ಇಲ್ಲಿದೆ ಶಿವಮೊಗ್ಗ ಮಹಿಳಾ ಸಮಾವೇಶದ ಆಲ್ಬಂ

ಸಂವಿಧಾನದೊಳಗೆ ಧಾರ್ಮಿಕ ಮೂಲಭೂತವಾದ

ಸೇರ್ಪಡೆಗೆ ಹುನ್ನಾರ: ಡಾ.ಮನಿಷಾಗುಪ್ತಾ

ವರದಿ ಹಾಗೂ ಫೋಟೋಗಳು : ಎನ್ ರವಿಕುಮಾರ್ /ಶಿವಮೊಗ್ಗ ಅವರ ಮೂಲಕ

‘ನಾನು ಬದುಕಿರುವವರೆಗೂ ಸಂವಿಧಾನವನ್ನು ಬದಲಿಸಕ್ಕೆ, ತಿರುಚಲಿಕ್ಕೆ ಬಿಡುವುದಿಲ್ಲ ಎಂದು ನಾವು ಶಪಥ ಮಾಡಬೇಕು. ಸಂವಿಧಾನ ತಿದ್ದುಪಡಿ ಸಕಾರಾತ್ಮಕ ಒಳ್ಳೆಯ ಅಂಶಗಳಿಗೆ ಬರಬೇಕೇ ಹೊರತು ಕೆಟ್ಟ ಅಂಶಗಳಿಗಲ್ಲ ಎಂದು ಸಾರಬೇಕು’ ಎಂದು ಡಾ. ಮನಿಶಾ ಗುಪ್ತ ಕರೆ ನೀಡಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಶಿವಮೊಗ್ಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಧೇಶಿಸಿ ಮಾತನಾಡಿದರು

ಇಂದು ಸಂವಿಧಾನವನ್ನು ಜಾರಿಯಾಗಲು ಪಟ್ಟಭದ್ರರು ಬಿಡುತ್ತಿಲ್ಲ. ಬದಲಿಗೆ ಎಲ್ಲಾ ರಂಗಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಇದರಿಂದ ಶೋಷಿತರು ಮತ್ತಷ್ಟು ಶೋಷಿಸಲ್ಪಡುತ್ತಿದ್ದಾರೆ. ಇಂದು ಮೀಸಲಾತಿಯ ವಿರುದ್ಧದ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಕೆಲವರು ಮೀಸಲಾತಿ ಎಂದಾಕ್ಷಣ ಕಿರಿಕಿರಿಗೊಳ್ಳುತ್ತಾರೆ. ಅವರಿಗೆ ಮೂರ್ನಾಲ್ಕು ತಲೆಮಾರುಗಳಿಂದ ಶಿಕ್ಷಣವನ್ನೇ ನೀಡದೇ ಒಂದು ಸಮುದಾಯವನ್ನು ಶೋಷಿಸಿದರೆ ಆಗುವ ಹಾನಿ ಎಷ್ಟು ಎಂಬುದರ ಅರಿವಿಲ್ಲ.

ಸಂವಿಧಾನದ ಹಕ್ಕುಗಳ ಹೊರತಾಗಿಯೂ ಕೂಡ ಯಾಕೆ ಮಹಿಳೆಯರು ಕುಟುಂಬದಿಂದ ಹೊರದೂಡಲ್ಪಡುತ್ತಿದ್ದಾರೆ. ಇಂದು ಬಲಪಂಥೀಯ ಹಿಂದುತ್ವ ಶಕ್ತಿಗಳ ಅಬ್ಬರದಿಂದ ಗೌರಿ ಲಂಕೇಶ್, ಕಲ್ಬುರ್ಗಿ ಪಾನ್ಸಾರೆ ಸೇರಿದಂತೆ ಮುಸ್ಲಿಂರು, ಕ್ರಿಶ್ಚಿಯನ್ನರು, ದಲಿತರು ದಾಳಿಗೊಳಗಾಗುತ್ತಿದಾರೆ ಎಂದು ನಮಗೆ ಅನ್ನಿಸಬಹುದು ಆದರೆ ಅವರ ಟಾರ್ಗೆಟ್ ನಿಜವಾಗಿಯೂ ನಮ್ಮ ಸಂವಿಧಾನವೇ ಅಗಿದೆ.

ಶುಭಕೋರಿದ ಪ್ರಕಾಶ್ ರೈ

ಮಹಿಳಾ ಸಮಾವೇಶಕ್ಕೆ ಪ್ರಗತಿಪರ ಚಿಂತಕ, ಖ್ಯಾತ ನಟ ಪ್ರಕಾಶ್ ರೈ ಅವರು ಶುಭಕೋರಿ ಹೂ ಗುಚ್ಛ ಹಾಗೂ ಸಂದೇಶ ಕಳುಹಿಸಿದರು.

“ನಿಮ್ಮ ಸಮಾವೇಶ ನನ್ನದೂ ಹೌದು, ನನ್ನ ಪ್ರಶ್ನೆಗಳು ನಿಮ್ಮವೂ ಹೌದು, ಮುಂದಿನ ದಾರಿ ಮುಳ್ಳಿನದ್ದೇ ಇರಲಿ ಅದನ್ನು ಗುಲಾಬಿ ಹಾದಿಯನ್ನಾಗಿ ಮಾರ್ಪಡಿಸೋಣ” ಎಂದು ಪ್ರಕಾಶ್ ರೈ ಅವರು ಕಳುಹಿಸಿದ್ದ ಸಂದೇಶವನ್ನು ಭಾರೀ ಹರ್ಷೋದ್ಘಾರದ ಮಧ್ಯೆ ಸಮಾವೇಶದಲ್ಲಿ ಪ್ರಸ್ತುತಪಡಿಸಲಾಯಿತು.

ಪ್ರಕಾಶ್ ರೈ ಅವರ ಪರವಾಗಿ ಪತ್ರಕರ್ತ ಎನ್. ರವಿಕುಮಾರ್ ಅವರು ಹೂಗುಚ್ಛವನ್ನು ಸಮಾವೇಶದ ಸಂಘಟಕರಿಗೆ ಅರ್ಪಿಸಿ ಶುಭಕೋರಿದರು.

ರಾಜ್ಯಸಭೆಯಲ್ಲಿ ಇವರಿಗೆ ಬಹುಮತ ಬಂದ ತಕ್ಷಣ ಸಂವಿಧಾವನ್ನು ಉಲ್ಲಂಘಿಸಿ ಹಿಂದೂ ದಾರ್ಮಿಕ ಮೂಲಭೂತವಾದವನ್ನು ಹೇರಲು ಸಿದ್ದರಾಗಿದ್ದಾರೆ. ಹೀಗೇ ಅದರೆ ಕೆಲ ಮುಸ್ಲಿಂ, ಕ್ರಿಶ್ಚಿಯನ್, ಬುದ್ದಿಸ್ಟ್, ಜ್ಯೂವಿಕ್ ಮೂಲಭೂತವಾದಿ ದೇಶಗಳ ಪರಿಸ್ಥಿತಿ ನಮ್ಮ ಕಣ್ಣ ಮುಂದಿದೆ. ಆ ಪರಿಸ್ಥಿತಿ ನಮಗೆ ಬರಬಾರದು. ಹಾಗಾಗಿ ಸಂವಿಧಾನದಲ್ಲಿ ಧರ್ಮಕ್ಕೆ ಆಸ್ಪದವಿರಬಾರದು.

ಮಹಿಳಾ ದಿನಾಚರಣೆ ಎಂದರೇನು? ಇದನ್ನು ಯಾವ ರೀತಿ ನಾವು ಅರ್ಥ ಮಾಡಿಕೊಳ್ಳುತ್ತೇವೆ. ವಜ್ರಾಭರಣಗಳ ಮೇಲೆ 25% ಡಿಸ್ಕೌಂಟ್ ಸಿಗುವುದೇ? ಇಲ್ಲ ನಾವು ಫೇರ್ ಅಂಡ್ ಲವ್ಲಿ ಹಚ್ಚುವುದೆ? ಇಲ್ಲ ದುಡಿಯುವ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ಕೆಲಸದ ಅವಧಿ ಕಡಿಮೆ ಮಾಡಿ 12ಗಂಟೆಗೆ ಸೀಮಿತಗೊಳಿಸಲು, ಶೋಷಣೆ ತಪ್ಪಿಸಲು ನಿರಂತರವಾಗಿ ಹೋರಾಡಿ ಜಯಶಾಲಿಯಾದ ದಿನ, ಈ ಮುಷ್ಕರ ಯಶ್ವಸಿಯಾಗಲು ಕಾರಣವೆಂದರೆ ಎಲ್ಲಾ ವರ್ಗದ ಮಹಿಳೆಯರು ಒಟ್ಟಾಗಿ ಹೋರಾಡಿದ್ದರಿಂದಲೇ ಅಗಿದೆ ಎಂದರು.

ಇಂದಿನ ನಮ್ಮ ಮುಂದಿರುವ ಸವಾಲುಗಳು ಯಾವುವು? ಮಹಿಳಾ ಚಳವಳಿ ಪ್ರಭುತ್ವಕ್ಕೆ, ಮಾರುಕಟ್ಟೆಗೆ ಉಪಯೋಗವಾಗಬಾರದು. ಬದಲಿಗೆ ಶೋಷಿತರಿಗೆ ದನಿಯಾಗಬೇಕು ಮತ್ತು ಮಹಿಳಾ ಚಳವಳಿಗೆ ಲಾಭವಾಗುವಂತೆ ನಾವು ಮಾಡಬೇಕು.

ಎಲ್ಲಾ ಚಳವಳಿಯಲ್ಲಿಯೂ ಸ್ತ್ರೀವಾದಿ ಹೋರಾಟವೂ ಅದರ ಮುಖ್ಯಧಾರೆಯಾಗುವುದು ಹೇಗೆ ಎಂದು ಚಿಂತಿಸಬೇಕಿದೆ. ಈ ಮಹಿಳಾ ದಿನಾಚರಣೆ ಹೇಗೆ ಅರ್ಥಪುರ್ಣವೆಂದರೆ ನಮ್ಮ ವೇದಿಕೆಯ ಬ್ಯಾನರ್ ನಲ್ಲಿ ಒಬ್ಬ ಮಹಿಳೆಯ ಫೋಟೊ ಇದೆ, ಅವರು ಗೌರಿ ಲಂಕೇಶ್‍ರವರು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಮಾನಸಿಕವಾಗಿ ನಮ್ಮೊಂದಿಗಿದ್ದಾರೆ. ಅವರನ್ನು ಕೊಂದವರಿಗೆ ಸತ್ತ ಮೇಲೂ ಅವರು ಸಿಂಹಸ್ವಪ್ನವಾಗಿದ್ದಾರೆ. ನಾವು ಸತ್ತರೂ ಕೂಡ ನಿಮಗೆ ಹೆಚ್ಚು ಅಪಾಯಕಾರಿಯಾಗುತ್ತೇವೆ ಎಂದು ಕೊಲೆಗಡುಕರಿಗೆ ಎಚ್ಚರಿಕೆ ಕೊಡಬೇಕಿದೆ ಎಂದು ಕರೆನೀಡಿದರು.

ಅವರು ನಮ್ಮನ್ನು ಕೊಲ್ಲಲೇಬೇಕೆಂದಿಲ್ಲ. ಬದಲಿಗೆ ನಾವು ಹೋರಾಡುವುದನ್ನು, ಹಾಡುವುದನ್ನು, ಬದುಕನ್ನು ಪ್ರೀತಿಸುವುದನ್ನು ನಿಲ್ಲಿಸಿದರೆ ಸಾಕು ಸತ್ತ ಹಾಗೆ ಆಗುತ್ತೇವೆ ಎಂಬುದನ್ನು ಮರೆಯಬಾರದು. ಹಾಗಾಗಿ ನಾವು ರೈತ ಚಳವಳಿ, ಸಮಾಜವಾದಿ ಚಳವಳಿ ಮತ್ತು ಕಾರ್ಮಿಕ ಚಳವಳಿಯ ಭಾಗ ಎಂದು ಹೇಳಬೇಕು. ನಾವು ಕನಸು ಕಾಣುತ್ತಲೆ ಇರುವುದನ್ನು, ಹಾಡುತ್ತಲೆ ಇರುವುದನ್ನು ಮುಂದುವರೆಸಬೇಕಿದೆ.

ಸಮ್ಮೇಳನವನ್ನು ಉದ್ಘಾಟಿಸಿದ ಹಿರಿಯ ಲೇಖಕರಾದ ಸ.ಉಷಾ ಅವರು ನಮ್ಮ ಸಮಾಜದ ಬೆಳವಣಿಗೆಯಲ್ಲಿ ಫ್ಯೂಡಲ್ ಸಮಾಜ, ಬಂಡವಾಳಶಾಹಿ ಸಮಾಜ, ನವ ವಸಾಹತುಶಾಹಿ ಸಮಾಜಗಳು ಹಾಕಿಕೊಟ್ಟ ಮೌಲ್ಯಗಳು ಮತ್ತು ಆಲೋಚನೆಗಳು ಈ ಸಮಾಜವನ್ನು ಮತ್ತಷ್ಟು ದುಸ್ತರಗೊಳಿಸಿವೆ. ಪುರುಷ ರಾಜಕಾರಣ ಎಂದು ಯಾವುದನ್ನು ಕರೆಯುತ್ತೇವೆಯೋ ಅದರ ತಂತ್ರಗಳು ಪ್ರತಿತಂತ್ರಗಳ ಉಪಯೋಗದಲ್ಲಿ ಮಹಿಳೆಯೇನೂ ಹಿಂದೆ ಬಿದ್ದಿಲ್ಲ. ಅದೇ ರೀತಿ ಮಹಿಳೆಯರ ಹೋರಾಟಕ್ಕೆ, ಸಮಾನತೆಯ ತತ್ವಕ್ಕೆ ಪುರುಷರು ಕೊಟ್ಟ ಕಾಣಿಕೆಯನ್ನು ಅಲ್ಲಗೆಳೆಯುವಂತಿಲ್ಲ ಎಂದರು.

 

ಸಮಾರಂಭದಲ್ಲಿ ಹಿರಿಯ ಸಾಹಿತಿ ಡಿ,ಬಿ ರಜಿಯಾ ಅವರು ಪುಸ್ತಕ ಬಿಡುಗಡೆ ಮಾಡಿದರು. ಡಾ ಸಬಿತಾ ಬನ್ನಾಡಿ ಉಪಸ್ಥಿತರಿದ್ದರು.

‍ಲೇಖಕರು avadhi

March 8, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: