ಸಿನಿಮಾಗಳ ಕ್ಲೈಮ್ಯಾಕ್ಸು ಮತ್ತು ಏರ್ ಪೋರ್ಟು!
ಆ ಹೀರೋ ಸುಳ್ಳು ಹೇಳಿರುತ್ತಾನೆ.
ಅದು ಇನ್ನೇನು ಸಿನಿಮಾ ಮುಗಿಯಲು ಹತ್ತು ನಿಮಿಷ ಇರುವಾಗ ಹೀರೋಯಿನ್ ಗೆ ಗೊತ್ತಾಗಿಬಿಡುತ್ತದೆ. ಅದನ್ನವಳು ‘ಮಹಾಮೋಸ’ ಎಂದು ತಿಳಿದು ತನ್ನ ಮನೆಯವರೆದುರೇ ಆತನನ್ನು ಅವಮಾನಕ್ಕೆ ಎಡೆಮಾಡಿ ‘ಇನ್ನೆಂದೂ ನನಗೆ ಮುಖ ತೋರಿಸಬೇಡ. Get lost from life ‘ ಅನ್ನೋ ಥರದ ಡೈಲಾಗ್ ಹೇಳಿ ಬೆಡ್ ರೂಂ ಗೆ ಹೋಗಿ ಮಕಾಡೆ ಮಲಗಿ ಬಿಕ್ಕಳಿಸಿ ಅಳತೊಡಗುತ್ತಾಳೆ.
ಅಲ್ಲದೆ ‘ ಅಪ್ಪ ನೀನು ತೋರಿಸಿದ ಹುಡುಗನನ್ನೇ ಮದುವೆಯಾಗುತ್ತೇನೆ ‘ ಎಂದು ಭರವಸೆ ಕೊಡುತ್ತಾಳೆ.

ಅಷ್ಟರಲ್ಲಿ ಆ ಹುಡುಗನ ದೂರ್ತತನ, ಹೇಗೋ Discover ಆಗೇ ಬಿಡುತ್ತದೆ . ಮತ್ತೊಂದು ಕಡೆ ಆ ಹೀರೋ ಹಾಗೆ ಸುಳ್ಳು ಹೇಳಿದ್ದು ಪ್ರೀತಿಗಾಗಿಯೇ ಹೊರತು ಅವನ ಪ್ರೀತಿಯೇ ಸುಳ್ಳಲ್ಲ ಎಂಬ ‘ಪರಮಸತ್ಯ’ ಹೀರೋಯಿನ್ ಸಹಿತ ಅವಳ ಕುಟುಂಬಕ್ಕೆ ಅರಿವಾಗುತ್ತದೆ.
ಪಾಪ ಈ ಹೀರೋ ಮಾತ್ರ ಎಲ್ಲವನ್ನು ಮರೆತು ‘ಫಾರಿನ್ ‘ಗೆ ಹೊರಡಲು ಸಿದ್ಧನಾಗಿರುತ್ತಾನೆ . ( ಕೆಲವು ಸಂದರ್ಭಗಳಲ್ಲಿ ಇದು ಉಲ್ಟಾ ಆಗಿ ಹೀರೋಯಿನ್ ಫಾರಿನ್ ಗೆ ಹೊರಟಿರುವ ಸಾಧ್ಯತೆಯೂ ಇರುತ್ತದೆ. )
ಆದರೆ ಆಗ ಹುಡುಗಿಯ ಕುಟುಂಬ ಇವನ ಮನೆಗೆ ಓಡಿಬರುತ್ತದೆ. ಕಾಲ ಮಿಂಚಿ ಹೋಗಿರುತ್ತದೆ ಪಾಪ. ಆತ ಆಗಲೇ ಏರ್ ಪೋರ್ಟ್ ಗೆ ಹೋಗಿಬಿಟ್ಟಿರುತ್ತಾನೆ. ಅಲ್ಲಿಂದಲೆ ನೋಡಿ ಪ್ರೇಕ್ಷಕ ಮಹಾಶಯ ಕುರ್ಚಿಯಿಂದ ಏಳಲಾರಂಭಿಸುತ್ತಾನೆ. ಏಕೆಂದರೆ ಮುಂದೆ ನಡೆಯಬಹುದಾದ ದೃಶ್ಯವನ್ನು ಆತ ಈಗಾಗಲೇ ಕನಿಷ್ಠ ಹತ್ತು ಸಿನಿಮಾಗಳಲ್ಲಿ ನೋಡಿರುತ್ತಾನೆ.
ಎರಡೂ ಕುಟುಂಬಗಳ ಸದಸ್ಯರು ಮೂರು ನಾಲ್ಕು ಕಾರ್ ಗಳಲ್ಲಿ ದಟ್ಟ ಟ್ರಾಫಿಕ್ ನಡುವೆಯೂ ಫ್ಲೈಟ್ ಟೇಕಾಫ್ ಆಗೋದರೊಳಗೆ ಮತ್ತು ಅದು ಬದಲಾಗುವುದೂ ಇಲ್ಲ. ಯಾವ ಕಾರಣಕ್ಕೂ ಏನಾದರೂ ಎಡವಟ್ಟಾಗಿ ಹೀರೋ ಮತ್ತು ಹೀರೋಯಿನ್ ಒಂದಾಗುತ್ತಾರೆ ಎಂಬುದು ಅವನಿಗೆ ಗೊತ್ತು.
#Why #This #Looks #Stupid ??
ಸಿನಿಮಾ ಎಂಬುದು ಒಂದು ಕಲೆ ಎಂದೇ ಪರಿಗಣಿಸಿ ನಮ್ಮೆಲ್ಲ ತರ್ಕವನ್ನು ಬದಿಗೊತ್ತಿಯೇ ಸಿನಿಮಾ ನೋಡಬೇಕು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳೋಣ.
Let’s not fall out of that rule.
ಆದರೆ ಪ್ರತಿ ಸಿನಿಮಾಕ್ಕೂ ಒಂದು ಸತ್ಯ ಎಂಬುದಿರುತ್ತದಲ್ಲ. ಅದೇ ಸಿನಿಮಾ ಕಳೆದು ಎರಡು ಗಂಟೆಗಳಲ್ಲಿ ನಮಗೆ ಒಂದಷ್ಟು ಸತ್ಯಗಳನ್ನು ನಂಬಿಸಿರುತ್ತದೆ. ಒಂದು ಉದಾಹರಣೆಗೆ ಎಂದರೆ ತಕ್ಷಣಕ್ಕೆ ಕಾಣಿಸಿಕೊಳ್ಳುವ ಹೆರಿಗೆ ನೋವಿಗೆ ಹೀರೋ ಆಸ್ಪತ್ರೆಗೆ ಎಷ್ಟೇ ದೂರ ಇದ್ದರೂ ಹೋಗಬಲ್ಲ. ಅಥವಾ ತನ್ನವಳಿಗೆ ರೇಗಿಸುವ ರೌಡಿಗಳನ್ನು ಎಷ್ಟೇ ದೂರದಿಂದ ಬಂದು ಚಚ್ಚಬಲ್ಲ.
ಇವುಗಳನ್ನು ನಾವು ಒಪ್ಪಿಕೊಂಡೇ ಸಿನಿಮಾ ನೋಡುತ್ತಿರುತ್ತೇವೆ ಬಿಡಿ. ಆದರೆ ಅದೇ ಸಿನಿಮಾದಲ್ಲಿ internet, watsapp, Skype, Facebook, paytm, ಗಳಂತೆ ಸಮಕಾಲೀನತೆಯನ್ನು ತೋರಿಸಿ ನಮ್ಮನ್ನು ನಂಬಿಸಿ. ಕೊನೆಯಲ್ಲಿ ಒಬ್ಬ ಫಾರಿನ್ ಗೆ ಹೋದರೆ ಎಲ್ಲ ಮುಗಿದರೆ ಹೋಯಿತು, ಆತ ಅಥವಾ ಅವಳನ್ನು ಮತ್ತೆ ವಾಪಾಸ್ ಕರೆಸಲು ಸಾಧ್ಯವೇ ಇಲ್ಲವೆಂಬಂತೆ ತೋರಿಸಿ ಮನೆಮಂದಿಯೆಲ್ಲ ಏರ್ ಪೋರ್ಟ್ ಒಳಗೆ ಮುಲಾಜಿಲ್ಲದೆ ನುಗ್ಗುವ ದೃಶ್ಯವಿದೆಯಲ್ಲ ಅದು ಮಾತ್ರ Unbearable .
ಮನೆಯಲ್ಲೇ ಇದ್ದರೆ ಅವರಿಗೆ ಆ ಸತ್ಯವನ್ನು ಮನವರಿಕೆ ಮಾಡಲಾಗುವುದಿಲ್ಲವೇ? ಅಲ್ಲಿಯವರೆಗೆ ಪ್ರೇಕ್ಷಕ ನಂಬಿದ ನಿಮ್ಮ ಸುಳ್ಳುಗಳನ್ನು ಇದೊಂದು ಕ್ಲೈಮ್ಯಾಕ್ಸ್ ಸೀನ್ ಒಡೆದು ಹಾಕಿಬಿಡುತ್ತದೆ. ಇನ್ನೂ ಇಂತಹ ಎಷ್ಟು ಸಿನಿಮಾಗಳಲ್ಲಿ ಇದೇ ಕ್ಲೈಮ್ಯಾಕ್ಸ್ ನೋಡಬೆಕೋ ನಾವು ನೀವು ????
ಇತಿ ನಿಮ್ಮ ,
ಕ್ಲೈಮ್ಯಾಕ್ಸ್ ಸೀನ್ ಗಳ ಸಂತ್ರಸ್ಥರು





0 Comments