ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ಹಾಸಿಗೆಯಲ್ಲೊಂದು ಕಸೂತಿಯಂತೆ…

ಕೊನೆಯ ಕ್ಷಣ 

ಪ್ರಜ್ಞಾ ಮತ್ತೀಹಳ್ಳಿ

ಅವಳೀಗ ಇಂಚಿಂಚಾಗಿ ಮುಳುಗುತ್ತಿದ್ದಾಳೆ

ಬದುಕಿಡೀ ಭಾರೀ

ಹಡಗುಗಳ ಹತ್ತಿ

ದೂರ ತೀರದ ಮಿಂಚು ರೇಖೆಗಳ

ಬಲೆ ಬೀಸಿ ಬೀಸಿ

ಆಳದಾಳದ ಮಂಜೂಷ

ಮೇಲೆತ್ತಿ ಮುತ್ತಿನ ಬೊಗಸೆ ತುಂಬಿದ್ದಳು

ಕುಸಿವ ಮರಳ ಕಣಗಳನೂ

ಕೂಡಿಸಿ ಅಂದಣದರಮನೆ ಕಟ್ಟಿ

ಅಲೆಗಳ ಕಿವಿ ಹಿಂಡಿ

ಅಂಗಳ ಕಾಯಲಿಟ್ಟುಕೊಂಡಿದ್ದಳು

ತಿದ್ದಿ ತೀಡಿ ತೀಡಿ ತಿದ್ದಿ

ಒಪ್ಪಕ್ಕೆ ಓರಣ ಕಲಿಸಿ

ತೋರಣದ ಹೊಳಪಲ್ಲಿ

ಹಣತೆ ಹಚ್ಚಿದಳು

ಈಗ ಹಾಸಿಗೆಯಲ್ಲೊಂದು

ಕಸೂತಿಯಂತೆ

ಕಿಸೆಯಲ್ಲಿಡಲು ಮರೆತ

ಕರ್ಚೀಫಿನಂತೆ

ಮಾತೆಲ್ಲವ ಕಡಲ ಗಾಳಿಗೆ

ಉಯಿಲು ಬರೆದಿಟ್ಟಾದಂತೆ

ಒರೆಸುವ ಗಾಳಿಯ

ಸುಖಕ್ಕೆ ಮೈ

ಕೊಟ್ಟು ಇಷ್ಟಿಷ್ಟೇ

ತೊಟ್ಟಿಕ್ಕುವ

ಮಳೆನಿಂತ ಮರದಂತೆ

ಇರಚಲು ಹನಿಗಳು

ಅಳಿಸುವ ಪುಟ್ಟನ ಪಾಟಿಯ

ಒಂದೊಂದೇ ಅಕ್ಷರಗಳಂತೆ

 

‍ಲೇಖಕರು G

6 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading