ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಇದೊಳ್ಳೆ ಪುರಾಣ’ ಜ್ಞಾನದ ರಸದೌತಣ

ಅಶ್ವಿನಿ ಕುಲಕರ್ಣಿ ಅವರ ಕೃತಿ ‘ಇದೊಳ್ಳೆ ಪುರಾಣ’

‘ಸಾವಣ್ಣ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಸಾವಿತ್ರಿ ಶ್ಯಾನುಭಾಗ ಅವರ ಬರಹ ಇಲ್ಲಿದೆ.

-ಸಾವಿತ್ರಿ ಶ್ಯಾನುಭಾಗ

ಭಾರತೀಯ ಪುರಾಣವೆಂದರೆ ಮಹಾಭಾರತ,ರಾಮಾಯಣವೆಂದು ಕೆಲವರ ಅಂಬೋಣ.ಅದು ಸರಿಯೇ?ಆದರೆ ನಮಗೆ ತಿಳಿಯದೇ ಇರುವ,ಓದದೇ ಇರುವ ಪೌರಾಣಿಕ ಪಾತ್ರಗಳು ಎಷ್ಟೋ ಇವೆ.ಗೊತ್ತಿದ್ದರೂ ಆ ಪಾತ್ರಗಳ ಹಲವಾರು ವಿಷಯ ನಮಗೆ ತಿಳಿದೇ ಇಲ್ಲ,ಕೆಲವೊಮ್ಮೆ ತಿಳಿದಿದ್ದರೂ ನಾವದನ್ನು ಗಮನಿಸಿಯೇ ಇಲ್ಲ.ಪೌರಾಣಿಕವಾಗಿ,ಐತಿಹಾಸಿಕವಾಗಿ,ಸಾಂಸ್ಕೃತಿಕವಾಗಿ ಶ್ರೀಮಂತವಾದ ನಮ್ಮ ನಾಡಿನಲ್ಲಿ ನಡೆದು ಹೋದ ಹಲವಾರು ಪೌರಾಣಿಕ ಪಾತ್ರಗಳ ಕುರಿತು ನಮಗೆ ತಿಳಿಸುತ್ತಾ,ಆ ಪಾತ್ರಗಳು ನಡೆಸಬೇಕಾಗಿದ್ದ ಪಾತ್ರಗಳು,ಅದರ ಅನಿವಾರ್ಯತೆ,ಅವರ ಕಾರ್ಯ,ಅವರ ಜವಾಬ್ದಾರಿ ಹೀಗೆ ಒಂದು ಸನ್ನಿವೇಶಕ್ಕೂ ಇನ್ನೊಂದು ಸನ್ನಿವೇಶಕ್ಕೂ ಇರುವ ಸಂಬಂಧ ಹೀಗೆ ಅನೇಕ ಮಾಹಿತಿಯುಕ್ತ ಲೇಖನಗಳ ಮೂಲಕ ʼಇದೊಳ್ಳೆ ಪುರಾಣʼ ದ ಲೇಖಕಿ ಅಶ್ವಿನಿ ಕುಲಕರ್ಣಿಯವರು ನಮಗೆ ತಿಳಿಸಿದ್ದಾರೆ.ಅವರೇ ಶೀರ್ಷಿಕೆಯೊಂದಿಗೆ ನೀಡಿದ ಉಪಶೀರ್ಷಿಕೆಯಂತೆ ʼಗೊತ್ತಿರೋ ಪುರಾಣದ ಗೊತ್ತಿಲ್ದೆ ಇರೋ ಪ್ರಸಂಗಗಳು.” ಈ ಕಥೆಗಳು.

ಇಂದಿನ ಯುವಜನಾಂಗದವರು,ಮಕ್ಕಳು ಪುರಾಣದ ಕಥೆ ಕೇಳಿದರೆ ಅದರ ಕುರಿತು ಸಾವಿರಾರು ಪ್ರಶ್ನೆ ಕೇಳುತ್ತಾರೆ,ಅದೇಕೆ ಹಾಗೇ?ಹೀಗೆ ಮಾಡಬಹುದಿತ್ತಲ್ಲ?ದ್ರೌಪದಿಗೇಕೆ ಐವರು ಪತಿಯಂದಿರು,ಅಣ್ಣ ತಮ್ಮಂದಿರೇ ಆದರೂ ದೈತ್ಯರು,ಅಧಿತಿಯ ಮಕ್ಕಳು ಯಾಕೆ ವೈರಿಗಳಾದರು?ಮಾರ್ಕಾಂಡೇಯ ಪುರಾಣದಲ್ಲಿ ಬರುವ ನಾಲ್ಕು ಹಕ್ಕಿಗಳು ಹೇಗೆ ಪ್ರಶ್ನೆಗಳಿಗೆ ಉತ್ತರಿಸುವಷ್ಟು ಜ್ಞಾನ ಪಡೆದವು?ಬ್ರಹ್ಮ ಮತ್ತು ಹೆಂಡತಿ ಸಾವಿತ್ರಿಯ ಜಗಳದಲ್ಲಿ ದೇವರಿಗೆ ಶಾಪ ಸಿಕ್ಕಿತೆ?ಬ್ರಹ್ಮನಿಗೆ ಏಕೆ ಪೂಜೆ ನಡೆಯುವುದಿಲ್ಲ?ಶಿವನಿಗೇಕೆ ಲಿಂಗ ಪೂಜೆ?ಹಲವು ದೇವರಿಗೆ ಏಕೆ ಮಕ್ಕಳಿಲ್ಲ?ದೇವರು ದುಷ್ಟರನ್ನು ಕೊಲ್ಲಲು ಅವತಾರವನ್ನೇ ಎತ್ತಬೇಕೆ?ಹೀಗೆ ಕೇಳಿದರೆ ನೂರಾರು ಪ್ರಶ್ನೆಗಳಿವೆ?ಅವಕ್ಕೆಲ್ಲ ಒಂದೇ ಕಡೆ ಉತ್ತರ ಸಿಕ್ಕುವುದು ಸಾಧ್ಯವೇ?ಹೌದು ಈ ಪ್ರಶ್ನೆಗಳಿಗೆಲ್ಲ ಈ ಪುಸ್ತಕದಲ್ಲಿ ಉತ್ತರವಿದೆ.

ಬರಿ ಪ್ರಶ್ನೆಗಳಿಗೆ ಉತ್ತರ ಸಿಗುವ ಲೇಖನದಂತೆ ಬರೆಯದೇ ಈ ಮಾಹಿತಿಯನ್ನು ಕಥೆಗಳ ರೂಪದಲ್ಲಿ ಹೆಣೆದು ಕುತೂಹಲಕಾರಿಯಾಗಿ ನಮಗೆ ಪ್ರಸಂಗಗಳ ಮಾಹಿತಿಯನ್ನು ನೀಡಿದ್ದಾರೆ ಲೇಖಕರು.ಕೆಲವು ಘಟನೆಗಳು ನಡೆಯದೇ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಪರಿತಪಿಸುವಷ್ಟರಲ್ಲಿ ಆಗುವುದೆಲ್ಲಾ ಒಳ್ಳೆಯದಕ್ಕೇ ಎಂಬಂತೆ ಆ ಘಟನೆ ನಡೆದಿದುರಿಂದಲೇ ಮುಂದೆ ಈ ಕತೆ ನಡೆಯಿತು,ಪ್ರತಿಯೊಂದಕ್ಕೂ ಪೂರ್ವ ಹಿನ್ನೆಲೆ,ಮುಂದೆ ನಡೆಯುವ ಕಾರ್ಯದ ಸಿದ್ಧತೆಯೆಂದು ನಮಗೆ ತಿಳಿಯುವಷ್ಟರಲ್ಲಿ ಹಿಗೂ ಉಂಟೆ ಎಂದು ಎನಿಸದಿರದು.

ಮಹಾಭಾರತ ಯುದ್ದದಲ್ಲಿ ಎಲ್ಲವನ್ನೂ ಮೊದಲೇ ತಿಳಿದಿದ್ದ ಕೃಷ್ಣ ಪರಮಾತ್ಮ ಮುಂದೆ ಯುದ್ಧವೆಲ್ಲ ಮುಗಿದ ಮೇಲೆ ತಾನು ಅವತಾರ ಅಂತ್ಯ ಮಾಡುವುದಕ್ಕೆ ಮೊದಲೇ ಬರ್ಬರೀಕ ಹೊಡೆದ ಬಾಣ ತನ್ನ ಕಾಲಬುಡದವರೆಗೆ ಬರುವಂತೆ ಮಾಡಿಕೊಂಡು,ಬಾಣದ ಶಾಖ ತಗಲಿದಕ್ಕೆ ಅವನ ಕಾಲಿನ ತುದಿ ಅವನ ದೇಹದ ಅತ್ಯಂತ ಸೂಕ್ಷ್ಮ ಭಾಗವಾಗುವಂತಾಯಿತು,ನಂತರ ಬೇಡ ಹೊಡೆದ ಬಾಣ ಕಾಲಿಗೆ ತಗಲಿದಾಕ್ಷಣ ಅವನು ಪ್ರಾಣ ತ್ಯಾಗ ಮಾಡುವಂತಾಯಿತು ಎಂದೂ,ಅವನು ಗೊಲ್ಲನಾಗಿ ಹುಟ್ಟುವುದಕ್ಕೂ ಮೊದಲೇ ತಾನು ಗೊಲ್ಲರಿಗೆ ಮುಂದೆ ನಿಮ್ಮ ವಂಶದಲ್ಲಿ ಹುಟ್ಟಿ  ಗೊಲ್ಲರ ಬಗ್ಗೆ ಜನರಲ್ಲಿ ಭಕ್ತಿಭಾವ ಮೂಡಿಸುವೆ ಎಂದು ಅವರು ನೀಡುವ ಭರವಸೆ ಹೀಗೆ ಪ್ರತಿ ಘಟನೆಗೂ ಇರುವ ಪೂರ್ವ ಹಿನ್ನೆಲೆಯನ್ನು ನೀಡಿ ನಾವು ಓದುಗರು ಬೆರಗಾಗುವಂತೆ ಬರಹಗಳನ್ನು ಬರೆದಿದ್ದಾರೆ.

ಹೀಗೆ ಲೇಖಕರು ಬರೆದಿರುವ ೨೦ ವಿವಿಧ ಪುರಾಣ ಪ್ರಸಂಗಗಳು ಬೇರೆ ಬೇರೆ ಪೌರಾಣಿಕ ಪ್ರಸಂಗಗಳ ಪೂರ್ವ ಹಿನ್ನೆಲೆಯನ್ನು ನಮ್ಮ ಮುಂದೆ ಪ್ರಸ್ತುತ ಪಡಿಸುತ್ತಾ,ನಮಗೆ ರಸದೌತಣ ನೀಡುತ್ತಾ,ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತಾ,ಪುರಾಣದ ಬಗ್ಗೆ ನಾವು ಮರೆತು ಹೋಗಿರುವ ಕಥೆಗಳನ್ನು ಜ್ಞಾಪಿಸುತ್ತಾ,ಇನ್ನೂಆಸಕ್ತಿ ಹುಟ್ಟುವಂತೆ ಮಾಡಿರುವ ಲೇಖಕರ ಮಹತ್ಕಾರ್ಯವನ್ನು ಮಾತುಗಳಲ್ಲಿ,ಶಬ್ದಗಳಲ್ಲಿ ಹೇಳಲು ಕಷ್ಟವೇನೋ! ಬೆನ್ನುಡಿಯಲ್ಲಿ ವಿದ್ವಾನ್ ಜಗದೀಶಶರ್ಮಾ ಸಂಪ ರವರು ಹೇಳಿರುವಂತೆ ಎಲ್ಲರೂ ಓದಬೇಕಾದ ಮತ್ತು ಕಾಪಿಟ್ಟುಕೊಳ್ಳಬೇಕಾದ ಕೃತಿಯಿದು.

‍ಲೇಖಕರು Admin

5 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading