ಇದು ಭೋಪಾಲ್ ವಿಷಾನಿಲ ದುರಂತ

ಪರಮೇಶ್ವರ ಗುರುಸ್ವಾಮಿ

02.12.1984ರ ಮಧ್ಯರಾತ್ರಿ ಕಳೆಯತ್ತಿದ್ದ ಹಾಗೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿರುವ ಯೂನಿಯನ್ ಕಾರ್ಬೈಡ್ (ಎವರೆಡಿ ಬ್ಯಾಟರಿಯ ತಯಾರಕರೂ ಹೌದು) ಫ್ಯಾಕ್ಟರಿಯಿಂದ MIC ವಿಷಾನಿಲ ಸೋರುವುದಕ್ಕೆ ಆರಂಭವಾಯಿತು.

ಇದು ಇಂದಿಗೂ ಪ್ರಪಂಚದ ಅತ್ಯಂತ ಕೆಟ್ಟ ಕೈಗಾರಿಕಾ ದುರಂತ ಎಂದೆ ಪರಿಗಣಿಸಲಾಗಿದೆ. ಆ ಹೊತ್ತು ಬೆಳಗಿನ ಜಾವದವರೆಗೆ ರೈಲ್ವೆ ನಿಲ್ದಾಣ ಸಹ ಸೇರಿ ವಿಷಾನಿಲದ ಪರಿಣಾಮವಾಗಿ ಸತ್ತವರು ಅಧಿಕೃತವಾಗಿ ಹತ್ತಿರ ಹತ್ತಿರ 4,000 ಜನ. ಸರ್ಕಾರೇತರ ಅಧ್ಯಯನ ವರದಿಗಳ ಪ್ರಕಾರ 16,000 ಜನ.

ದೇಶದೆಲ್ಲ ಕಡೆಗಳಿಂದ ವೈದ್ಯಕೀಯ ಸೇವೆ, ಇನ್ನಿತರ ಸಹಾಯಗಳನ್ನು ಸಂತ್ರಸ್ತರಿಗೆ ಒದಗಿಸಲು ಜನ ಬಂದಿದ್ದರು. ನಾವು ಐದು ಜನ ಹೋಗಿದ್ದೆವು. ನಾನು, ಕುಮಾರ್, ಮಂಜುಳ, ರಂಗರಾಜ್ ಮತ್ತು ಜ್ಯೋತಿಕಾ.

ಇಲ್ಲಿನ ಜಾತಾ ಮೆರವಣಿಗೆಯ ಚಿತ್ರಗಳು ನಾ ತೆಗೆದದ್ದು. ಬೆಂಗಳೂರಿಗೆ ಹಿಂತಿರುಗಿದ ಮೇಲೆ ಒಂದು ಪ಼ೋಟೊ ಪ್ರದರ್ಶನವನ್ನು ಹಮ್ಮಿಕೊಂಡೆವು. ಇದರ ಚಾಲಕಶಕ್ತಿ ಪಾದರಸದಂತಿದ್ದ ಗೆಳೆಯ (ಈಗವನು ಇಲ್ಲ) ಕುಮಾರ್.

ಇಂಡಿಯಾ ಟುಡೆ ಮ್ಯಾಗಜೀನ್ ನ ಮುಖಪುಟದಲ್ಲಿ ರಘುರಾಯ್ ಅವರು ತೆಗೆದಿದ್ದ ಮುಖ ಮಾತ್ರ ಕಾಣುತ್ತಿರುವ ಹೂಳಲ್ಪಡುತ್ತಿರುವ ಮಗುವಿನ ಚಿತ್ರ ಪ್ರಕಟವಾಗಿತ್ತು.

ಬಳಸಿಕೊಳ್ಳಬಹು
ಎಂದು ಕೇಳಿದರೆ ಅದರ ಜೊತೆಗೆ ಇನ್ನೊಂದಷ್ಟು ನೆಗೆಟಿವ್ ಪ್ರತಿಗಳನ್ನು ಕಳಿಸಿದರು. ಆ ಪ಼ೋಟೋಗಳೂ ಇಲ್ಲಿವೆ.

ಬೆಂಗಳೂರಿನಲ್ಲಿ ಸುಮಾರು 30 ಪ್ರದರ್ಶನಗಳನ್ನು ಮಾಡಿದೆವು. ನಂತರ ದಕ್ಷಿಣ ರಾಜ್ಯಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರದರ್ಶನಗೊಂಡಿತು.







ಅದ್ಭುತ ಸ್ಟಿಲ್ ಡಾಕ್ಯುಮೆಂಟರಿ ಥರಾ ಇವೆ ಈ ಚಿತ್ರಗಳು.
ಥ್ಯಾಂಕ್ಯೂ ವೆರಿ ಮಚ್- ಅಪರೂಪದ ಮನಕಲಕುವ ಫೊಟೋಗಳಿಗಾಗಿ.