ಅಶ್ಫಾಕ್ ಪೀರಜಾದೆ.
ಮನುಷ್ಯಜೀವ ನಾಲ್ಕು ಗೋಡೆಗಳ
ಸುಪರ್ದಿನಲಿ ದಫನ್ ಆಗುತಿದೆ
ಎಲ್ಲಿಂದಲೋ ಬಂದ ವಿಕ್ಷಿಪ್ತಜೀವಿಯೊಂದು
ಯಾವುದೇ ಭೇದಭಾವವಿಲ್ಲದೆ ಸಕಲ
ಮಾನವಕುಲಕೆ ಕಫನ್ ತೊಡಿಸುತಿದೆ
ಧರ್ಮದಮಲು ಅದಕೂ
ಹಸಿರು ಕೇಸರಿ ಬಣ್ಣಬಳೆಯುತಿದೆ
ಸ್ವಾತಂತ್ರ್ಯ ಸಮರದಿಂದ ಹಿಡಿದು
ಇತ್ತೀಚಿನ ಪೌರತ್ವದವರೆಗೂ
ಹೆಗಲಿಗೆ ಹೆಗಲು
ಜೀವಕ್ಕೆ ಜೀವಕೊಟ್ಟು ನಿಂತ
ಭಾರತ ಮಾತೆಯ ಮಕ್ಕಳನ್ನು
ಬಣ್ಣಗಳಲ್ಲಿ ಒಡೆದು ವೈರಿಗಳಾಗಿಸಿ
ಆಳುವ ಹುನ್ನಾರ ನಮ್ಮ ವೈರಸ್ಸಗಳದ್ದು
ಹೇಳಿಕೇಳಿ ಕೊರೋನಾ
ಕೊಲ್ಲಲೆಂದೇ ಬಂದದ್ದು ಬಿಡಿ
ಕೊರೋನಾಕಿಂತಲೂ ಖತರನಾಕ್
ಕತ್ತಲೆಯಲ್ಲಿ ಬತ್ತಿಯಿಟ್ಟು
ಮಾನವೀಯತೆಗೆ ಉರಿಹಚ್ಚುವ
ಬೆಂಕಿ ಕಡ್ಡಿಗಳು

ಇತ್ತ ಲಾಕ್ ಡೌನ್ ಸಮಯ
ಮನೆಯಲ್ಲಿ ಬಂಧಿಯಾದ ನಾಲಿಗೆಗೆ
ನಿಮ್ಮನೆ ಶೇಂಗಾ ಹೋಳಿಗೆ ಕಡಬು
ಪಂಚಮಿ ಲಾಡು ಇತ್ಯಾದಿ ಇತ್ಯಾದಿ
ನೆನಪಾಗಿ ನೀರಾಡಿಸುತ್ತದೆ
ಬರುವ ರಂಜಾನ ಹಬ್ಬಕ್ಕೆ ಅಮ್ಮಿಜಾನ
ತಯಾರಿಸಿವ ಸುರಕ್ರುಮಾ
ಘಮಘಮಿಸುವ ಬಿರಿಯಾನಿ ಸವಿಯಲು
ಸಾವಿನ ಆತಂಕದ ನಡುವೆಯೂ
ನಿಮ್ಮನ್ನು ಆಹ್ವಾನಿಸುವುದರ ಕುರಿತು
ಮನಸ್ಸು ಚಿಂತಿಸುತ್ತದೆಯಾದರೂ
ಆತಂಕದಿಂದ ಹಿಂಜರಿಯುತ್ತದೆ
ಪ್ರತಿ ಆಪತ್ತಿನಲ್ಲಿ ಒಂದಾಗಿ ಹೋರಾಡಿ
ದೇಶದ ಘನತೆ ಸೌಹಾರ್ದತೆ ಕಾಪಾಡಿದ ಕೈಗಳು
ದೇಶಕ್ಕೆ ಅಂಟಿರುವ ಮಹಾಮಾರಿಯ
ಕಂಟಕವನ್ನು ಕಳೆಯಬೇಕಾಗಿದೆ
ಹಬ್ಬಕ್ಕೆ ಇನ್ನೂ ಒಂದು ತಿಂಗಳಿದೆ
ಅಲ್ಲಿಯವರೆಗೆ ಹೋರಾಡಿ ಕರೋನಾ ವಿರುದ್ಧದ
ಸಮರದಲ್ಲಿ ಗೆದ್ದು ವಿಜಯಪತಾಕೆ ಹಾರಿಸಿ
ಪರಸ್ಪರ ಶುಭಕಾಮನೆಗಳ ವಿನಮಯಕೆ
ಕಾಯೋಣ ಮುಂದೆ ಬರುವ ದೀಪಾವಳಿಗೂ
ದೀಪ ಬೆಳಗಿಸಿ ಒಲವಿನ ಬೆಳಕು ಹಂಚಲು.






ಒಳ್ಳೆಯ ಆಶಯದ ಕವಿತೆ
ಚೆನ್ನಾಗಿದೆ
ಅರ್ಥಗರ್ಭಿತ ಸಾಲುಗಳು…
T S SHRAVANA KUMARI
prathibha nandakumar &
ಸಚಿನ್‌ಕುಮಾರ ಬ.ಹಿರೇಮಠ ಮತ್ತು
ಎಲ್ಲರ ಪ್ರೀತಿಯ ಕಾವ್ಯಾಸ್ವಾದನೆಗೆ ಅನಂತಾನಂತ ನಮನಗಳು.
A lot to be taken away from this Kavita
Thanks
Thank you Lokesh sir.