಕರು avadhi

March 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: