ಎಂ ವಿ ಶಶಿಭೂಷಣ ರಾಜು
ಇರಬಹದು
ಮನಸಿನಾಳದಲಿ ಮುಗ್ದಪ್ರೀತಿ
ಸೆಳೆಯಲು ಹೊನಲ ಸುಳಿಯಂತೆ
ಮುಂಜಾವಿನ ಕದತೆರೆದು ಒಳದೊಯ್ಯಲು
ಉಗುರುಬೆಚ್ಚಗಿನ ಬಿಸಿಯಲಿ ತಬ್ಬಿಕೊಳ್ಳಲು
ಇರಬಹದು
ಮುಗ್ದ ಮುಗಳ್ನಗೆಯ ಹಿಂದೆ ಹೊಸ ಕ್ರೌರ್ಯ
ಹೊಸಕಿಹಾಕುವ ನವತಂತ್ರ
ಮೇಲೆತ್ತಲು ಕೈ ನೀಡಿ, ಒದೆಯುವ ಮತ್ಸರ
ಹೆಬ್ಬಯಕೆ ಗಗನವೆಲ್ಲಾ ಒಬ್ಬನೇ ತಬ್ಬಲು
ಇರಬಹುದು
ಯಾರ ಬಳಿಯೂ ಸುಳಿಯದೇ
ಎಲ್ಲಿಯೂ ಏರದೇ ಇಳಿಯದೇ
ತನ್ನದೇ ಲೋಕದಿ ಬಹ್ವಂಶ ಮುಳುಗಿ
ಮೌನದಿ ಮುಳುಗುವ ಜೀವ

ಇರಬಹದು
ನೀಡಿ ತನ್ನದೆಲ್ಲವ, ತಣಿಸಲು ಪರರ
ತಾನಿರುವ ಭರವಸೆ ನೀಡಿ
ನೊಂದವರ ಪರ ಕೂಡಿ
ತಾ ಕರಗಿ ಬೆಳಕ ಕೊಡುವ ಜೀವ
ಇರಬಹದು
ಸಕಲಗುಣಗಳೊಳಗೆ, ಹೊರಬರಲು ಸಮಯದಿ
ದೇವ-ರಕ್ಕಸದವತಾರಗಳು
ಮುಗುಳನಗೆ, ವ್ಯಂಗಗಳು
ಒಂದೇ ಮನದಲಿ






0 Comments