
ಪ್ರಕಾಶ ಕಡಮೆ
ಸುವರ್ಣ ಮಹೋತ್ಸವ
ನನಗೀಗ ದಾಟಿದೆ ಐವತ್ತು
ಇದು ಆತ್ಮಾವಲೋಕನದ ಹೊತ್ತು
ಗುರಿ ತಲುಪಿದ ದಾರಿ
ಸಾಧನೆಯ ಪ್ರಗತಿ ಹರಿಗರಿ
ಅಮ್ಮ ಕೇಳಿದರೆ ನಂಬುವುದಿಲ್ಲ
‘ಅವರೂ ಹೀಗೇ ಇದ್ದರು’
ಮೊನ್ನೆ ಮೊನ್ನೆಯ ತನಕ
ಕಣ್ಣಂಚಿನಲಿ ನೀರು

ಇವಳೋ
ಮೀಸೆಯಲ್ಲಿ ಹಣ್ಣಾದ
ಕೂದಲ ಹುಡುಕುತ್ತ
ಮುಖವೆಲ್ಲಾ ಕೆಂಪಾಗಿಸಿ
‘ನನಗೆ ಹಾಗೆ ಅನ್ನಿಸಿಯೇ ಇಲ್ಲ’
ಸೂಸುವಳು ಹುಸಿನಗೆ
‘ಮೈ ಡ್ಯಾಡಿ ಸ್ಟ್ರಾಂಗೆಸ್ಟ್’
ಬೂಸ್ಟ್ ಜಾಹಿರಾತಿನಂತೆ
ಮಕ್ಕಳ ಘೋಷಣೆ
ಐವತ್ತರ ವೃದ್ಧ
ವೃತ್ತಪತ್ರಿಕೆಯ ವರದಿ
ಆಗಲೇ ನನ್ನೊಳಗಿನ
ವೃದ್ಧ ಜಾಗ್ರತ
ಯಾರೋ ಅಂದರು
‘ಬಾಪೂ ಸ್ವಾಂತಂತ್ರ್ಯ ಚಳುವಳಿಗೆ
ದುಮುಕಿದ್ದೇ ಐವತ್ತರ ನಂತರ’

ಎದುರಾಎದುರೇ ಎಪ್ಪತ್ತೈದರವರಿಗೆ
ಅಧಿಕಾರ ಕಂಡಾಗ
ಇನ್ನೂ ಕಾಲು ಶತಕದ
ಕನಸು ಜೀವಂತ
ವಾಸ್ತವ-ಕನಸುಗಳ ನಡುವೆ
ಭೂತ-ಭವಿಷ್ಯದ ದಾರಿಗೆ
ಸಂಭ್ರಮವಿಲ್ಲದ ಸುವರ್ಣ ಮಹೋತ್ಸವ






ಐವತ್ತರಲ್ಲಿ ಒಮ್ಮೆ ಆತ್ಮಾವಲೋಕನದ ಚಿತ್ರಣ..
ತುಂಬಾ ಸೊಗಸಾಗಿದೆ