ಲೈಂಗಿಕ ಬಲಾತ್ಕಾರ-ಮುಕ್ಕಾಲು ಮೂರು ವೀಸೆ ಪಾಲು ರೇಪಿಸ್ಟರಿಗೆ ಖುಲಾಸೆ
ಜಿ.ಎನ್.ನಾಗರಾಜ್
ದೆಹಲಿಯ ಗ್ಯಾಂಗ್ ರೇಪ್ ಬಗ್ಗೆ ದೆಹಲಿಯಲ್ಲಿ ಹಾಗೂ ದೇಶಾದ್ಯಂತ ಬೃಹತ್ಬ ಪ್ರತಿಭಟನೆಯ ಅಲೆ ಎದ್ದಿದೆ. ರೇಪಿಸ್ಟರಿಗೆ ಮರಣ ದಂಡನೆಯಾಗಬೇಕು, ಹೆಚ್ಚು ತ್ವರಿತ ಗತಿಯ ನ್ಯಾಯಾಲಯಗಳು ಸ್ಥಾಪನೆಯಾಗಬೇಕು, ದಿನಂಪ್ರತಿ ವಿಚಾರಣೆಯಾಗಬೇಕು, ರಕ್ಷಣೆ ಕೊಡಲು ಆಯಕಟ್ಟಿನ ಜಾಗಗಳಲ್ಲಿ ಪೋಲಿಸರ ಕಾವಲು ಏರ್ಪಡಬೇಕು, ಅವರಿಗೆ ಸಂವೇದನಾ ತರಬೇತಿ ನೀಡಬೇಕು ಎಂದೆಲ್ಲ ಅತೀ ಅವಶ್ಯಕವಾದ ಒತ್ತಾಯಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ರೇಪ್ ಗಳ ತನಿಖೆ, ಶಿಕ್ಷೆ ಇವುಗಳ ಬಗ್ಗೆ ಇಂದಿನ ವಾಸ್ತವವನ್ನು ಬಗ್ಗೆ ತಿಳಿದುಕೊಳ್ಳುವ ಒಂದು ಕಿರು ಪ್ರಯತ್ನ ಇದು.
ಕಳೆದ ಐದು ವರುಷಗಳಲ್ಲಿ (2007-2011) ಭಾರತದ ಮುಖ್ಯ ನಗರಗಳಲ್ಲಿ ಮಹಿಳೆಯರು ರೇಪಿಸ್ಟರ ಲೈಂಗಿಕ ಬಲಾತ್ಕಾರಕ್ಕೊಳಗಾದ ಪ್ರಕರಣಗಳು ಇಂತಿವೆ:
ದೆಹಲಿ—2620
ಮುಂಬಯಿ—1033
ಬೆಂಗಳೂರು–383
ಚೆನ್ನೈ———293
ಕೊಲ್ಕತಾ—–200
ದೆಹಲಿಯಲ್ಲಿ 2002ರಿಂದ 2011ರವರೆಗೆ 5331 ರೇಪ್ ಪ್ರಕರಣಗಳಲ್ಲಿ ಮಹಿಳೆಯರು ನರಳಿದ್ದಾರೆ.
ಅವುಗಳಲ್ಲಿ 3860 ಪ್ರಕರಣಗಳಲ್ಲಿ ಬಲವಾದ ಸಾಕ್ಷ್ಯಾಧಾರಗಳಿಲ್ಲವೆಂದು ಮತ್ತಿತರ ಕಾರಣಗಳಿಗಾಗಿ ಖುಲಾಸೆಯಾಗಿದೆ.
ಇಡೀ ದೇಶದಲ್ಲಿ ರೇಪ್ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳು ಶೇ,26 ಮಾತ್ರ. ಉಳಿದವರಿಗೆ ಬಿಡುಗಡೆ ಭಾಗ್ಯ ಲಭಿಸಿದೆ.
ಎಲ್ಲ ರೀತಿಯ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳು ಶೇ.35.
ನಮ್ಮ ದೇಶ ವಿಶ್ವದಲ್ಲಿಯೇ ಅತೀ ಕಡಿಮೆ ಪೋಲೀಸರ ಪ್ರಮಾಣ ವನ್ನು (ಜನಸಂಖ್ಯೆಗೆ ಹೋಲಿಸಿದರೆ) ಹೊಂದಿರುವ ದೇಶ. ಇವುಗಳ ಜೊತೆಗೆ ಪೋಲೀಸು ಇಲಾಖೆಯ ಭ್ರಷ್ಟಾಚಾರ, ಪಾಳೆಯಗಾರೀ ಮನೋಭಾವದ ಪುರುಷ ಪೂರ್ವಾಗ್ರಹಗಳು, ಆಳುವ ರಾಜಕಾರಣಿಗಳ ರಕ್ಷಣೆ, ಹಸ್ತಕ್ಷೇಪಗಳು ಮುಂತಾದ ಕಾರಣಗಳಿಗಾಗಿ ದೆಹಲಿ ಒಂದರಲ್ಲಿಯೇ 2011ರಲ್ಲಿ ಸಂಭವಿಸಿದ ಪ್ರಕರಣಗಳಲ್ಲಿ ಶೇ.36.6 ಪ್ರಕರಣಗಳ ತನಿಖೆಯೇ ಆಗಿಲ್ಲ.
ಇನ್ನು ನ್ಯಾಯಾಧೀಶರ ಸಂಖ್ಯೆ. ಅದೂ ಕೂಡ ವಿಶ್ವದಲ್ಲಯೇ ಅತಿ ಕಡಿಮೆ ಸಂಖ್ಯೆ.1987ರಲ್ಲಿ ಇಪ್ಪತ್ತೈದು ವರುಷಗಳಿಗೆ ಮೊದಲು ಕಾನೂನು ಆಯೋಗ ಒಂದು ಲಕ್ಷ ಜನ ಸಂಖ್ಯೆಗೆ ಐದು ಜನ ನ್ಯಾಯಾಧೀಶರ ಅಗತ್ಯವಿದೆಯೆಂದು ನಿಗದಿ ಪಡಿಸಿತ್ತು.ಆದರೆ ಈಗ ಇಪ್ಪತ್ತೈದು ವರುಷಗಳ ನಂತರವೂ ಲಕ್ಷ ಜನಸಂಖ್ಯೆಗೆ ಕೇವಲ 1.4ರಷ್ಟು ಮಾತ್ರ ಇದ್ದಾರೆ.
ನಾಗಾಲೋಟದಿಂದ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು ಹಾಗೂ ಶಿಕ್ಷೆಯಾಗದ ಅಸಂಖ್ಯ ಪ್ರಕರಣಗಳು ಇವುಗಳಿಂದಾಗಿ ಜಿ-20 ರಾಷ್ಟ್ರಗಳಲ್ಲಯೇ ಭಾರತ ಮಹಿಳೆಯರು ಜೀವಿಸುವುದಕ್ಕೆ ಅತ್ಯಂತ ಕೆಟ್ಟ ದೇಶವೆಂದು ಹೆಸರು ಪಡೆದುಕೊಂಡಿದೆ. ಒಂದು ಜಾಗತಿಕ ಸಮೀಕ್ಷೆಯ ಪ್ರಕಾರ ಆಫ್ಘಾನಿಸ್ತಾನ, ಸೋಮಾಲಿಯ, ಕಾಂಗೋ ಇವುಗಳ ಜೊತೆಗೆ ಕಟ್ಟ ಕಡೆಯ ಸ್ಥಾನದಲ್ಲಿದೆ.
ಇಂತಹ ಕಟು ವಾಸ್ತವದ ಎದುರು ಎಲ್ಲ ಮಾನವೀಯ ಮೌಲ್ಯವುಳ್ಳವರೂ ಕೇವಲ ಧಿಡೀರ್ ಪ್ರತಿಭಟನೆಗಳಿಗೆ ಸೀಮಿತರಾಗದೆ ನಿರಂತರ ಹಾಗೂ ಧೃಡ ಹೋರಾಟಗಳನ್ನು ನಡೆಸಬೇಕಾಗಿದೆ.
( ಸಾಧಾರ)








ideega deshadaadyanta ee dilli prakaranavannu moolavaagirisikondu pratibhatanegalu nadeyuttiruvanteye..itta yaavude bhayavillade mattashtu gang rape galu dinamprati nadeyuttale ive.ene sdvichaaragalannu tilisi helidaroo vikrutara manasanna tiddalaagadu.badalige shikshe katina golisidare at least dandam dashaguna bhave anta onchooru bhaya biddaaru.