ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲದಿದ್ದರೆ ಈ ದಿನವೇಕೆ ಕಣ್ಣು ಈ ಪರಿ ತುಂಬಿಕೊಳುತಿದ್ದವು….

ಬಸವರಾಜ ಸೂಳಿಬಾವಿ

ಲಡಾಯಿ ಪ್ರಕಾಶನ

ಐದು ದ್ವಿಪದಿಗಳು


1
ಕವಿತೆಯೂ ನಿನ್ನ ಹಾಗೆ
ಅರ್ಥವಾಗುವ ಮೊದಲೇ ಒಳಗಿಳಿದು ಬಿಟ್ಟಿದೆ
2
ನನ್ನರಿವ ಹಾದಿಗೆ ಪಾದಗಳ ಹಾಗೆ ಸಾಲೆರಡು ಒದಗಿಬಂದವು
ಎರಡು ರೆಕ್ಕೆಗಳ ಹಕ್ಕಿಗಷ್ಟೇ ಬಾನಿಗೆರಲು ಬರುವುದು
3
ಈ ಪ್ರೇಮಿಗಳ ದಿನ ನನ್ನದೇ ಆಗಿರುವ ಹಾಗಿದೆ
ಇಲ್ಲದಿದ್ದರೆ ಈ ದಿನವೇಕೆ ಕಣ್ಣು ಈ ಪರಿ ತುಂಬಿಕೊಳುತಿದ್ದವು
4
ನಿನ್ನ ನೋಡುವ ಕ್ಷಣ ಜಾರತೊಡಗಿದೆ ಸಮಯದ ಕೈಗೆ
ಕಣ್ಣಲಿ ಅಚ್ಚಾದ ನನ್ನ ಕವನದೋದು ಮುಗಿಯಲೊಲ್ಲದು
5
ಪ್ರೇಮವೂ ಹೀಗೆ
ಬಾಡುವ ಹೂವ್ವಿನ ಬಾಡದ ಗಂಧದ ಹಾಗೆ

‍ಲೇಖಕರು avadhi

21 February, 2013

5 Comments

  1. Gopaal Wajapeyi

    ”ಪ್ರೇಮವೂ ಹೀಗೆ… ಬಾಡುವ ಹೂವಿನ ಬಾಡದ ಗಂಧದ ಹಾಗೆ…!”
    ನಿಮ್ಮ ಈ ದೋಹೆಗಳು ಕೂಡ ಬಾಡದ ಗಂಧದ ಹಾಗೆ.
    ಬಸೂ ಅವರೇ, ನಿಮ್ಮ ಪ್ರೇಮದ ‘ಪರಿ’ಗೆ, ‘ವ್ಯಾಖ್ಯೆ’ಗೆ ಒಂದು ಸಲಾಂ…

    • ಬಸೂ

      ಗೋಪಾಲ ವಾಜಪೇಯಿ ಅವರೆ ನಿಮ್ಮ ಸಹೃದಯತೆಗೆ ಪ್ರೀತಿಪೂರ್ವಕ ಒಂದನೆಗಳು

  2. shanthi k.a.

    sundara…dvipadigalu.

  3. krishna

    nice..!

  4. siraj

    Basu
    Nimmolagondu kaviteya nadi ide. Bahala chennagi bareyuttiddeeri
    Siraj Ahmed

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading