ಆತ್ಮಹೀನ ನಗರ
ಹೇಮಾ ಅಮೀನ್
ಮೌನಗರ್ಭವನ್ನು ಸೀಳಿ ಬಂದ ಬರ ಸಿಡಿಲು ಘರ್ಜನೆ
ನಡುಗಿದ ಬಾನು ಕಣ್ಣೀರು ಹರಿಸಿದ ಕಡಲು
ಯಾರ ಹಿಡಿತದಲ್ಲಿತ್ತು ಭೂತಾಯಿಯ ಮಿಡಿತ
ಹೇಳಲು ಎನಿದೆ ಅವಳ ಸ್ವಗತ
ಉಡಿ ಬೀಜ ಧರಿಸಿದ ಬಸಿರಲಿ
ಅರುಳು ಚೂರಿನ ಉಸಿರಿನೊಂದಿಗೆ
ಜಡಗೊಂಡ ಆತ್ಮ
ನಿಯತಿ ನೀರಡಸಿ ಬಾಯ್ದೆರೆದಂತೆ
ರಕ್ತದೊಕುಳಿ ಮಿತಿತಪ್ಪಿ ಸಿಂಚನಕೆ
ಕಾಲನ ಕುಹಕದ ಅಟ್ಟಹಾಸ ಎಲ್ಲೆಡೆ
ಭಯ ಪಟ್ಟು ತನ್ನನ್ನೇ ತಾ ಮರೆತ ಭಾನುತೇಜ
ಇನ್ಯಾರ ಮಡಿಲಲಿ ಮಲಗಲಿ ಅಮ್ಮ
ನಿನ್ನೊಡಲೇ ಸಿಡಿದಾದ ಮೇಲೆ?
ಜೀವ ನಿರ್ಜೀವವೆಲ್ಲಾ ಸುಪ್ತ ಶಿಲೆಯಾಗಿ
ಇತಿಹಾಸದ ಕುಹುರುಗಳ ಕಣ್ಣೀರು ಬತ್ತಿ
ಅಳಿದುಳಿದ ಬಿಕ್ಕುಗಳ ಹಸಿದ ಕಣ್ಣೀರು
ನಿಷ್ಟುರದ ಕಥೆ ಹೇಳಲು ಸಜ್ಜಾಗಿ ನಿಂತಿವೆ

ಬುದ್ಧನ ತಲ್ಲೀನತೆಗೆ ತಲ್ಲಣವಾದಾಗ
ಗುಬ್ಬಿ ಮನದೊಡಲ ತುಂಬೆಲ್ಲ ಕಣ್ಣೀರು ಹನಿಸಲು
ಗಟ್ಟಿ ಹೃದಯ ಸಾಕು
ಎಲ್ಲಿ ಹುಡುಕಲಿ ಹೃದಯ
ಅಲ್ಲಿಯೂ ಕೇಳಿಸುತಿದೆ ಗಡ ಗಡ ನಡುಕ
ಮನೆಹೊರಗೆ ಬರುವಷ್ಟು ಉಸಿರು ಬೇಕು
ಉಂಡದ್ದು ತಿಂದದ್ದು ಬೇರೆನಲ್ಲ ಬರಿ
ಭಯವನ್ನೆ ತಿಂದು ತೇಗುತಿವೆ ಜೀವ
ಪಕ್ಕ ಕುಳಿತಿದ್ದ ಕೂಸು
ಹೆಣಕ್ಕೂ ಮುತ್ತು ಕೊಡುತ್ತ ಅಮ್ಮಾ ಹಸಿವೆಂದಿತು
ಆಕಾಶದಲಿ ಹಾರಡೋ ಹಕ್ಕಿಗೂ
ಕಾಡಿದೆ ನೋವು ಇಂಚರವ ಮರೆಸಿ
ಸಂಚಾರದ ಚೇತನವೆ ಪತನಗೊಳ್ಳುತಿದೆ
ಗೊತ್ತಿಲ್ಲ ತಾಯಿ!
ಕಲ್ಪನೆಗೆ ನಿಲುಕದ
ನಿನ್ನ ಸಹನೆಯ ಒಡಲಿಗೆ ಕಿಚ್ಚಿಟ್ಟವರಾರೋ
ನಿನ್ನ ತಲ್ಲಣಗಳ ಮಧುಮಾಡಿ ಹೀರಿದವರಾರೋ
ಕ್ಷಮಯಾ ಧರಿತ್ರೀ ನಿನ್ನ ಕಿಂಚಿತ್ ಕಂಪನ
ನಿಷ್ಪಾಪ ಜೀವಿಗಳ ಆತ್ಮ ಮತ್ತೆ ನಿನ್ನ ಗರ್ಭದೊಳು
ಸೇರಿದವುಗಳೆಷ್ಟೋ!!
ಸುತ್ತಲೂ ಲೂಟಿ ರೋಷ, ರೇಪುಗಳ ಜಾತ್ರೆಯಲಿ
ಹಸು ಕಂದಮ್ಮಗಳ ಹೊಸತು ಋತುಸ್ರಾವಗಳ ಕಾಲುವೆ
ಶಿಥಿಲವಶೇಷದಲ್ಲಿ ಹರಿದು ಹೊರಟಿದೆ
ಎನ್ನ ಸಿಂಗಾರ ಬೆವರ ಉಪ್ಪರಿಗೆ
ಬಸಿರಾಗಿ ಸಲಹಿ ಮುದದಿ
ಬೆಳೆಸುವ ವಸುಧೆಯ ತಪನ ತವಿಸು
ಪರರ ಅನುಕಂಪದ ಹುಣ್ಣಿಮೆಯ ಬೆಳಕು
ಇಂದು ಅಪಹಾಸ್ಯದ ಅಮವಾಸ್ಯೆ ಅಗದಿರಲಿ
ಕಾಯ್ದ ಕಾವಲಿಯಲ್ಲಿ ಕರಗಿ ಆವಿಯಾಗಿರುವ
ಆತ್ಮಗಳೆಲ್ಲ ಬಿಕ್ಕಾಗಿ ದಿಕ್ಕಿಗೆ ಕಾತರಿಸುತಿವೆ
ಪತಿತ ಪಾವನ ಪಶುಪತಿಯೇ ಕರುಣಿಸು ದೀನರ…






Heart toching…!!!!!
Superb….!!
Awesome….
Vow!!! It was amazing…. U explained it so beautifully… Nice, I loved it.
Really heart touching story…
Bahala chennagide…….bhukampada chitrana kanna munde kandantagide
Nice article
Good one sister. Keep it up.
Great thinking……
Good…..
Great.. Tumba chennagi describe madiddiri
Awesome…. Vry nice
Bahala channagide…
Nice poetry……peace for the people died in Nepal
Good poem
ಭೂಕಂಪನದ ಕಂಪನವನು ಒಳ್ಳೆಯ ರೀತಿಯಲ್ಲಿ ಮಂಡಿಸಿದ ಕವಯತ್ತ್ರಿಯ ಸಸ್ಪಂದನಕ್ಕೆ ವಂದನೆ.
channagide
ಭೂಕಂಪದ ವೇದನೆ ಹೃದಯ ತಟ್ಟಿತಟ್ಟಿದೆ…
Nijavaagiyu. mana karagitu.
Hema ameen’s poem -enyara madilalli malagali amma- is superb.one of the most powerfull theem and subject. mother is god but good is great. poems two maney words and lines heart beet sentiments. mother sentiment is realy hert touching of poem! one+one lines are explained so beautifully and very nice. poem i like it.
AVADHI PARIVAARA HAGU ELLA ODUGARIGU NANNA MANADAALADA DHANYAVAADAGALU