ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ಆ ಘಟ್ಟ ಏರಿ ಬಂದೆ..

ಮಾಲತಿ ಗೋರೆಬೈಲ್

ಈಗ ಆ ಘಟ್ಟ ಏರಿ ಬಂದೆ,
ನವ ಸಂವತ್ಸರವನೇ
ಕಂಡಂತೆ
ಗಾಳಿ ಆಲಂಗಿಸಿಬಿಟ್ಟಿತು..

ದಾರಿ ಬದಲಿಸಿ ದೂರ ಸಾಗಿದೆ,
ನಲಿವು ಕೆನೆದುಬಿಟ್ಟಿತು..

ಒಂಟಿಯಾನಕ್ಕೆ
ಗಿಡ ಮರಗಳ ಸಲುಗೆ ಕೇಳಿದೆ
ಸುಮಗಳ ಮಳೆಯೇ
ತಂಪಾಗಿಸಿ
ಸೋಬಾನೆ ಹಾಡ
ಕಟ್ಟಿತು..

ನೋಡು,
ನಿನ್ನ ಒಲವ
ಹೆಸರ ಹೇಳಿ ಉಸಿರ ತೂಗುವ
ಆ ವಲ್ಲಿಗಳ ತಳುಕು
ಬಿಗಿಯಾಗಿದೆ.
ಧರೆ ಇಳಿಯುವ ಸಮಯಕ್ಕಾದರೂ
ನುಚ್ಚಿನ ಕಲ್ಲು ಕರಗಿ
ಒಡಲು ತುಂಬಬಹುದು..

ಬಾ ಇಲ್ಲಿ ಬೇಕಾದಷ್ಟು
ಜಾಗವಿದೆ,
ಕೆರೆ ಕುಂಟೆ ಸಲಿಲದ ಹರಿವಿನಲಿ
ಲೀಲಾಜಾಲವಾಗಿ
ಈಜಿಬಿಡೋಣ

ಚಂದ್ರ ತಾರೆಯರೂ
ತೋರಣ ಕಟ್ಟಬಹುದು….

‍ಲೇಖಕರು avadhi

7 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading