ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಇಷ್ಟಕ್ಕೂ ಹುಷಾರಾಗಿರುವುದು ಎಂದರೇನು..?’ – ಸುಧಾ ಚಿದಾನಂದ ಗೌಡ

ಅವಳ ಅನುಭವದಲ್ಲಿ ನರಳುವ ನಾನು…..!

ಸುಧಾ ಚಿದಾನಂದ ಗೌಡ

ನಿಮ್ಮ ಅನುಮತಿಯಿಲ್ಲದೆ ನಿಮ್ಮನ್ನು ಯಾರೂ ಆಳಲಾರರು ಎಂದಿದ್ದಾರೆ ಅಬ್ರಹಾಂ ಲಿಂಕನ್.

ಆದರೆ ದೌರ್ಜನ್ಯದ ಆಳ್ವಿಕೆ ಯಾರ ಅನುಮತಿಗೆ ತಾನೇ ಕಾಯುತ್ತದೆ?

ನಿರಂಕುಶಪ್ರಭುತ್ವದಲ್ಲಿ ಅನುಮತಿಯಿಲ್ಲದೆ ಶರೀರಗಳನ್ನು ದುಡಿಸಿಕೊಳ್ಳಬಹುದು, ವಶದಲ್ಲಿಟ್ಟುಕೊಳ್ಳಬಹುದು, ಎಲ್ಲ ಹಕ್ಕುಗಳನ್ನು ಕಿತ್ತುಕೊಳ್ಳಬಹುದು, ವಿರುದ್ಧಲಿಂಗಿಯಾದರೆ ವಾಂಛೆಗೆ ಬಳಸಿಕೊಳ್ಳಲೂಬಹುದು. ಮನಸ್ಸು ಇಲ್ಲಿ ಸಂಬಂಧವೇ ಇಲ್ಲದ ವಸ್ತು!

ಅತ್ಯಾಚಾರದ ವಿಷಯದಲ್ಲಷ್ಟೆ ಅಲ್ಲ, ಕೌಟುಂಬಿಕ, ವ್ಯಾವಹಾರಿಕ, ಬೌದ್ಧಿಕ, ಭಾವುಕಸಂಗತಿಗಳಲ್ಲಿ ಕೂಡಾ ಪುರುಷ ನಿರಂಕುಶವಾಗಿ ವತರ್ಿಸುತ್ತಿರುವುದು ಸಂಬಂಧಗಳನ್ನು ಮತ್ತು ಕಾನೂನನ್ನು ಮರುಚಿಂತನೆಗೆ ಒಳಪಡಿಸುವ ಅಗತ್ಯವನ್ನು ಒತ್ತಿಹೇಳುತ್ತಿವೆ. ಬಹುತೇಕ ಘಟನೆಗಳು ನಡೆದು, ಎಷ್ಟೊ ಸಮಯದ ಬಳಿಕ ಬೆಳಕಿಗೆ ಬರುವುದು ಪ್ರತಿಭಟನೆಯ ಹಿಂಜರಿಕೆ ಮತ್ತು ಕೊರತೆಯನ್ನೇ ತೋರಿಸುತ್ತಿವೆ. ಇದಕ್ಕೆ ಎಲ್ಲೋ ಒಂದೆಡೆ ಸ್ವಯಂಕೃತ ಅಪರಾದವು ಕಾರಣವಾಗಿ ಕಂಡುಬರುವುದುಂಟು. ಪ್ರತಿಭಟನೆಗೆ ಸ್ತ್ರೀಸಹಜಸ್ವಭಾವವೂ ಕಾರಣವೆನ್ನಲು ಸುಶಿಕ್ಷಿತರ ಉದಾಹರಣೆಗಳನ್ನೇ ಕೊಡಬಹುದು.

ಹೊಸಪೇಟೆ ಆಕಾಶವಾಣಿಗೆ ಕಾಲೇಜಿನ ವಿದ್ಯಾರ್ಥಿನಿಯರ ನಾಟಕ ಆಯ್ಕೆಯಾಗಿತ್ತು. ಅವರನ್ನು ಕರೆದೊಯ್ಯುವ ಜವಾಬ್ದಾರಿ ಹೊತ್ತು ಹೊರಟಿದ್ದೆ ಆ ದಿನ. ಹತ್ತುಜನರನ್ನು ಸರಳವಾಗಿ ಬಸ್ನಲ್ಲಿ ಕರೆದುಕೊಂಡು ಹೋಗಿಬಿಡೋದು ಎಂದು ನಿರ್ಧಾರವಾಗಿ ಬೆಳಬೆಳಗ್ಗೆ ಹೊರಟೆ. ಕಾಲುಗಂಟೆಯಾಗಿರಲಿಲ್ಲ. ಒತ್ತಿ ಕುಳಿತುಕೊಂಡಿದ್ದ ಗಗನಾ ಮಿಸುಕಾಡಿದಳು. ಮೊದಲಿಗೆ ಅಷ್ಟು ಅರಿವಿಗೆ ಬರಲಿಲ್ಲ. ನಂತರ ನನಗೇ ಹಿಂಭಾಗಕ್ಕೇನೊ ತಗುಲಿದ ಅನುಭವವಾಗಿ ಮುಜುಗರ……

ಮತ್ತೆ ಗಗನಾಳೊಂದಿಗೆ ಚಿತ್ರಾಳ ಕದಲಿಕೆಯೂ ಈಗ ಸ್ಪಷ್ಟವಾಯಿತು..

ಹಿಂತಿರುಗಿ ನೋಡಿದರೆನೀಟಾಗಿ ಸುಶಿಕ್ಷತನಂತೆ ಕಾಣುವ ಗಂಡಸು ಕಿಟಕಿಯಾಚೆ ದಿಟ್ಟಿಸುತ್ತಾ ಏನು ಆಗಿಲ್ಲವೆಂಬ ಮುಖಭಾವದಲ್ಲಿದ್ದ. ಅವನ ಪಕ್ಕದ ಸೀಟಿನಲ್ಲಿ ಇನ್ನೊಬ್ಬ… ಕೆಲನಿಮಿಷ ಸುಮ್ಮನೆ ಕುಳಿತೆ ಕುದಿಯುತ್ತಾ… ಇಂಥಾ ಅನುಭವ ಬಹುಹಿಂದೆ ಬಸ್ ಪ್ರಯಾಣದಲ್ಲಿ ಆದ ನೆನಪು ಮರುಕಳಿಸಿ ತಳಮಳ. ಪಕ್ಕದಲ್ಲಿನ ವಿದ್ಯಾರ್ಥಿನಿಯರ ಒದ್ದಾಟ ಜಾಸ್ತಿಯಾದದ್ದು ಅರಿವಿಗೆ ಬಂದು..

Whats it? ಎಂದೆ, ಗೊತ್ತಿದ್ದೂ!

ಸಂಕೋಚದ ಮುಖ ಮಾಡಿದ ಅವರಿಬ್ಬರದೂ ಏನಿಲ್ಲ ಮಿಸ್..ಏನಿಲ್ಲ ಮಿಸ್..ಎಂಬ ಗೊಂದಲದ ಉತ್ತರ….

ತಡೆಯಲಾಗಲಿಲ್ಲ.ಎದ್ದು ಈಚೆ ಬಂದು,ಸೀದಾ ಹಿಂದಕ್ಕೆ ತಿರುಗಿ ಆದಷ್ಟೂ ಗಟ್ಟಿಯಾದ ದನಿಯಲ್ಲಿ ಆ ಗಂಡಸರಿಬ್ಬರನ್ನು ಉದ್ದೇಶಿಸಿ, Whats your problem? ಎಂದೆ.

ಅದನ್ನವರು ನಿರೀಕ್ಷಿಸಿರಲಿಲ್ಲವೇನೋ.. ತಬ್ಬಿಬ್ಬಾಗಿ ಏನ್ರೀ..?? ಎಂದು ತಾವೂ ಗದರಿಸುತ್ತಾ, ಜಗಳಕ್ಕೇ ಸಿದ್ಧವಾದರು.

ನನಗೆ ಸಿಟ್ಟೇರತೊಡಗಿತ್ತು

ಸರ್ಯಾಗಿ ನಡ್ಕೊಳ್ಳೋದನ್ನು ಕಲೀರಿ…ನಾಚ್ಕೆಯಾಗೋದಿಲ್ಲೇನು..?ಎಂದೇನೋ ಬೈದೆ…ಕೋಪದಲ್ಲಿ ಬೈಗುಳಗಳೂ ಸರಿಯಾಗಿ ನೆನಪಿಗೆ ಬಂದಿರಲಿಲ್ಲ.. ಅಷ್ಟರಲ್ಲಿ ಸುತ್ತಮುತ್ತಲಿದ್ದವರು, ಕಂಡಕ್ಟರನೂ ಏನಾಯ್ತುರೀ.. ಎಂದು ಮುಖ ನೋಡತೊಡಗಿದರು. ಏನೆಂದು ಹೇಳುವುದು.. …?

ಸಂಕೋಚದಿಂದಲೇ ಇವರಿಬ್ರು misbehave ಮಾಡ್ತಿದಾರೆ… ಎಂದೆ.

ಏಯ್ಇಳಿಸಿಬಿಡ್ತೀನಿ ನೋಡ್ರೀ ಎಂದು ಕಂಡಕ್ಟರ್ ಅವರಿಬ್ಬರಿಗೂ ಆವಾಜ್ ಹಾಕಿದ್ದಕ್ಕೆ ಆ ಪ್ರಕರಣ ಅಲ್ಲಿಗೆ ಮುಗಿದಿತ್ತಾದರೂ ಗಗನಾ ಮತ್ತು ಚಿತ್ರಾ ಗೆಲುವಾಗಲು ಬಹುಹೊತ್ತೆ ಹಿಡಿಯಿತು. ಮುಖ್ಯ ಪಾತ್ರದಲ್ಲಿದ್ದ ಇಬ್ಬರಿಗೂ ಆ ದಿನದ ರೆಕಾರ್ಡಿಂಗ್ನಲ್ಲಿ ಸರಿಯಾಗಿ ಮಾತಾಡಲೇ ಆಗಲಿಲ್ಲ..ನಾನೆಷ್ಟೆ ಪ್ರಯತ್ನಿಸಿದರೂ..ಸಹಜವಾಗಿರಲು ನನಗೂ ಸಾಧ್ಯವಾಗಿರಲಿಲ್ಲ.. ಬಹುಷ: ಇದು ಅತಿಚಿಕ್ಕ ಉದಾಹರಣೆ. ಆದರೆ ಇಷ್ಟುಮಾತ್ರದ ಘಟನೆ ಕೂಡ ಹೆಣ್ಣುಮಕ್ಕಳ ಮನಸಿನಲ್ಲಿ ಉಂಟುಮಾಡುವ ಆಘಾತ, ಖಿನ್ನತೆಗಳಿಗೆ ಮುಲಾಮೇ ಇಲ್ಲ.

ಈ ಹಂತದಲ್ಲಿ ದುರ್ನಡತೆಗಳನ್ನು ತಡೆಯಲು ಆಡಳಿತ ಮತ್ತು ಶಿಕ್ಷಣ ಎರಡೂ ವಿಫಲವಾಗಿರುವುದರಿಂದಲೇ ಈ ದಿನ ಬಸ್ನಲ್ಲಿ ಗ್ಯಾಂಗ್ ರೇಪ್ನಂಥಾ ಊಹಿಸಲಸಾಧ್ಯವಾದ ಕ್ರೂರ ಕೃತ್ಯಗಳು ನಡೆಯಲು ಅನುವು ಮಾಡಿಕೊಟ್ಟಂತಾಗಿದೆ.

ಮನಸ್ಸನ್ನು ಇವೊತ್ತಿಗೂ ಕೊರೆಯುತ್ತಿರುವುದು ಕಂಡಕ್ಟರ್ ಒಬ್ಬನನ್ನು ಹೊರತುಪಡಿಸಿ ಮತ್ಯಾರು ಹೆಚ್ಚು ಮಾತಾಡಲಿಲ್ಲ ಎಂಬುದು. ಕೆಲವರಂತೂ ಇದೆಲ್ಲ ಗಂಡಸರಿಗೆ ಮಾಮೂಲು.. ಹೆಂಗಸರೆ ಹುಷಾರಾಗಿರಬೇಕು ಎಂಬಂತೆ ನಡೆದುಕೊಂಡಿದ್ದು.

ಇಷ್ಟಕ್ಕೂ ಹುಷಾರಾಗಿರುವುದು ಎಂದರೇನು..?

ನಮ್ಮನ್ನು ನಾವು ನಾಲ್ಕು ಗೋಡೆಯ ಮಧ್ಯೆ ಬಂಧಿಸಿಟ್ಟುಕೊಳ್ಳುವುದಾ?

ಹೊರಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಳ್ಳುವುದಾ?

ಎಲ್ಲ ಅವಕಾಶಗಳನ್ನು ಬಿಟ್ಟುಕೊಟ್ಟು, ತಮ್ಮದಲ್ಲದ ತಪ್ಪಿಗೆ ತಾವೇ ಶಿಕ್ಷೆ ವಿಧಿಸಿಕೊಳ್ಳುವುದಾ?

ಗೋಡೆಗಳ ಮಧ್ಯೆಯಾದರೂ ಮಹಿಳೆ ಎಲ್ಲಿ ಸುರಕ್ಷಿತವಾಗಿದ್ದಾಳೆ? ಮನೆಯೊಳಗಿನ ದೌರ್ಜನ್ಯಗಳಿಗೆ ಕಡಿವಾಣವಿದೆಯೇ? ಇಲ್ಲವಲ್ಲ..! ತಂದೆ, ಗಂಡ, ಸೋದರ, ಕೊನೆಗೆ ತಾತನಾಗಿ ಕೂಡ ಕಾಡಿದ ಉದಾಹರಣೆಗಳೇ ದು:ಸ್ವಪ್ನವಾಗಿ ಕಾಡುತ್ತವೆ..ಇವೆಲ್ಲವುಗಳ ಮಧ್ಯೆಯೂ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿರುವವರಿಗೆ ಸಾಮಾಜಿಕ ಕಳಂಕಗಳ ಭಯ, ಯಾರೇನೆನ್ನುತ್ತಾರೊ ಎಂಬ ಭಯ, ಸಹಾನುಭೂತಿಯ ಅಗತ್ಯವಿರುವಾಗಲು ನಿನ್ನದೆ ತಪ್ಪು ಎಂಬಂಥಾ ವಾತಾವರಣ..

ಈ ಪೂರ್ವಾಗ್ರಹಗಳೆಲ್ಲ ಬದಲಾಗುವ ಹೊತ್ತಿಗೆ ಎಷ್ಟು ಯುವತಿಯರು ಬಲಿಯಾಗಬೇಕೋ. . .

ಸ್ತ್ರೀಸಹಜ ಸ್ವಭಾವ ಎಂಬುದೂ ಈಗ ವಿಶ್ಲೇಷéಣೆಗೊಳಪಡಬೇಕಾದ ಸಂಗತಿಯೇ ಎನಿಸುತ್ತದೆ.

ಬಿಹಾರದ ಈ ಘಟನೆಯ ವರದಿ ನೆನಪಾಗುತ್ತಿದೆ..

ಹದಿನೈದು ವರ್ಷದ ಬಾಲಿಕೆಯೊಬ್ಬಳನ್ನು ಅವಳ ತಂದೆ ಒಂದು ವರ್ಷದಿಂದಲೂ ಅತ್ಯಾಚಾರವೆಸಗುತ್ತಿದ್ದ. ಆ ಬಾಲಕಿ ಕೊನೆಗೂ ಬಾಯಿಬಿಟ್ಟಿದ್ದಕ್ಕೆ ಕಾರಣವೇನೆಂದರೆ ಆ ತಂದೆ ಇನ್ನೊಬ್ಬ ಮಗಳನ್ನೂ ಅದೇರೀತಿ ಬಲಾತ್ಕರಿಸಲು ಯತ್ನಿಸಿದಾಗ..! ತಂಗಿಗೂ ತನ್ನ ಸ್ಥಿತಿ ಬರಬಾರದೆಂಬ ಉದ್ದೇಶಕ್ಕೆ ಅವಳು ಪೊಲೀಸ್ ಸ್ಟéೇಷನ್ನಲ್ಲಿ ದೂರು ದಾಖಲಿಸಿದಳೇ ಹೊರತು ತಾನಾಗಿ ಅಲ್ಲ. ಆ ಇಬ್ಬರೂ ಮಕ್ಕಳ ತಾಯಿ ಆರ್ಥಿಕ ಪರಾವಲಂಬಿಯಾಗಿ ಪತಿ ಮಾಡುವ ಅನಾಚಾರಕ್ಕೆ ಸಾಕ್ಷಿಯಾಗಿ, ಬದುಕುತ್ತಿದ್ದಳು. ಇದು ಸ್ವಯಂಕೃತ ಅಪರಾಧವಲ್ಲದೇ ಇನ್ನೇನು? ಅದೆಂಥ ಪರಿಸ್ಥಿತಿಯಲ್ಲಾದರೂ ಎದುರಿಸಿ ನಡೆವುದು ಹೇಳಿದಷ್ಟು ಸುಲಭವಲ್ಲ, ನಿಜ. ಆದರೆ ಅತ್ಯಾಚಾರ ಸಹಿಸುವುದಕ್ಕಿಂತ ಎದುರಿಸುವುದೇ ಸಹ್ಯವಲ್ಲವೇ? ಇಲ್ಲಿ ಸಂಕೋಚ, ಭಯ, ಹಿಂಜರಿಕೆಗಳು ಇರಬಾರದ ಸ್ವಭಾವವೆಂದೇ ತೋರುತ್ತವೆ.

ತನಗೆ ನೋವಾದಾಗ ಸಹಿಸಿಕೊಂಡ ಅವಳು ತಂಗಿಗೆ ಹಾಗಾಗುತ್ತದೆಂದು ತಿಳಿದಾಗ ಮಾತ್ರ ತಿರುಗಿಬಿದ್ದಿದ್ದು ಸಹೃದಯತೆಯೇ. ಆ ಸ್ಪಂದಿಸುವ ಗುಣದಿಂದಾಗಿಯೇ ಅತ್ಯಾಚಾರಗಳು ನಡೆದಾಗಲೆಲ್ಲ ಸ್ತ್ರೀಲೋಕ ಎಚ್ಚೆತ್ತು ಪ್ರತಿಭಟಿಸುತ್ತದೆ ಎನ್ನಬಹುದು. ಅವಳ ನರಳಿಕೆ ಕೇವಲ ಅವಳದಾಗಿರುವುದಿಲ್ಲ. ಅದು ಇತರೆಲ್ಲರದೂ ಆಗುತ್ತದೆ. ಕಿರುಕುಳದ ಅನುಭವಗಳು ನನಗೆ ಆಗಿಲ್ಲವೆಂದರೆ ಒಂಟಿಯಾಗಿ ನಾನು ಹೊರಹೋಗುವ ಸಂದರ್ಭಗಳು ಬರಲಿಲ್ಲವೆಂಬುದೇ ಕಾರಣ. ಕೂಡುಕುಂಟುಂಬದಲ್ಲಿ ಹುಟ್ಟಿಬೆಳೆದ ನನಗೆ ಹೊರಹೋಗುವಾಗಲೆಲ್ಲ ಯಾರಾದರೊಬ್ಬರು ಜೊತೆಯಾಗುತ್ತಿದ್ದರು. ಸಿನೆಮಾ, ಹೋಟೆಲ್, ದೇವಸ್ಥಾನ ಎಲ್ಲಿ ಹೋದರೂ ಮನೆಯವರೆಲ್ಲ ಒಟ್ಟಾಗಿ ಗುಂಪಾಗಿಯೇ ಹೋಗುತ್ತಿದ್ದೆವು. ಓದುವಾಗಲೂ ಕಾಲೇಜ್ ಪಕ್ಕದಲ್ಲೇ ಹಾಸ್ಟೆಲ್ ಹೊರಹೋಗುವ ಪ್ರಮೇಯವೇ ಇರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಹೀಗಿಲ್ಲ.

ಉದ್ಯೋಗಕ್ಕಾಗಿ ತುಡಿಯುವ, ಸ್ವಾವಲಂಬನೆಗಾಗಿ ಮಿಡಿಯುವ ಮನ ಮಹಿಳೆಯನ್ನು ಇಂದು ಹೊರಹೋಗುವ ದಾರಿಯಲ್ಲಿ ತಂದು ನಿಲ್ಲಿಸಿದೆ. ಸದಾಕಾಲವೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿಲ್ಲ. ಹಾಗೇ ಅಗತ್ಯವೆನಿಸಿದಾಗ ಜೊತೆಗಿರಲು ಯಾರಾದರೊಬ್ಬರು ಬೇಕೆಂದು ನಿರೀಕ್ಷಿಸುವುದು ಹಾಸ್ಯಾಸ್ಪದವೇ. ಹಾಗಾಗಿ ಒಂಟಿಯಾಗಿ ಪ್ರಯಾಣ ಮುಂದುವರಿಸುವ ಅಗತ್ಯವಿದ್ದೇ ಇದೆ. ಆ ಛಾತಿ ಅವರಿಗೆ ಇದ್ದೇ ಇದೆ. ಆದರೆ ಮಧ್ಯದಲ್ಲಿನ ಗ್ಯಾಂಗ್ ರೇಪ್ನಂಥಾ ಪ್ರಕರಣಗಳು ಥಂಡಾ ಹೊಡೆಸಿಬಿಡುತ್ತವೆ.

ಆಗೆಲ್ಲ ಹಾಗೆ ಕುಸಿದು ಬೀಳಲಿದ್ದವರನ್ನು ಸಂಭಾಳಿಸುವ ಕೆಲಸ ಸಮಾಜ ತಾನೇ ಮಾಡಬೇಕು ಕಣ್ಣು, ಕರುಳುಗಳಿರುವ ಪ್ರಭುತ್ವವು ಅತ್ಯಾಚಾರದಂತಹ ಭೀಕರ ಸನ್ನಿವೇಶ ಬಾರದಿರುವಂತೆಯೇ ಸರ್ಕಾರ ನೋಡಿಕೊಳ್ಳಬಹುದು, ಬಿಗಿಕಾನೂನುಗಳಿಂದ. ನೈತಿಕಶಿಕ್ಷಣದಿಂದ. ಇದು ಸಾಧ್ಯವಾದಾಗ, ಅವರ ನೋವಿಗೆ ನಾವು ನರಳುತ್ತೇವೆಂಬ ಭಾವನೆಯೇ ಆಪ್ತವಾದೀತು. ಹಾಗಾದಾಗ ಸಾವಿನಿಂದ ಪಾರಾಗಿ ಬದುಕುಳಿಯಬಹುದು. ಕ್ರೌರ್ಯಕ್ಕೆ ಧಿಕ್ಕಾರ ಹೇಳಬೇಕಾಗಿರುವುದು ಖಚಿತ.

 

‍ಲೇಖಕರು G

25 December, 2012

7 Comments

  1. bharathi

    lekhana chennagi moodide sudha …

  2. Chinmay Mathapati

    ಉತ್ಕುಷ್ಟ ಲೇಖನ..ಹೌದು!! ನೀವ್ಹೇಳಿದ ಹಾಗೆ ಇವತ್ತು ಮಹಿಳೆಗೆ ನಾಲ್ಕು ಗೋಡೆಯ ನಡುವೆಯೂ ಭದ್ರತೆ ಇಲ್ಲವಾಗಿದೆ. ನಮ್ಮ ಸಮಾಜ ಎಂತೆಂಥ ಪಾಪಗಳಿಂದ ತುಂಬಿಹೋಗುತ್ತಿದೆ, ನೆನೆದರೆ ಭಯವಾಗುತ್ತೆ. ಸುಂದರ ಸಮಾಜ ನಿರ್ಮಾಣ ವಾಗಲಿ ಮಹಿಳೆ ನಿರ್ಭೀತಿಯ ಬದುಕನು ಕಾಣುವಂತಾಗಲಿ…………….

  3. Anuradha.rao

    ಕ್ರೌರ್ಯಕ್ಕೆ ಧಿಕ್ಕಾರ ಹೇಳಬೇಕಾಗಿರುವುದು ಖಚಿತ…ಲೇಖನ ಚೆನ್ನಾಗಿದೆ .

  4. D.Ravivarma

    ಉದ್ಯೋಗಕ್ಕಾಗಿ ತುಡಿಯುವ, ಸ್ವಾವಲಂಬನೆಗಾಗಿ ಮಿಡಿಯುವ ಮನ ಮಹಿಳೆಯನ್ನು ಇಂದು ಹೊರಹೋಗುವ ದಾರಿಯಲ್ಲಿ ತಂದು ನಿಲ್ಲಿಸಿದೆ. ಸದಾಕಾಲವೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿಲ್ಲ. ಹಾಗೇ ಅಗತ್ಯವೆನಿಸಿದಾಗ ಜೊತೆಗಿರಲು ಯಾರಾದರೊಬ್ಬರು ಬೇಕೆಂದು ನಿರೀಕ್ಷಿಸುವುದು ಹಾಸ್ಯಾಸ್ಪದವೇ. ಹಾಗಾಗಿ ಒಂಟಿಯಾಗಿ ಪ್ರಯಾಣ ಮುಂದುವರಿಸುವ ಅಗತ್ಯವಿದ್ದೇ ಇದೆ. ಆ ಛಾತಿ ಅವರಿಗೆ ಇದ್ದೇ ಇದೆ. ಆದರೆ ಮಧ್ಯದಲ್ಲಿನ ಗ್ಯಾಂಗ್ ರೇಪ್ನಂಥಾ ಪ್ರಕರಣಗಳು ಥಂಡಾ ಹೊಡೆಸಿಬಿಡುತ್ತವೆ.
    ಆಗೆಲ್ಲ ಹಾಗೆ ಕುಸಿದು ಬೀಳಲಿದ್ದವರನ್ನು ಸಂಭಾಳಿಸುವ ಕೆಲಸ ಸಮಾಜ ತಾನೇ ಮಾಡಬೇಕು ಕಣ್ಣು, ಕರುಳುಗಳಿರುವ ಪ್ರಭುತ್ವವು ಅತ್ಯಾಚಾರದಂತಹ ಭೀಕರ ಸನ್ನಿವೇಶ ಬಾರದಿರುವಂತೆಯೇ ಸರ್ಕಾರ ನೋಡಿಕೊಳ್ಳಬಹುದು, ಬಿಗಿಕಾನೂನುಗಳಿಂದ. ನೈತಿಕಶಿಕ್ಷಣದಿಂದ. ಇದು ಸಾಧ್ಯವಾದಾಗ, ಅವರ ನೋವಿಗೆ ನಾವು ನರಳುತ್ತೇವೆಂಬ ಭಾವನೆಯೇ ಆಪ್ತವಾದೀತು. ಹಾಗಾದಾಗ ಸಾವಿನಿಂದ ಪಾರಾಗಿ ಬದುಕುಳಿಯಬಹುದು. ಕ್ರೌರ್ಯಕ್ಕೆ ಧಿಕ್ಕಾರ ಹೇಳಬೇಕಾಗಿರುವುದು ಖಚಿತ……
    dhikkara heluvudara jotege shaala collegjugalalli samaajada janaralli ii baage saarvajinka echhara mudisabekaagide kuda…

    • D.Ravivarma

      nimma baraha nijakku tumbaa ghambira yochanege hachhuvantide… ii nittinalli khan baddateyannu naavella mechhalebeku….

  5. natarajkangod

    ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರ ನಮ್ಮ ದೇಶದಲ್ಲಿ ಇತ್ತೀಚಿಗೆ ಮಿತಿ ಮೀರಿದೆ.”ಮಿತಿ ಮೀರಿದೆ” ಅನ್ನುವ ಶಬ್ದ ಅದಕ್ಕೆ ಅನ್ವರ್ಥವಲ್ಲ. ಅದು ಆಗಲೇ ಬಾರದು.ಏಕೆಂದರೆ ಹೆಣ್ಣು ಅಂದರೆ ಭೋಗದ ವಸ್ಥುವಲ್ಲ.ಆಕೆ “ಜನನಿ” ಭೂಮಿತೂಕದ ಸಮಾನ. ಎಂಬುದು ನಮ್ಮ ಸಂಸ್ಕೃತಿ. ಆಕೆಯ ಮೇಲೆ ನಡೆಯುತ್ತಿರುವ ಅತ್ತ್ಯಾಚಾರ ನಮ್ಮ ನೈತಿಕತೆಯ ಸಂಪೂರ್ಣ ಅಧಃಪತನದ ಸಂಕೇತ.
    ಹೆಣ್ಣು ತನ್ನನ್ನು ತಾನು ಅರ್ಪಿಸಿಕೊಳ್ಳುವುದು ಮಾನಸಿಕವಾಗಿ,ಆತ್ಮಪೂರ್ವಕವಾಗಿ, ಹಾಗೂ ನಂತರ ದೈಹಿಕವಾಗಿ, ಈ ಮೂರರಲ್ಲಿ ಯಾವುದು ಕಡಿಮೆಯಾದರೂ ಕೂಡ, ಆಕೆ ಯಾವುದೋ ಒಂದು ರೀತಿಯ ಅಸಹಾಯಕತೆಯಿಂದ,ಅಥವ ಗಂಡಸರ ಅತ್ಯಾಚಾರದಿಂದಲೇ, ಎಂದು ಅರ್ಥ.ಅದು ಕೇವಲ ಕಾಮುಕತೆ ಹಾಗೂ ವಿಕ್ಷಿಪ್ತತೆ ಮಾತ್ರವಲ್ಲದೆ, ಬೇರೆ ಏನೂ ಅಲ್ಲ.ಹಾಗಾಗಿಯೇ ನಮ್ಮ ಶಾಸ್ತ್ರಗ್ರಂಥಗಳಲ್ಲ್ಲಿಹೆಣ್ಣನ್ನು ಎಲ್ಲಿ ಪೂಜನೀಯ ಭಾವನೆಯಿಂದಾ ನೋಡುವುದಿಲ್ಲವೋ ಅಲ್ಲಿ ಸರ್ವನಾಶ ಖಂಡಿತ, ಎನ್ನುವ ಮಾತಿದೆ.ನಮ್ಮ ದೇಶದಂಥ ಸುಸಂಸ್ಕೃತ ದೇಶದಲ್ಲಿ,ಪರನಾರಿಯರನ್ನು ಸೋದರಿ,ತಾಯಿಯ ರೀತಿಯಲ್ಲಿ ಕಾಣುವಂಥಹ ಸಂಸ್ಕೃತಿ ಇರುವ ನಮ್ಮ ದೇಶದಲ್ಲಿ ಕೂಡ, ದುರದೃಷ್ಟವಶಾತ್, ಈ ರೀತಿಯ ನಡುವಳಿಕೆ ಕಾಣುತ್ತಿದೆ.ಇದು ನಮ್ಮ ಇಡೀ ದೇಶಕ್ಕೆ ಹಾಗೂ ನಮ್ಮ ಸಂಸ್ಕೃತಿಗೆ ಮಾರಕವಾಗಿ ಪರಿಣಮಿಸುವುದರಲ್ಲಿ, ಯಾವುದೇ ಸಂಶಯವೂ ಉಳಿದಿಲ್ಲ.ಇದನ್ನು ತೀವ್ರ ವಿಷಾದದಿಂದಾ ಒಪ್ಪಿಕೊಳ್ಳಲೇ ಬೇಕಾಗಿದೆ.

  6. usha

    Monne kelasada mele China hogidda nanna magalu tirugi Bangalore bandaaga raatri 2 ghante. Avalu manege baruvva varege jeevadalii jeevavirallilla..

    Are we progressing or going back to medival times.. endenisuttade manavana krorya nodi..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading