
ಅಲ್ಲಮ, ಬಕಾಲಮುನಿ
ಕೆ.ಬಿ.ಸಿದ್ದಯ್ಯ ಅವರು ಬರೆದ ಸಾಲುಗಳು
ಈ ದೇಹ, ನನ್ನ ದೇಹ, ಇಡೀ ದೇಹ
ಭವದ ಸಾಲ
ತಿರಿ ಹೋಗಲೆಂದು ಸಾಲ
ಇಡೀ ದೇಹ ಮಾರಿಬಿಟ್ಟೆ
ಮೂರು ಕಾಸಿಗೆ.
ಕೊಲ್ಲುವವರೂ ಕೊಳ್ಳಲಿಲ್ಲ
ಮಡಿಯುವವರೂ ಮುಟ್ಟಲಿಲ್ಲ
ಇರಲಿ ಬಿಡು ಈ ದೇಹ
ಹೋಗಲಿ ಬಿಡು ನನ್ನ ದೇಹ
ಎಂದು ಅರಿತು
ಕಟ್ಟಕಡೆಗೆ
ಸುಲಿದು ಸುಲಿದು ಸುಲಿದು
ಚರ್ಮ ಸುಲಿದು
ಮೆಟ್ಟು ಹೊಲೆದು
ಮೆಟ್ಟೀ ಮೆಟ್ಟೀ ಮೆಟ್ಟೀ
ಬಿಟ್ಟುಬಿಟ್ಟೆ ಮೆಟ್ಟುಬಿಡುವ ಜಾಗದಲ್ಲಿ..






0 Comments