ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಳೆ ಎದೆ ಹಗುರಾಗಿದೆ…

ಮಾಲತಿ ಗೋರೆಬೈಲ್

ಸಿಕ್ಕಾಯಿತು ಆಗಲೇ…ಈ ಸಂಜೆಯ ಮೋಡಬಿಕ್ಕಳಿಸುವ ಸೂಚನೆ,
ಚದುರಿದ ಬೆಳ್ಳಿ ಮೇಘಗಳ
ಅದರ ಚುಂಬಿಸಿ 
ಇರುಳ ಸೇರಿ ತಂಪಾಗುವ 
ಇಂಗಿತ

ಭೂರಮೆಯ  ಸೆರಗು ಹಿಡಿದುಒಲವ ಉಸುರಿ ಹಸಿರಾಗುವ
ಹುಚ್ಚು ಹುರುಪು
ಧ್ರುವತಾರೆಯ ಸಲುಗೆ ಬೆಸೆದು
ಬೆಳಕ ನೀಡುವ ಮಾತು,
ಮುತ್ತು ನೀಡಿ ಹಗುರಾಗುತುತ್ತಾಗುವ ಹಂಬಲ

ಬೈಗು ನಸುಗೆಂಪಾಗಿ ತಂಪಾಗಿತುಸು ಸೊಂಪಾಗಿ
ಇಳೆಯ ಅಪ್ಪುವ ಉಮೇದು
ಇನ್ನು ತಡೆಯುವುದಿಲ್ಲ,
ಎಲ್ಲವೂ ಒಪ್ಪಾಗಿ ಸುರಿದಂತೆ ಒಲವು
ತಂಗಾಳಿಯಲ್ಲಿ ಬೀಸಿಬಂದ ಕಿರುನಗೆಯ ಒನಪು
ಅಳುವ ಒರೆಸಿ ಮೌನ ಸೀಳುವ
ಸೆಳಕೊಂದು ಸುಳಿದಾಡುತ್ತಿದೆ,

ದಾಹ ತೀರುವ ಭೂರಮೆಯ
ಮಾಟ ನುಲಿದು ಹುಯಿಲೆಬ್ಬಿಸಿದೆ
ಅಲ್ಲಿ ಬಾನು ಉಮ್ಮಳಿಸಿ ಬಿಕ್ಕುತಿದೆ,
ಇಳೆಎದೆ ಹರವಾಗಿ ಹಗುರಾಗಿದೆ!

‍ಲೇಖಕರು Admin

13 March, 2022

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading