
-ನಾ ದಿವಾಕರ
ಊರೆಲ್ಲಾ ಗುಳೇ ಹೋದಮೇಲೆ ಊರ ಬಾಗಿಲು ಹಾಕುವುದು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಸವರ್ೇ ಸಾಮಾನ್ಯವಾಗಿಬಿಟ್ಟಿದೆ. ಇಲ್ಲಿ ಯಾವುದೇ ಒಂದು ದುರಂತ ನಡೆದರೂ ಪುಂಖಾನುಪುಂಖವಾಗಿ ಭಾಷಣ ಮಾಡುವವರಿದ್ದಾರೆ. ಗಂಟೆಗಟ್ಟಲೆ ಟಿವಿ ಪರದೆಗಳ ಮೇಲೆ ಚಚರ್ೆ ಮಾಡುವವರಿದ್ದಾರೆ. ಆಗಿ ಹೋದ ಘಟನೆಯ ಶವಪರೀಕ್ಷೆ ಮಾಡಲು ತಜ್ಞರು, ವಿದ್ವಾಂಸರು ಸಾಲುಗಟ್ಟಿ ನಿಲ್ಲುತ್ತಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಐದಾರು ಚೌಕಗಳಲ್ಲಿ ಕಾಣಿಸಿಕೊಳ್ಳುವ ಈ ವಿದ್ವಾಂಸರ ವಾದ ಪ್ರತಿವಾದಗಳು, ಅದೇ ವೇದಿಕೆಯಲ್ಲಿರುವ ಒಬ್ಬ ಸಕರ್ಾರದ ವಕ್ತಾರರನ್ನು ಗುರಿ ಮಾಡಿ ಸಾಕಷ್ಟು ಚಚರ್ೆಗಳನ್ನು ನಡೆಸುತ್ತಾರೆ. ರಾಜಕೀಯ ಪಕ್ಷಗಳ ಪರ-ವಿರೋಧಗಳು ಪರಾಕಾಷ್ಠೆ ಮುಟ್ಟುತ್ತವೆ. ಪ್ರವಾಹ, ಭೂಕಂಪ, ನೆರೆ ಹಾವಳಿ, ಭಯೋತ್ಪಾದಕ ದಾಳಿ ಎಲ್ಲ ಸಂದರ್ಭಗಳಲ್ಲೂ ಕಂಡುಬರುವ ಈ ಪ್ರಹಸನಗಳು ಒಂದು ರೀತಿಯಲ್ಲಿ ಆಚರಣೆಯ ಮಟ್ಟಕ್ಕೆ ಬಂದು ನಿಂತಿದೆ. ಅಂತಿಮವಾಗಿ ಹೊರಹೊಮ್ಮುವ ಸತ್ಯವೆಂದರೆ ಭಾರತ ಇನ್ನೂ ಭಯೋತ್ಪಾದಕರ ಮುಷ್ಠಿಯಿಂದ ಮುಕ್ತವಾಗಿಲ್ಲ.
ದೆಹಲಿಯ ಉಚ್ಚ ನ್ಯಾಯಾಲಯದ ಮುಖ್ಯ ದ್ವಾರದಲ್ಲಿ, ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ, ಸೂಟ್ಕೇಸಿನಲ್ಲಿದ್ದ ಬಾಂಬ್ ಒಂದು ಸ್ಫೋಟಗೊಂಡು 11 ಜನ ಮೃತಪಟ್ಟು, 76 ಜನ ಗಾಯಗೊಂಡಿರುವುದು ನಿಜಕ್ಕೂ ಆಘಾತಕಾರಿ ವಿಚಾರ. ದೇಶದ ರಾಜಧಾನಿಯಲ್ಲಿನ ನ್ಯಾಯಾಲಯದಲ್ಲಿ ಹಾಡುಹಗಲೇ ಒಂದು ಸ್ಫೋಟ ಸಂಭವಿಸುತ್ತದೆ ಎಂದರೆ ಇದರ ಉತ್ತರದಾಯಿತ್ವ ಯಾರದು ? ಹೊಣೆಗಾರಿಕೆ ಯಾರದು ? ಗುಪ್ತಚರ ಇಲಾಖೆಯ ವೈಫಲ್ಯ, ಭದ್ರತಾ ಪಡೆಗಳ ನಿಷ್ಕ್ರಿಯತೆ, ಗೃಹಮಂತ್ರಾಲಯದ ನಿಷ್ಕಾಳಜಿ, ಯುಪಿಎ ಸಕರ್ಾರದ ಮೃದು ಧೋರಣೆ, ಮರಣ ದಂಡನೆ, ಕಠಿಣ ಶಾಸನಗಳು,ಅಫ್ಜಲ್ ಗುರು ಇತ್ಯಾದಿ ಇತ್ಯಾದಿಗಳನ್ನು ಬದಿಗೊತ್ತಿ ವಸ್ತುನಿಷ್ಠವಾಗಿ ನೋಡಿದಾಗ ಭಾರತದಲ್ಲಿ ಭಯೋತ್ಪಾದಕತೆ ಸ್ಪಷ್ಟ ನೆಲೆ ಮಾಡಿರುವ ಸತ್ಯವನ್ನು ಅಲ್ಲಗಳೆಯಲಾಗುವುದಿಲ್ಲ. ನೆಲೆ ಮಾಡಿರುವುದಷ್ಟೇ ಅಲ್ಲ ವ್ಯವಸ್ಥಿತ ಜಾಲವನ್ನೂ ಹೆಣೆದಿರುವುದನ್ನು ಕಾಣಬಹುದು. ರಾಜಕೀಯ ವಲಯಗಳಲ್ಲಿ ಮೃದು-ಕಠಿಣಗಳ ಪರಿಭಾಷೆ ಚಾಲ್ತಿಯಲ್ಲಿದ್ದೇ ಇರುತ್ತದೆ. ಆದರೆ ಭಾಜಪದ ಕಠಿಣ ನೀತಿ ಜಾರಿಯಲ್ಲಿದ್ದಾಗಲೂ ದಾಳಿ ನಡೆಯುತ್ತಿದ್ದವು, ಕಾಂಗ್ರೆಸ್ನ ಮೃದು ನೀತಿಯಲ್ಲೂ ಸಂಭವಿಸುತ್ತಿದೆ. ಘಟನೆಗಳ ಶವಪರೀಕ್ಷೆಯನ್ನು ಮಾಡದೆ ವಾಸ್ತವಗಳ ನೆಲೆಗಟ್ಟಿನಲ್ಲಿ ನೋಡಿದಾಗ ಭಾರತ ಸಕರ್ಾರದ ಭದ್ರತಾ ವ್ಯವಸ್ಥೆಯಲ್ಲಿನ ಕೊರತೆ ಮತ್ತು ಜನಸಾಮಾನ್ಯರ ರಕ್ಷಣೆಯ ಬಗ್ಗೆ ಇರುವ ನಿಷ್ಕಾಳಜಿ ಹೆಚ್ಚು ಸ್ಪಷ್ಟವಾಗುತ್ತದೆ.
ದೆಹಲಿಯಾಗಲಿ, ಮುಂಬೈ ಆಗಲಿ ಭಯೋತ್ಪಾದಕ ದಾಳಿಗಳಲ್ಲಿ ಸಾಯುವುದು ಸಾಮಾನ್ಯ ಜನತೆಯೇ. ನಷ್ಟ ಅನುಭವಿಸುವುದೂ ಇದೇ ಸಮುದಾಯವೇ. ಭಯೋತ್ಪಾದಕರಿಗೆ ಬೇಕಿರುವುದೂ ಅದೇ. ದೇಶದ ಜನತೆಗೆ ಪ್ರಭುತ್ವದಲ್ಲಿನ ವಿಶ್ವಾಸ ಕುಂದಿಸುವ ಮೂಲಕ ತಮ್ಮ ಜಾಲವನ್ನು ಹೆಣೆಯುವುದು ಅವರ ಮೂಲ ಉದ್ದೇಶವಾಗಿರಬಹುದು. ಆದರೆ ಭಾರತದ ಸಂದರ್ಭದಲ್ಲಿ ಕಾಣಬಹುದಾದ ವೈಚಿತ್ರ್ಯವೆಂದರೆ ಜನಸಾಮಾನ್ಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ಸಕರ್ಾರಗಳೂ ಕ್ರಿಯಾಶೀಲತೆ ಪ್ರದಶರ್ಿಸುತ್ತಿಲ್ಲ. ಇದ್ದಿದ್ದಲ್ಲಿ ಭಾರತದ ಪೊಲೀಸ್ ವ್ಯವಸ್ಥೆ ಎಷ್ಟೋ ಸುಧಾರಿಸುತ್ತಿತ್ತು. ಭಯೋತ್ಪಾದಕ ದಾಳಿ ನಡೆದ ಕೂಡಲೇ ಕಠಿಣ ಶಾಸನಗಳು, ಕಠಿಣ ಸಜೆ, ಹೆಚ್ಚಿನ ಜಾಗೃತಿ, ರಹಸ್ಯ ಕ್ಯಾಮರಾ, ಮೆಟಲ್ ಡಿಟೆಕ್ಷರ್ ಹೀಗೆ ಚಚರ್ೆಗಳು ನಡೆಯುವುದು ಸಾಮಾನ್ಯವಾಗಿ ಹೋಗಿದೆ. ಆದರೆ ಭಯೋತ್ಪಾದಕ ತಂಡಗಳು ಈ ಎಲ್ಲಾ ತಂತ್ರಜ್ಞಾನಗಳನ್ನೂ ನಿಷ್ಕ್ರಿಯಗೊಳಿಸಿ ತಮ್ಮ ಕಾರ್ಯ ಸಾಧಿಸುವ ಮಟ್ಟಿಗೆ ಬೆಳೆದು ನಿಂತಿವೆ.
ಇಲ್ಲಿ ಯಾವ ಸಂಘಟನೆ ಕಾರಣ ಎನ್ನುವುದಕ್ಕಿಂತಲೂ, ಏಕೆ ಬಾಂಬ್ ದಾಳಿಗಳು ಹೀಗೆ ಪದೇ ಪದೇ ಸಂಭವಿಸುತ್ತಿವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಭಯೋತ್ಪಾದನೆಯನ್ನು ನಿಗ್ರಹಿಸಲು ಕಠಿಣ ನಿಲುವು, ದೃಢ ಸಂಕಲ್ಪ ಮತ್ತು ರಾಜಕೀಯ ಇಚ್ಚಾಶಕ್ತಿ ಬೇಕೆಂಬುದು ನಿಜ. ಆದರೆ ಇದನ್ನು ಸಾಧಿಸುವುದಾದರೂ ಹೇಗೆ. ಇಲ್ಲಿ ಆಳುವ ಸಕರ್ಾರಕ್ಕಿಂತಲೂ ದೇಶದ ರಾಜಕೀಯ-ಸಾಮಾಜಿಕ-ಆಥರ್ಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಪ್ರಭುತ್ವದ ಪಾತ್ರ ಮಹತ್ವ ಗಳಿಸುತ್ತದೆ. ಈ ಪ್ರಭುತ್ವವನ್ನು ಪ್ರತಿನಿಧಿಸುವ ಎಲ್ಲ ರಾಜಕೀಯ ಪಕ್ಷಗಳೂ ದೇಶದಲ್ಲಿ ಸಂಭವಿಸುವ ಇಂತಹ ಘೋರ ಘಟನೆಗಳಿಗೆ ಉತ್ತರದಾಯಿತ್ವ ಹೊರಬೇಕಾಗುತ್ತದೆ.
ಅಮೆರಿಕದಲ್ಲಿ ಕಳೆದ ಒಂದು ವರ್ಷದಲ್ಲಿ ಒಂದೂ ಭಯೋತ್ಪಾದಕ ದಾಳಿ ಸಂಭವಿಸಿಲ್ಲ ಎಂದು ವಾದ ಮಂಡಿಸುವ ರಾಜಕೀಯ ಮುತ್ಸದ್ಧಿಗಳು ಅಲ್ಲಿನ ರಾಜಕೀಯ ಪಕ್ಷಗಳ ವರ್ತನೆ ಮತ್ತು ಸಮಯ ಪ್ರಜ್ಞೆಯನ್ನು ಕೊಂಚಮಟ್ಟಿಗಾದರೂ ಅನುಸರಿಸಿದರೆ ಭಾರತದಲ್ಲೂ ಅದು ಸಾಕಾರಗೊಳ್ಳಬಹುದು. ಆದರೆ ಇಲ್ಲಿ ನಡೆಯುವುದೇ ಬೇರೆ. ಕಠಿಣ ಶಾಸನಗಳೊಂದೇ ವೇದಮಂತ್ರ ಎಂದು ಪರಿಗಣಿಸುವ ವಿಶೇಷ ವ್ಯಾಖ್ಯಾನಕಾರರು ಜನಸಾಮಾನ್ಯರನ್ನು ಭಯೋತ್ಪಾದನೆಯಿಂದ ರಕ್ಷಿಸಲು ಒಂದು ಜನಸ್ನೇಹಿ ಭದ್ರತಾ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ಯೋಚಿಸುವುದೇ ಇಲ್ಲ. ಇದು ನಮ್ಮ ರಾಜಕಾರಣಕ್ಕೆ ಬಡಿದಿರುವ ಶಾಪವೋ ಏನೋ . ಪಾಕಿಸ್ತಾನ-ಮುಂಬೈ-ತಾಲಿಬಾನ್ಗಳಿಂದಾಚೆಗೂ ಕೆಲವು ವಿದ್ಯಮಾನಗಳು ಭಾರತದಲ್ಲಿ ಸಂಭವಿಸುತ್ತಿದ್ದು ಈ ನಿಟ್ಟಿನಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವ ರಾಜಕೀಯ ಇಚ್ಚಾಶಕ್ತಿಯನ್ನು ಆಳ್ವಿಕರು ಕಳೆದುಕೊಂಡಿರುವುದು ನಿಚ್ಚಳವಾಗಿದೆ. ಈ ಸಂದರ್ಭದಲ್ಲಿ ಬೇಕಿರುವುದು ರಾಜಕೀಯ ಐಕಮತ್ಯವೇ ಹೊರತು ದೋಷಾರೋಪಣೆಯಲ್ಲ.
ತಂತ್ರಜ್ಞಾನ ಭಯೋತ್ಪಾದನೆಯನ್ನು ತಡೆಗಟ್ಟಲು ಸಹಾಯಕವಾಗಬಹುದು ಅಥವಾ ಆರೋಪಿಗಳನ್ನು ಬಂಧಿಸಲು ನೆರವಾಗಬಹುದು, ಆದರೆ ಭಯೋತ್ಪಾದನೆ ಎಂಬ ವಿದ್ಯಮಾನವನ್ನು ತಡೆಗಟ್ಟಲು ತಂತ್ರಜ್ಞಾನಕ್ಕಿಂತಲೂ ಮಾವನ ಸಂಪನ್ಮೂಲಗಳನ್ನಾಧರಿಸಿದ ಒಂದು ಸಮಗ್ರ ಸಾಮಾಜಿಕ ದೃಷ್ಟಿಕೋನದ ನೀತಿಯ ಅವಶ್ಯಕತೆ ಇಂದು ಹೆಚ್ಚಾಗಿದೆ. ಭಾರತದ ಪೊಲೀಸ್ ವ್ಯವಸ್ಥೆ, ಗುಪ್ತಚರ ಇಲಾಖೆಗಳಲ್ಲಿ ಸುಧಾರಣೆ ತರುವುದೊಂದೇ ಅಲ್ಲದೆ, ಜನಸಂಖ್ಯೆಗನುಗುಣವಾಗಿ ರಕ್ಷಣಾ ವ್ಯವಸ್ಥೆಯನ್ನು ರೂಪಿಸುವುದೂ ಇಂದಿನ ತುತರ್ು ಅಗತ್ಯತೆಯಾಗಿದೆ. ಸಮಾಜದಲ್ಲಿ ವಿಭಿನ್ನ ಕಾರಣಗಳಿಗಾಗಿ ದಿನೇ ದಿನೇ ಹೆಚ್ಚಾಗುತ್ತಿರುವ ವಿಧ್ವಂಸಕ ಮನೋಭಾವಕ್ಕೆ ಕಡಿವಾಣ ಹಾಕದೆ ಹೋದರೆ ಭಯೋತ್ಪಾದನೆಯಂತಹ ವಿದ್ಯಮಾನವನ್ನು ಎದುರಿಸಲಾಗುವುದಿಲ್ಲ. ಅರ್ಥಹೀನ ವೋಟ್ ಬ್ಯಾಂಕ್ ರಾಜಕಾರಣದ ವಾದ ವಿವಾದಗಳು ಆಂತರಿಕ ಸೌಹಾರ್ದತೆಗೆ ಭಂಗ ತರುವುದೇ ಹೊರತು, ಸಮಸ್ಯೆಯ ಪರಿಹಾರ ಮಾರ್ಗವಾಗುವುದಿಲ್ಲ. ನಮ್ಮ ರಾಜಕೀಯ ವ್ಯವಸ್ಥೆಯ ಲೋಪ ಇರುವುದೇ ಇಲ್ಲಿ. ತಮ್ಮ ವೇತನಗಳ ಹೆಚ್ಚಳದ ಸಂದರ್ಭದಲ್ಲಿ ತೋರುವ ಒಗ್ಗಟ್ಟನ್ನು ರಾಜಕೀಯ ಪಕ್ಷಗಳು ಇಂತಹ ವಿಷಮ ಸಂದರ್ಭದಲ್ಲಿ ತೋರಿದರೆ ಬಹುಶಃ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಒಂದು ಹೆಜ್ಜೆಯಾದರೂ ಮುಂದಿಡಬಹುದು. ವಿಪಯರ್ಾಸವೆಂದರೆ ಭಾರತದ ರಾಜಕಾರಣದಲ್ಲಿ ಇಂತಹ ಭೀಕರ ಘಟನೆಗಳೂ ಚುನಾವಣೆಯ ವಿಷಯವಾಗಿಬಿಡುತ್ತವೆ. ಇದು ಭಯೋತ್ಪಾದನೆಗಿಂತಲೂ ಅಪಾಯಕಾರಿಯಲ್ಲವೇ ?






diwakar sir,nimma kalakali,halahalike,chintane ellavu prastuta,but ee samasyagalige parihara hege
bekkige gante kattuvavaru yaru, illi namma rajakeeyavonde brastagondilla,naavu,namma samskruti,namma dharma, namma shikshana ellavannu brastagolisiddeve, intaha paristitiyalli namma nadige uttama bhavisyavenuvudu kasta sadhyaveno,kadunodabekaste. nimma barahadalli teekshnate ide,monachide, aa samajika kalakalige ellaru spandisabeku d,ravi varma hospet