ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನು ಕೆಲವೇ ದಿನಗಳಲ್ಲಿ ನಾನು ಬಾಯ್ತೆರೆಯುತ್ತೇನೆ..

 

 

 

ಮೋರಿ

ಅಭಿಷೇಕ್ ಪೈ

 

 

 

 

 

ನನ್ನನ್ನು ಕಂಡು ಹೇಸಿಗೆ
ಪಡುವವರಿಗೆಲ್ಲಾ ನನ್ನದೊಂದು ವಿನಂತಿ
ಬುಧವಾರಪೇಟೆಯ ಅವಳ ಕೋಣೆಯಿಂದ
ತೀಟೆ ತೀರಿಸಿಕೊಂಡು ಹೊರ ಕಾಲಿಟ್ಟು
ನನ್ನ ದಾಟುವಾಗ ಅಸಹ್ಯವೆನಿಸಲಿಲ್ಲವೇ?

ನಡು ಬೇಸಿಗೆಯ ಬೆವರಿನೊಂದಿಗೆ
ನೀರಿಗಾಗಿ ಪರದಾಡುವಾಗ
ಮಳೆಗಾಲದಲ್ಲಿ ನನ್ನೊಳಗಿಂದ ಬರಿದೇ
ಹರಿದು ಪೋಲಾದ ನೀರು ನೆನಪಾಗುತ್ತಿಲ್ಲವೇ?

ನಿಮ್ಮವೇ ಬಚ್ಚಲಿನಿಂದ ಬಂದ ದುರ್ನಾಥದ
ದ್ರವ್ಯಗಳನ್ನು ಸಾರಸಗಟಾಗಿ ನನ್ನಲ್ಲಿ ಸೇರಿಸಿ
ರಸ್ತೆಯ ಬದಿಯುದ್ದಕ್ಕೂ ತುಂಬಿ ಹರಿಯುವಾಗ
ಕಿವುಚಿದ ಮುಖದಲ್ಲಿ ಮೂಗು ಮುಚ್ಚಿಕೊಂಡು
ಬೇಗ ನಡೆದು ಸಾಗುತ್ತಿರೀ…….
ಬಹುಶಃ ಒಂದೊಮ್ಮೆ ನಾನು ಪೂರ್ತಿ
ಬಾಯ್ತೆರೆದರೆ ಸತ್ತೇ ಹೋಗುತ್ತಿರೀ….!!!

ಗಬ್ಬು ಮೋರಿ ಎಂದು ಅಲ್ಲೆಗೆಳೆಯುವ
ನೀವು ಎಸೆದ ಅಂದೇ ಹುಟ್ಟಿದ
ಹೆಣ್ಣು ಹಸುಳೆಯನ್ನು ಜತನದಿಂದ
ಕಾದಿದ್ದೇನೆ, ಹೊರದಬ್ಬಲ್ಪಟ್ಟ
ಯಾರದೋ ಮನೆಯ ಸೊಸೆಯ ಕಣ್ಣೇರು
ನನ್ನಲ್ಲಿ ಹರಿಯಲು ಬಿಟ್ಟಿದ್ದೇನೆ.

ನನ್ನ ದಿನಚರಿಯಂತೆ ನಿತ್ಯ ಪ್ರಾಸವಿಲ್ಲದ
ನಿಷ್ಠುರ ಕವಿತೆಗಳನ್ನು ಬರೆದಿಡುತ್ತಿದ್ದೇನೆ
ಕೆಲವೇ ದಿನಗಳಲ್ಲಿ ನನ್ನ ಪಕ್ಕದ ಗೋಡೆಯ
ಸಿನಿಮಾ ಪೋಸ್ಟರ್ ಬಳಿ ಹಚ್ಚುತ್ತೇನೆ
ಬೇಗನೇ ಬಂದು ಓದಿ ಬಿಡಿ. ಯಾಕೆಂದರೆ,
ಇನ್ನು ಕೆಲವೇ ದಿನಗಳಲ್ಲಿ
ನಾನು ಬಾಯ್ತೆರೆಯುತ್ತೇನೆ.

‍ಲೇಖಕರು avadhi

24 August, 2017

3 Comments

  1. Anusha shenoy

    Nice ananthu

  2. VARUN

    Good one

  3. pravara

    chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading