ವಿ.ಎನ್.ಲಕ್ಷ್ಮೀನಾರಾಯಣ
on 6 January, 2014 at 9:01 PM
ಕವಿಸಾಮ್ರಾಟರು, ಕವಿಚಕ್ರವರ್ತಿಗಳು ಇಂಗ್ಲೆಂಡಿನ ರಾಣಿಯಂತೆಯೇ ಅರಸೊತ್ತಿಗೆಯ ಪಳೆಯುಳಿಕೆಗಳು.ಕುಗ್ರಾಮಗಳ ಜಗದ್ಗರುಗಳ ಕಿರೀಟಧಾರಣೆ, ಅಡ್ಡಪಲ್ಲಕ್ಕಿ ಉತ್ಸವಗಳು ಆಗೊಮ್ಮೆ ಈಗೊಮ್ಮೆ ಟೀಕೆಗೆ ಒಳಗಾಗುತ್ತವೆಯಾದರೂ ನಮ್ಮಲ್ಲಿ ಈಗಲೂ ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುವ ದೈವಭಕ್ತ-ರಾಜಭಕ್ತ ಸಾಹಿತಿ-ಬುದ್ಧಿಜೀವಿಗಳೇ ಅಧಿಕ ಸಂಖ್ಯೆಯಲ್ಲಿ ಇರುವುದು. ಸಾಮಾನ್ಯ ದಿನಗಳಲ್ಲಿನ ಅವರ ಪೋಷಾಕು,ಆಹಾರ-ವಿಹಾರಗಳಲ್ಲಿ ಪ್ರಜಾತಾಂತ್ರಿಕ ರೂಪವಿದ್ದರೂ ವಿಶೇಷದಿನಗಳು,ಉತ್ಸವ, ಅಭಿನಂದನೆ,ಸಭೆ-ಸಮಾರಂಭಗಳಲ್ಲಿ ದೀಪ ಬೆಳಗಿಸುವುದರಿಂದ ಹಿಡಿದು ಹಾರ, ತುರಾಯಿ, ಪೇಟ,ಶಾಲು,ಅಭಿನಂದನೆ, ಭಾಷಣ-ಬಿನ್ನವತ್ತಳೆ-ಸನ್ಮಾನ ಪತ್ರ ಎಲ್ಲದರಲ್ಲಿಯೂ ದೈವಭಕ್ತಿ-ರಾಜಭಕ್ತಿಗಳೇ ವಿಜೃಂಭಿಸುವುದು. ಸಮಯಾನುಸಾರ ಜಿಎಸ್ಎಸ್ ಇವೆಲ್ಲವುಗಳನ್ನು ಬಳಸಿಕೊಂಡವರೇ ಆದರೂ ಕವನದಲ್ಲಾದರೂ ‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?’ಎಂದು ಕೇಳಿದರೆಂಬುದೇ ಅವರ ಹೆಗ್ಗಳಿಕೆ ಇರಬಹುದು. ಆಧುನಿಕ ಶಕ್ತಿಕೇಂದ್ರಗಳಾದ ವ್ಯಾಪಾರಿಗಳು ದಯಪಾಲಿಸುವ ‘ಜ್ಞಾನಪೀಠ’-‘ಸರಸ್ವತಿ ಸಮ್ಮಾನ’ ಗಳಿಂದ ಕನ್ನಡ ಸಾಹಿತ್ಯದ ಹೆಗ್ಗಳಿಕೆಯನ್ನು ಗುರುತಿಸುವುದು, ಅದೇ ಹೊತ್ತಿನಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ರಥ-ಸಾರೋಟುಗಳನ್ನು ಬಳಸುವುದು, ಸಮ್ಮೇಳನದ ಲಾಂಛನವನ್ನು ಛತ್ರಿ-ಚಾಮರಗಳಿಂದ ಅಲಂಕರಿಸುವ ದೈವಭಕ್ತಿ-ರಾಜಭಕ್ತಿಗಳು ಕೇವಲ ಆಕಸ್ಮಿಕವಲ್ಲ. ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ರಾಜಕೀಯ-ಸಾಮಾಜಿಕ ಸ್ವರೂಪವನ್ನು ಅವು ಬಿಂಬಿಸುತ್ತವೆ.