ಟೈಂ ಪಾಸ್ ಕಡ್ಲೆಕಾಯ್
“ಎದ್ದೇಳೋ ಮಾದಪ್ಪ ಎಷ್ಟೊತ್ತು ಸುಖ ನಿದ್ರೆ” ಎಂಬ ಸುಪ್ರಭಾತ ಕೇಳಿದವರಂತೆ ಸುಳ್ಯ ಸಾಹಿತಿ ಪ್ರಭಾಕರ ಶಿಶಿಲ ಧಡಕ್ಕನೆ ಎದ್ದು ಕೂತಿದ್ದಾರೆ.
ಏಳು ಏಳ್ಲಿ ಎಷ್ಟು ಅಂತ ಎಲ್ಲಾರ್ಗೂ ಕೇಳೋವಷ್ಟು ಏಳರ ಸಂಖ್ಯೆಯ ಗಾಳಿ ಬೀಸಿಸಿಕೊಂಡಿದ್ದಾರೆ. ವಿಷ್ಯ ಇಷ್ಟೆ: ಈ ಸಲದ ಜುಲೈ ೭ ಸ್ವಲ್ಪ ವಿಚಿತ್ರ. ೭-೭-೭. ಶಿಶಿಲರಿಗೂ ಇದು ಗೊತ್ತಾಯಿತು. ತಕ್ಷಣ ತಮ್ಮ ಏಳು ಪುಸ್ತಕ ರೆಡಿ ಮಾಡಿದ್ರು. ಬೆಳ್ಳಂಬೆಳಗ್ಗೆ ೭ ಗಂಟೆ ೭ ನಿಮಿಷಕ್ಕೆ ೭ ಅತಿಥಿಗಳಿಂದ ಪುಸ್ತಕ ಬಿಡುಗಡೆ ಮಾಡಿಸಿದ್ರು. ಪ್ರೋಗ್ರಾಮ್ ೭x೭=೪೯ ನಿಮಿಷ ಮಾತ್ರ ನಡೀಬೇಕು ಅಂತಾ ತಾಕೀತು ಮಾಡಿದ್ರು.
ಇಷ್ಟೇ ಅಲ್ಲ, ಪ್ರೋಗ್ರಾಮ್ ಗೆ ೭ ಮಂದಿಯ ಪ್ರಾರ್ಥನೆ. ಅದಕ್ಕಿಂತ ಇಂಟರೆಸ್ಟಿಂಗ್ ಅಂದರೆ ೭ ಥರ ತಿಂಡಿ.
ಪ್ರಭಾಕರ ಶಿಶಿಲ ಅನ್ನೋ ಹೆಸರಲ್ಲೂ ೭ ಅಕ್ಷರ. ಹಾಗಾಗಿಯೇ ಈ “ಏಳಾಟ”.
(ಸುದ್ದಿ ಬಿಡುಗಡೆ ಪೇಪರ್ ನಲ್ಲಿ ಬಂದಿದ್ದನ್ನ ಫೋನಲ್ಲಿ ಯಾರೋ ಹೇಳಿದ್ದು ಕೇಳಿ, ನಿಮಗೂ ಇಂಟರೆಸ್ಟಿಂಗ್ ಆಗಿರುತ್ತೆ ಅಂತ ಕೊಡಲಾಗಿದೆ.)




0 Comments