ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದ್ದ ಹಾಗೆಯೇ ಇದೆ ಆಕಾಶ…

ಬದಲಾಗಿಲ್ಲ ಆಕಾಶ…

ಮಾಲತಿ ಗೋರೆಬೈಲ್

ಇರುಳ ರೇಖೆಯ ಚಂದಿರನ ಕಂಡು
ಉಕ್ಕುವ ಬಿಕ್ಕುಗಳಿಗೆ
ಬೆಳ್ಳಿ ತಾರೆಗಳ ಸಾಂತ್ವನದ ಅಪ್ಪುಗೆ

ಕತ್ತೆತ್ತಿ ಚುಕ್ಕಿಯ ದಿಟ್ಟಿಸಿದರೆ
ಬಣ್ಣ ತಳೆವ ಬಯಕೆಗಳು,
ಕತ್ತಲೆಗೆ ಬೆಳಕ ಬಟ್ಟೆ ತೊಡಿಸುವ
ಹುಚ್ಚು ಭ್ರಮೆ!
ಎಲ್ಲಿಂದಲೋ ತೇಲಿಬರುವ ಮೋಡ,
ದಿನದ ಅಂತ್ಯರಾಗದಲ್ಲಿಯೂ ಗೌಜು ಗೋಜಲು

ಶಾಂತ ಸ್ವರ ಮೀಟಿ
ತಣ್ಣಗೆ ಹರಿವ ತೊರೆಗೆ
ಶಶಿ ಬಿಂಬದ ಸುಖ ಮಹೋತ್ಸವ
ಮಿಂದೆದ್ದು ತೇಲಾಡುವ ಘಳಿಗೆಗೆ
ಆಗಸದಲ್ಲೊಂದು ಆಘಾತ……

ಭಿತ್ತಿಯಿರದ ಗಗನದೆದೆಯಲ್ಲಿ
ನಿತ್ಯ ನೋಯುವ ಉಲ್ಕೆಗಳ ಸದ್ದು
ನೋಡ ನೋಡುವಂತೆಯೇ ಉರುಳುಸೇವೆ!
ಭುವಿಯ ಸಿಕ್ಕುಗಳಿಗೆ
ಸಿಲುಕಲಾರದ ಇಂಗಿತ,

ಪ್ರತೀ ರಾತ್ರಿಯೂ ಇದೇ ಮರುಕಳಿಕೆ
ಹೀಗಿದ್ದೂ…..ಆಕಾಶ
ಇದ್ದ ಹಾಗೆಯೇ ಇದೆ
ಬದಲಾಗಿಲ್ಲ….

‍ಲೇಖಕರು avadhi

11 November, 2019

2 Comments

  1. T S SHRAVANA KUMARI

    ಒಳ್ಳೆಯ ಕವಿತೆ

  2. T S SHRAVANA KUMARI

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading