ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಶುದ್ಧೀಕರಣ ಕುರಿತ ಒಂದು ಜಾನಪದ ಕತೆ

 

 

 

ಎಲ್ ಸಿ ನಾಗರಾಜ್

 

 

 

 

ಇದನ್ನ ಎಲ್ಲಿ ಓದಿದೆ ಅಂತಾ ನೆನಪಾಗ್ತಿಲ್ಲ‌,  ಇದು ಶುದ್ಧೀಕರಣ ಕುರಿತ ಒಂದು ಜಾನಪದ ಕತೆ ;

ಶರಣ ಮಡಿವಾಳ ಮಾಚಿದೇವರು ಮತ್ತು ಅಲ್ಲಮಪ್ರಭು ನಡುವೆ ನಡೆದ ಒಂದು ಪ್ರಸಂಗ:

ಅಲ್ಲಮನ ಬಗ್ಗೆ ಅಪಾರ ಗೌರವ ಹೊಂದಿದ್ದ ಮಡಿವಾಳ ಮಾಚಿದೇವರು ಕಾಯಕ ನಿಷ್ಟೆಯ ಶರಣ ; ಒಂದು ದಿನ ಅಲ್ಲಮಪ್ರಭುವಿನ ಬಟ್ಟೆಗಳನ್ನ ತೊಳೆಯಲು ನದಿ ಹತ್ತಿರ ತೆಗೆದುಕೊಂಡು ಹೋಗುತ್ತಾರೆ. ಆದರೆ ಅಲ್ಲಮಪ್ರಭುವಿನ ಬಟ್ಟೆಗಳಲ್ಲಿ ಹೇನುಗಳಿರುವುದನ್ನ ಕಂಡು, ತೊಳೆದರೆ ಅವು ಸಾಯಬಹುದೆಂದು ತೊಳೆಯದೇ ತರುತ್ತಾರೆ ; ಅಲ್ಲಮ ಏನನ್ನೂ ಮಾತಾಡುವುದಿಲ್ಲ

ಶುದ್ಧೀಕರಣ ಎನ್ನುವುದು ಒಬ್ಬರ ಮನಸಿಗೆ ಸಾಂಸ್ಕೃತಿಕವಾಗಿ ನೋವು ಮಾಡುವಂತಹದು ; ಇಂತಹ ಹಿಂಸೆಯಿಂದ ಮಾಡುವ ಶುದ್ಧೀಕರಣ ಪವಿತ್ರವಲ್ಲ ; ಅದು ಜೀವಘಾತುಕ

ಈ “ಶುದ್ಧೀಕರಣ ” ಎಂಬುದಕ್ಕೆ ” ನಿರ್ಮೂಲನ ” ಎಂಬ ಅರ್ಥ ಕೂಡ ಇದೆ.

ಉಧಾಹರಣೆಗೆ ‘ ಜನಾಂಗೀಯ ನಿರ್ಮೂಲನ-  ethnic cleansing ಗೆ ಜನಾಂಗೀಯ ಶುದ್ಧೀಕರಣ ಎಂಬ ಅರ್ಥ .

ಅಂದರೆ ಒಂದು ಜನಾಂಗವನ್ನ ನಿರ್ಮೂಲನ ಮಾಡುವ ಘಾತುಕತೆಯಿಂದ ಒಂದು ಜನಾಂಗದ ಶುದ್ಧೀಕರಣ ಮಾಡಿಕೊಳ್ಳುವ ಕ್ರಿಯೆ

ಅಂದರೆ ಒಂದು ನಿರ್ಧಿಷ್ಟ ಜನಾಂಗದ ಅಸ್ತಿತ್ವ ಅಥವಾ ಇರುವಿಕೆಯೇ ಇನ್ನೊಂದು ಜನಾಂಗದ ಪರಿಶುದ್ಧತೆಗೆ ಮಾರಕ ಎಂಬ ಘಾತುಕ ಪರಿಕಲ್ಪನೆ. ಮನಶಾಸ್ತ್ರದಲ್ಲಿ ಇದು Xenophobia

ಯುದ್ಧ ಅಪರಾಧ ( war crimes ) ಗಳ ಕುರಿತ ಕೆಲವು ಸಾಕ್ಷಿಗಳನ್ನ ಅನುವಾದಿಸುವಾಗ Ethnic cleansing ಎಂಬ ಶಬ್ಧ ಬಳಕೆಯನ್ನ ‘ ಜನಾಂಗೀಯ ಶುದ್ಧೀಕರಣ ‘ ಅಂತಾ ಅನುವಾದಿಸಿದ್ದೆ

ನನ್ನ ಗೆಳೆಯ ‘ ಅದು ಜನಾಂಗೀಯ ನಿರ್ಮೂಲನ ‘ ಅಂತಿರಬೇಕಿತ್ತು ಅಲ್ವಾ ?’ ಅಂತಾ ಕೇಳಿದ್ದ ‘ ಅದೂ ಸರಿ , ಆದರೆ ಒಂದು ಜನಾಂಗದ ಶುದ್ಧೀಕರಣ ಎಂದರೆ ಇನ್ನೊಂದು ಜನಾಂಗದ ನಿರ್ಮೂಲನೆಯಿಂದ  ಎಂಬ ಅರ್ಥ ಕೂಡ ಇದೆ ‘

ಜರ್ಮನಿ,  ಪ್ಯಾಲೆಸ್ಟೈನ್ , ರುವಾಂಡ , ಒಡೆದು ಹೋದ ಯುಗೊಸ್ಲಾವಿಯಾ , ಅಮೇರಿಕದ ಮೂಲನಿವಾಸಿ ಇಂಡಿಯನ್ನರ ಸಾಂಸ್ಕೃತಿಕ ನಾಶ , ಆಸ್ಟ್ರೇಲಿಯಾದ ಮೂಲನಿವಾಸಿಗಳ ಸಾಂಸ್ಕೃತಿಕ ಹತ್ಯೆ ಹೀಗೆ ಚರಿತ್ರೆ  ಶುದ್ಧೀಕರಣದ , ನಿರ್ಮೂಲನೆಯ ದುರಂತ ಕತೆಗಳಿಂದ ತುಂಬಿ ಹೋಗಿದೆ

ಕೊನೆಗೂ ಫಲವತ್ತಾದ ಭೂಮಿಯಿರುವ ರುವಾಂಡ ಮಾತ್ರ ‘ ವೃಕ್ಷನ್ಯಾಯ ‘ ( ಗಕಾಕ್ಕ ) ವನ್ನ ಕಂಡುಕೊಳ್ಳದೇ ಬೇರೆ ದಾರಿಯಿರಲಿಲ್ಲ ; ಅಂದರೆ ಕೊಂದವನು ಪಶ್ಚಾತ್ತಾಪ ಪಟ್ಟು ಕಣ್ಣೀರಿಡುವ ಮೂಲಕ ತನ್ನ ಅಪರಾಧವನ್ನ ಒಪ್ಪಿಕೊಳ್ಳುವುದು ಮತ್ತು ಈ ಮೂಲಕ ಶುದ್ಧಗೊಳ್ಳುವುದು ವೃಕ್ಷನ್ಯಾಯದ ಕಲ್ಪನೆ

ಗಂಜಲದ ಮೂಲಕ ಶುದ್ಧೀಕರಣ ಮಾಡುವುದು , ವೃಕ್ಷನ್ಯಾಯದಂತ ಉದಾತ್ತ ಕಲ್ಪನೆಯೇನೂ ಅಲ್ಲ ;ಬದಲಾಗಿ  ಅದರಲ್ಲಿ ಒಂದು ಉದಾತ್ತ ನ್ಯಾಯದ ಕಲ್ಪನೆಯನ್ನೇ ಹತ್ಯೆ ಮಾಡುವ ಒಳಸಂಚುಗಳಿವೆ

‍ಲೇಖಕರು Avadhi GK

18 January, 2018

1 Comment

  1. Anasuya M R

    ನಿಮ್ಮ ಲೇಖನದ ಕೊನೆಯ ಮಾತುಗಳು ಅರ್ಥಪೂರ್ಣ ಹಾಗೂ ಮಾರ್ಮಿಕವಾಗಿವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading