ಅಪ್ಪ
– ಜ ನಾ ತೇಜಶ್ರೀ
ಚಿಕ್ಕವಳಿರುವಾಗ ಅನ್ನಿಸುತ್ತಿತ್ತು
ಅಪ್ಪ ಎಷ್ಟು ದೊಡ್ಡವ ಅಂತ
ದಿನಗಳೆದು ನಾನೂ ಸ್ವಲ್ಪ
ಎತ್ತರ ದಪ್ಪವಾದಂತೆ
ಅಪ್ಪ ಅಷ್ಟೇನೂ ದೊಡ್ಡವನಲ್ಲ ಅನ್ನಿಸಿದ್ದು ಹೌದು
ಇನ್ನೊಂದಷ್ಟು ದಿನ ಕಳೆದು, ಈಗ
ನಾನು ಅವನಷ್ಟೇ ಎತ್ತರಕ್ಕೆ ಬೆಳೆದಿದ್ದೇನೆ
ಈಗ ನಿಜವಾಗಿ ಅನ್ನಿಸುತ್ತಿದೆ
ಅಪ್ಪ ದೊಡ್ಡವ ಅಂತ.







ಸರಳ ಅಷ್ಟೇ ಸಂಕೀರ್ಣ. ಪದ್ಯ ಬಗೆಯುವ ಬಗೆ ಚೆನ್ನಾಗಿದೆ, ಇನ್ನೂ ಪರಿಷ್ಕರಿಸಬಹುದಿತ್ತು
Thanks you sir. Tejashree
ಚೆನ್ನಾಗಿದೆ 🙂
appana kurithagi odi thumba dinagalagiddavu.thanks thejashri
same feeling here
Good one