1982 ರಲ್ಲಿ ತೆರೆಕ೦ಡ ಮಹೇಶ್ ಭಟ್ ನಿರ್ದೇಶನದ ಅರ್ಥ್ ತನ್ನ ಕಥೆ, ಅಪೂರ್ವವಾದ ತಾರಾಗಣ, ನಟನೆ, ಅರ್ಥಪೂರ್ಣ ಹಾಡುಗಳು, ಸ೦ಗೀತದಿ೦ದ ಮನಸೆಳೆದ ಚಿತ್ರ. ಆ ಚಿತ್ರದ ಒ೦ದು ಹಾಡು ’ಕೋಯಿ ಯಹ ಕೈಸೆ ಬತಾಯೆ ವೊ ತನ್ಹಾ ಕ್ಯೂ ಹೈ…’. ಗುಲ್ಜ಼ಾರ್ ಅವರ ಈ ಕವಿತೆಯ ಭಾವಾನುವಾದ ಮಾಡಿ ಕಳಿಸಿರುವವರು ಸ್ವರ್ಣ ಎನ್ ಪಿ. ಈ ಕವನ ನಿಮಗಾಗಿ.
ಉತ್ತರ ಸಿಗದ ಪ್ರಶ್ನೆಗಳು
– ಸ್ವರ್ಣಾ ಎನ್ ಪಿ
ಬೋಳು ಮರದ ಹಕ್ಕಿ ತಾನೇಕೆ ಒಂಟಿ, ಎಂದು ಹೇಗೆ ಹೇಳೀತು?
ತನ್ನವರೇಕೆ ಪರಕೀಯರಾದರೆಂದರೆ, ಕೋಕಿಲ ಏನು ಹಾಡೀತು ?
ಇದೇ ಬದುಕದಾರೆ, ಇದು ಹೀಗೇಕಿದೆ?
ಇದೇ ವಿಧಿಯಾದರೆ, ಅದು ಹಾಗೇಕಿದೆ?
ಆಸರೆಗೊಂದು ಹಸ್ತ ಸಿಕ್ಕರೆ, ಸೆರಗ ಹಿಡಿಯಬೇಕು,
ಅವಳ ಎದೆಯಲೆನ್ನ ಬಡಿತ ಮಿಲಿತವಾಗಬೇಕು.
ನನ್ನ ಎದೆ ಬಡಿತವೇ ಇಷ್ಟೊಂದು ದೂರವೇಕಿದೆ?
ಇದೇ ಬದುಕದಾರೆ, ಇದು ಹೀಗೇಕಿದೆ?
ಇದೇ ವಿಧಿಯಾದರೆ, ಅದು ಹಾಗೇಕಿದೆ?
ಒಡೆದ ಮನದ ಚೂರುಗಳ ನಾನಿನ್ನು ಹೆಕ್ಕಿಲ್ಲ,
ಈ ಮುರುಕು ಬಾಗಿಲಲಾಗಲೇ ಸದ್ದಾಗುತ್ತಿದೆಯಲ್ಲ !
ಹರಿದ ಆಸೆ ಹೂಗಳ ಮತ್ತೆ ಪೋಣಿಸಲಹುದೆ ?
ಇದೇ ಬದುಕದಾರೆ, ಇದು ಹೀಗೇಕಿದೆ?
ಇದೇ ವಿಧಿಯಾದರೆ, ಅದು ಹಾಗೇಕಿದೆ?
ನೀ ಇದ ಏನನ್ನುವಿಯೋ? ಕಣ್ಣಿನ ಬಂಧ ಇಲ್ಲ ಕಂಬನಿಯ ಬಂಧ?
ಅವರೆನ್ನುತ್ತಾರೆ , ‘ಪ್ರೇಮ’ ಜನ್ಮಜನ್ಮದ ಬಂಧ
ಜನ್ಮಜನ್ಮದ ಬಂಧ, ಬದಲಾಗುತಿಹುದೇ ?
ಇದೇ ಬದುಕದಾರೆ, ಇದು ಹೀಗೇಕಿದೆ?
ಇದೇ ವಿಧಿಯಾದರೆ, ಅದು ಹಾಗೇಕಿದೆ?
]]>




uttama anuvad..like it.
ವಾವ್ ಗುಲ್ಜಾರ್ ಸಾಬ್,
ಮೂಲ ಕವಿತೆಗೆ ಬಂಗ ಬರದ ಹಾಗೇ ಭಾವಾನುವಾದವೇ ಅಲ್ಲವೇನೋ ಅನ್ನುವಂತೆ ಬರೆದುಕೊಟ್ಟಿದ್ದೀರ. ತುಂಬಾನೇ ಇಷ್ಟವಾಯಿತು.
ಈ ಕವಿತೆ, ಕೈಫಿ ಆಜ್ಮಿಯವರದ್ದು.
ಪ್ರಮಾದಕ್ಕಾಗಿ ಕ್ಷಮಿಸಿ.
ಸ್ವರ್ಣಾ