ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಳೆಗೆ ಬಂದಿಳಿದ ಓ ಚೈತ್ರವೇ ಬಾ ಒಳಗೆ, ಬೇವಿನಲಿ ಒಂದಿಷ್ಟು ಬೆಲ್ಲ ಕಲಸು..

su ram ekkundi

ಸು ರಂ ಎಕ್ಕುಂಡಿ

‘ಒಳಗೆ ಬಾ ಚೈತ್ರ!’ ಕವಿತೆಯ ಆಯ್ದ ಭಾಗ 

 

ಕರಗವನು ಹೊತ್ತಂತೆ ಹೊತ್ತಿದೆ ವಸಂತವಿದು
ಚಿಗುರಿನಾಸೆಯ ಜೀವ ಜಡಗಳಲ್ಲಿ
tree songರಸಯಾತ್ರೆ ಕೈಗೊಂಡು ದಣಿದಂಥ ದುಂಬಿಗಳು
ಕುಡಿದಿಹವು ಪುಷ್ಪರಸ ಕೊಡಗಳಲ್ಲಿ
ಪರಿಮಳದ ಪಲ್ಲಕ್ಕಿಯಲ್ಲಿ ಚೈತ್ರ ಬಂದಿರಲು
ಮನದ ಮಾಮರದಲ್ಲಿ ಸುರಿದ ಹೂವು
ನಾಗಸ್ವರವ ನುಡಿಸಿ ತಂಬೆಲರು ಸಾಗಿರಲು
ಇನ್ನೆಲ್ಲಿ ಉಳಿಯುವುದು ಹಳೆಯ ನೋವು

ಪಾಲ್ಗುಣದ ಉರಿಯಲ್ಲಿ ಕಹಿಕಷ್ಟಗಳು ಬೂದಿ
ಕಾಡಿನಲಿ ಕಣಿವೆಯಲಿ ಏನು ಹರ್ಷ
ವಸಂತವು ಕಾಲಿಡಲು ಹೂವುಗಳು ಹಾಡುಗಳು
ಕಾಯಲಿಲ್ಲವೇ ಇದಕೆ ಒಂದು ವರ್ಷ ?

ಇಳೆಗೆ ಬಂದಿಳಿದ ಓ ಚೈತ್ರವೇ  ಬಾ ಒಳಗೆ
ಬೇವಿನಲಿ ಒಂದಿಷ್ಟು ಬೆಲ್ಲ ಕಲಸು
ರೇಶಿಮೆಯ ರೆಕ್ಕೆಗಳ ಬಿಡಿಸಿದಾ ಪತಂಗವೇ
ಎಲ್ಲಿಹುದು ನಾವೆಲ್ಲಾ ಕಂಡ ಕನಸು

ಎಲೆಯ ಮರೆಯಲ್ಲಿ ಕುಹೂ ಕುಹೂ ನೀಲ ಬೆಟ್ಟಗಳು
ಹೂಬಿಸಿಲ ಕಾಸುತಿವೆ ಕಣಿವೆ ಹಾಡು
ಹುಲ್ಲಿನಲಿ ಬೆಟ್ಟದಲಿ ಹೊಸತನವ ನೀಡಿರುವ
ಚಿತ್ರವೇ ನಮಗಿಷ್ಟು ಸುಖವ ನೀಡು

‍ಲೇಖಕರು admin

8 April, 2016

1 Comment

  1. ಚಂದ್ರಪ್ರಭಾ ಬಿ.

    ಸು ರಂ ರವರ ಮಾಗಿದ ಅನುಭವ, ರಸಪೂರ್ಣ ಬಣ್ಣನೆ, ಶಬ್ದಗಳಲ್ಲಿ ಚಿತ್ರಿಸಿದ ವರ್ಣರಂಜಿತ ವಸಂತಕಾವ್ಯಕ್ಕೆ ಇದೋ ನಮ್ಮ ನಮನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading