ಇವತ್ತಿಗೆ ಎಂ ವ್ಯಾಸ ಇಲ್ಲವಾಗಿ 14 ವರುಷಗಳು…

ಅರ್ಧ ಕಥಾನಕ’ ಕಾಡುವ ವ್ಯಾಸ

ಜಯರಾಮಾಚಾರಿ

ನಾನು ಮೊದಲ ಸಲ ವ್ಯಾಸರ ಪುಸ್ತಕ ಕೈಗೆತ್ತಿಕ್ಕೊಂಡ ವೇಳೆ ನನಗೆ ಸುಡು ಸುಡು ಕೆಂಡದಂತ ಜ್ವರ. ವ್ಯಾಸರ ಬಗ್ಗೆ ಕನ್ನಡ ಸಾಹಿತ್ಯ ಲೋಕ ಅಷ್ಟಾಗಿ ತಲೆಕೆಡಿಸಿಕೊಳ್ಳದ ಕಾರಣ ಎಷ್ಟೊ ಸಾಹಿತ್ಯಾಸಕ್ತರಿಗೆ ವ್ಯಾಸರ ಪರಿಚಯವಿಲ್ಲ. ಹಾಯ್ ಬೆಂಗಳೂರಲ್ಲಿ ಒಮ್ಮೆ ವ್ಯಾಸ ಅವರು ಬೆಳಗೆರೆಗೆ ಬರೆದ ಪತ್ರ ಪ್ರಕಟವಾಗಿತ್ತು. ಅದು ಎಷ್ಚರ ಮಟ್ಟಿಗೆ intense ಆಗಿತ್ತೆಂದರೆ ಯಾರಪ್ಪ ಈ ವ್ಯಾಸ ಅನ್ನಿಸಿತ್ತು.

ನಾನು ಜ್ವರದಲ್ಲಿ ಕುದಿಯುವಾಗ ವ್ಯಾಸರ ಕೆಂಡ ಓದಲು ಸುರು ಮಾಡಿದೆ ನಾನು ಓದಿದ ಮೊದಲ ವ್ಯಾಸರ ಪುಸ್ತಕ. ಹಿಡಿದ ಜ್ವರವೋ ಇಲ್ಲ ಅವರ ಎದೆಗೆ ಹಾಕುವ ಬರಹವೋ ಶ್ಯೊ ! ದೇವ ಎಂಬ ಪದಗಳೋ ಒಟ್ನಲ್ಲಿ ಆ ಕತೆಗಳ ಓದಿದ ಮೇಲೆ ಒಟ್ಟಾರೆ ಕತೆಯ ಬಗ್ಗೆ ಸಾಹಿತ್ಯದ ಬಗ್ಗೆ ಬದುಕಿನ ಬಗ್ಗೆ ಸಂಬಂಧಗಳ ಬಗ್ಗೆ ಸಾವಿನ ಬಗ್ಗೆ ಎಲ್ಲವೂ ಬೇರೆಯದಾಗಿ ಕಂಡುಕೊಂಡೆ ಇವತ್ತಿಗೂ ನಾನು ವ್ಯಾಸರ ಗುಂಗಿನಿಂದ ತಪ್ಪಿಸಿಕೊಂಡಿಲ್ಲ. ಇಡೀ ಕನ್ನಡ ಕತೆಗಳದೇ ಒಂದು ತೂಕವಾದರೇ ವ್ಯಾಸರ ಕತೆಗಳ ತೂಕವೇ ಬೇರೆಯದು. ಹೌದು ಬೇರೆಯವರ with all due respect ನಾನು ಈ ಮಾತು ಧೈರ್ಯವಾಗಿ ಹೇಳಬಲ್ಲೆ. ಅವರಂತೆ ಬರೆಯಲು ಸಾಧ್ಯವೇ ಇಲ್ಲ. ಅವರ ಕತೆಗಳನ್ನು ಮೆಲು ದನಿಯಲ್ಲಷ್ಟೇ ಓದಬೇಕು ಯಾಕೆಂದರೆ ಅವರ ಕತೆಗಳೆಂದು ವಾಚ್ಯವಲ್ಲ.

ಅರ್ಧ ಕಥಾನಕ ವ್ಯಾಸರಂತ ವ್ಯಾಸರನ್ನು ಅವರ ಮಗ ತೇಜಸ್ವಿ ಹಿಡಿದು ನಮಗೆ ಪರಿಚಯಿಸುವ ಪ್ರಯತ್ನ. ಪೂರ್ತ ವ್ಯಾಸರು ಸಿಗದಿದ್ದರೂ ನಾವು ಕೇಳಿಕೊಂಡ ನಾವು ನೋಡಬೇಕೆಂದುಕೊಂಡ ವ್ಯಾಸರು ಸಿಗ್ತಾರೆ ಸಿಗುತ್ತಲೇ ಕಣ್ಮರೆಯಾಗುತ್ತಾರೆ ಕತೆಗಾರ ವ್ಯಾಸ ಒಬ್ಬ ಅಪ್ಪನಾಗಿ, ಅಪ್ಪ ಸತ್ತ ಮೇಲೆ ಬೆಳೆದ ಮಗನಾಗಿ, ದ್ವೇಷಕ್ಕೆ ಪ್ರೀತಿ ಎರೆದವನರಾಗಿ, ಹೀಗೆ ಎಲ್ಲ ಪಾತ್ರಗಳಲ್ಲೂ ಅವರು ಅವರಾಗಿ ಉಳಿದ ವ್ಯಾಸರನ್ನು ತೇಜಸ್ವಿ ಪರಿಚಯಿಸಿದ್ದಾರೆ ಇದು ಕೇವಲ ವ್ಯಾಸರ ಕತಾನಕವಲ್ಲ ಜೊತೆಗೆ ತೇಜಸ್ವಿಯ ಕತಾನಕ ಕೂಡ ಉಂಟು.

ಈ ಕೃತಿ ವಿಶಿಷ್ಟವಾದುದು. ಈ ಕೃತಿ ಕೊಟ್ಟ ವ್ಯಾಸರ ಮಗ ತೇಜಸ್ವಿಗೂ ಬರೆದ ಅನುಪಮಾ ಪ್ರಸಾದ್ ಗೂ ಥ್ಯಾಂಕ್ಯೂ

‍ಲೇಖಕರು Admin

July 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: