ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರಕಟ: ವಿ ಗಾಯತ್ರಿ, ಜಯಶ್ರೀ ಕಾಸರವಳ್ಳಿ, ಮಮತಾ ಅವರಿಗೆ ಪ್ರಶಸ್ತಿ

ಉತ್ತರ ಕರ್ನಾಟಕ ಲೇಖಕಿಯರ ಸಂಘ, ಹುಬ್ಬಳ್ಳಿ-ಧಾರವಾಡ
ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರಕಟಣೆ

ಉತ್ತರ ಕರ್ನಾಟಕ ಲೇಖಕಿಯರ ಸಂಘವು ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಕೊಡಮಾಡುವ ಮೂರು ವರ್ಷದ ಪ್ರಶಸ್ತಿಗಳು ಪ್ರಕಟಗೊಂಡಿವೆ.

೨೦೧೬ನೇ ಸಾಲಿಗಾಗಿ ವಿ. ಗಾಯತ್ರಿಯವರ ‘ಬದುಕು ಬೇಸಾಯ’ ಜೀವನಚರಿತ್ರೆ, ೨೦೧೭ನೇ ಸಾಲಿಗಾಗಿ ಜಯಶ್ರೀ ಕಾಸರವಳ್ಳಿಯವರ ‘ದಿನಚರಿಯ ಕಡೇ ಪುಟಗಳಿಂದ’ ಕಥಾಸಂಕಲನ ಹಾಗೂ ೨೦೧೮ನೇ ಸಾಲಿಗಾಗಿ ಮಮತಾ ರಾವ್ ಅವರ ‘ಜಯಂತ ಕಾಯ್ಕಿಣಿಯವರ ಕಥನಾವರಣ’ ವಿಮರ್ಶೆ ಕೃತಿಗಳು ಆಯ್ಕೆಗೊಂಡಿವೆ ಎಂದು ಸಂಚಾಲಕರಾದ ಪ್ರಜ್ಞಾ ಮತ್ತಿಹಳ್ಳಿ ಅವರು ತಿಳಿಸಿದ್ದಾರೆ.

ಈಪ್ರಶಸ್ತಿಯು ತಲಾ ೧೦ ಸಾವಿರ ರೂ ನಗದು, ಪ್ರಶಸ್ತಿ ಪತ್ರಿಕೆ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.

ಡಾ. ಗುರುಲಿಂಗ ಕಾಪಸೆ, ಡಾ. ಜಿ.ಎಮ್.ಹೆಗಡೆ, ಡಾ. ಬಸೂ ಬೇವಿನಗಿಡದ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ಲತಾ ಗುತ್ತಿ ಹಾಗೂ ಡಾ. ಶಾಂತಾ ಇಮ್ರಾಪುರ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮಾರ್ಚ್ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜರುಗಲಿದೆ.

 

‍ಲೇಖಕರು avadhi

8 February, 2020

4 Comments

  1. Uday Itagi

    Congrats to all

  2. Shyamala Madhav

    ಅಭಿನಂದನೆ, ಪ್ರೀತಿ ತುಂಬಿ!

  3. Amritha Shetty

    Congratulationa Dr.Mamta Rao Madam

  4. Sharada

    ಹೃತ್ಪೂರ್ವಕ ಅಭಿನಂದನೆಗಳು ಗಾಯತ್ರಿ. ಕೇಳಿ, ಓದಿ ಬಹಳ ಸಂತೋಷವಾಯ್ತು. ಈ ಪುಸ್ತಕವನ್ನು ನಾನೂ ಓದಬೇಕಲ್ಲ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading