ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇನ್ನೊಮ್ಮೆ ಕಳೆದು ಹೋಗಬೇಕು….’

ರಮೇಶ್ ನೆಲ್ಲೀಸರ


ಈ ಸಂತೆಯ ಸಾವಿರ ಮುಖಗಳ
ನಡುವೆ ನಿಂತು
ಕಳೆದುಹೋಗಬಹುದಾದ ಜುಜುಬಿ
ಸಾಧ್ಯತೆಯನ್ನಾದರೂ ಹುಡುಕಬೇಕು
ಚಿಂತೆಯಿಲ್ಲದವನಿಗಿಲ್ಲಿ ನಿದ್ದೆ ಬರಬಹುದೇನೋ,
ನಾನಂತು ಈ ರಗಳೆಗಳ ಬೀದಿಯ
ನಟ್ಟನಡುವೆ ಉಸಿರಿಡಿದು
ಕಳೆದುಹೋಗುವ ಕಚ್ಚಾ ದಾರಿಯೊಂದನ್ನು ಹುಡುಕಬೇಕು
 
ಮೆದುಳು ನುಂಗುವ ಈಜಿಪ್ಟಿನ
ಕಾಲ್ಪನಿಕ ಕೀಟದಂತೆ,
ಹೆಗಲೇರಿದ ಸಮಸ್ಯೆಗಳ ಜೊತೆಗೊಂದು ಜಾಲಿ ರೌಂಡು ಹೊಡೆದು
ಅದೂ-ನಾನೂ ಹೊಡೆದಾಡಿಕೊಂಡು
ಕೊನೆಗೆ ಏನಾದರೊಂದು ಜರುಗಲಾದರೂ,
ಇನ್ನೊಮ್ಮೆ ನಾನು ಕಳೆದುಹೋಗಬೇಕು.
 
ನೂರು ಬಾಯಿಗಳ ನಡುವೆ
ನನ್ನ ಕೇಳಿಸಿಕೊಳ್ಳಬಹುದಾದ
ನನ್ನದೇ ಕಿವಿಯನ್ನು ಒಮ್ಮೆ
ಮಾತನಾಡಿಸಿ
ಎಲ್ಲ ಜಂಜಾಟಗಳ ಜೊತೆಗೆ
ಕಳೆದು ಮತ್ತೆ ಮೇಲೇರುವ
ಹಾಗೆ,ಇನ್ನೊಮ್ಮೆ ಕಳೆದುಹೋಗಬೇಕು…..
 

‍ಲೇಖಕರು G

28 January, 2015

5 Comments

  1. smitha Amrithraj

    Chennagide

  2. ಶ್ವೇತಾ.ಎ

    ಕಳೆದುಹೋಗುವ ಮುನ್ನ ಅನುಭಾವದ ಅಂಗಳದಲ್ಲಿ ಮೆರೆದುಬಿಡಬೇಕು…

  3. mmshaik

    uttama pryatna sir..

  4. deepa hegde

    vastu chennagide.

  5. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading