![]()
ಮೂಲತಃ ಕವಿಯಾಗಿರುವ ಪತ್ರಕರ್ತ ಜಿ ಎನ್ ಮೋಹನ್ ಅವರ ಕ್ಯೂಬಾ ಪ್ರವಾಸ ಕಥನ, ನನ್ನೊಳಗಿನ ಹಾಡು ಕ್ಯೂಬಾ. ಅಮೆರಿಕಾಕ್ಕೆ ಸೆಡ್ದು ಹೊಡೆದು ನಿಂತಿರುವ ಸ್ವಾಭಿಮಾನಿ ಚೈತನ್ಯದ ದೇಶ ಕ್ಯೂಬಾ ಬಗೆಗಿನ ಅವರ ತನ್ಮಯೀ ಧ್ಯಾನ, ಅಂತಃಕರಣದ ಪ್ರೀತಿಯೇ ಕಥನವಾಗಿ ಅವತರಿಸಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಕನ್ನಡ ಸ್ನಾತಕೋತ್ತರ ಪದವಿಗೆ ಪಠ್ಯ, ತಮಿಳು, ತೆಲುಗು ಹಾಗೂ ಹಿಂದಿಗೆ ಅನುವಾದ ಇವು ಈ ಪುಸ್ತಕಕ್ಕೆ ಸಂದ ಗೌರವಗಳು. ಕತ್ತಲೆಯಲ್ಲಿ ಲೋಕ ಅಳುತ್ತಿರುವಾಗ, ಅಭಯ ನೀದುವ ಪುಟ್ಟ ಹಣತೆ ಎಂದು ಮೋಹನ್ ಅವರು ಕ್ಯೂಬಾವನ್ನು ಈ ಪ್ರವಾಸ ಕಥನದ ಕೊನೆಯಲ್ಲಿ ಬಣ್ಣಿಸುತ್ತಾರೆ. ಆ ಪುಟ್ಟ ಹಣತೆಯ ಕಥೆ ಈಗ ಆನ್ ಲೈನ್ ಪುಟಗಳಲ್ಲಿ ಲಭ್ಯ. ಇದನ್ನು ಅವಧಿ ಮೂಲಕ ಕೊಡಲು ಅವಕಾಶ ಮಾಡಿಕೊಟ್ಟ ಮೋಹನ್ ಅವರಿಗೆ ವಂದನೆಗಳು. ಇಲ್ಲಿ ಬಲಬದಿಯಿರುವ ಲಿಂಕ್ಸ್ ಅಡಿಯಲ್ಲಿ ನನ್ನೊಳಗಿನ ಹಾಡು ಕ್ಯೂಬಾ ಕ್ಲಿಕ್ಕಿಸಿದರೆ ತೆರೆದುಕೊಳ್ಳುತ್ತದೆ ಕ್ಯೂಬಾ.
ಇದು ಪುಟ್ಟ ಹಣತೆಯ ರೂಪಕ
ನಿಮಗೆ ಇವೂ ಇಷ್ಟವಾಗಬಹುದು…




ಅಬ್ಬಾ ಎಷ್ಟು ಸಾಹಿತ್ಯ ಪ್ರಾಕಾರಗಳು ನಮ್ಮ ಗಾಳದಲ್ಲಿ ! ಜಾಲಾಡಿದಷ್ಟು ಸಿಕ್ತಾನೇ ಹೋಗುತ್ತೆ.
to moderators of avadhi
thanks a lot
your efforts has given me more strength
ನಿಮ್ಮ ಭಾಷಾದಾಗ್ ಇರೋ ಒಂದ್ ಖರಾಮತ್ ಐತಲ್ರಿ, ಅದ ನಮ್ಗೆ ಒಂಥರಾ ಛಲೊ ಆಗ್ತದ್ರಿ.
ಹಿಂಗೇ ಮುಂದ್ ವರ್ಸ್ರಿ !
ಚೈತನ್ಯವನ್ನು ಬಡಿದೆಬ್ಬಿಸುವ ಕೃತಿ.
ಬೆಳಗಲಿ ಎಂದೆಂದಿಗೂ ಇದೇ ರೀತಿ.
ಎಂದಿನ…
ಚಂದಿನ