ಕನ್ನಡದ ಸೂಕ್ಷ್ಮ ಮನಸ್ಸುಗಳಲ್ಲಿ ಮುಖ್ಯರಾದವರು ವೈದೇಹಿ. ಎಂ ಬಿ ಸಿಂಗ್ ರಿಂದಾಗಿ ವೈದೇಹಿ ಎಂದು ಮರು ನಾಮಕರಣಕ್ಕೆ ಒಳಪಟ್ಟ ಈ ಜಾನಕಿ ಕನ್ನಡದ ಹಲವು ಮನಸ್ಸುಗಳನ್ನು ತಮ್ಮ ಬರಹದ ಮೂಲಕ ತಣಿಸಿದ್ದಾರೆ. ವೈದೇಹಿ ಒಳಗೆ ಬೆರಗು ಲೋಕಕ್ಕೆ ಒಡ್ಡಿಕೊಳ್ಳುವ ಒಂದು ಮನಸ್ಸು ಇನ್ನೂ ಇದೆ. ಗಣಿಗಾರಿಕೆ ನಿಲ್ಲಿಸಿ ಎಂದು ಗಟ್ಟಿಯಾಗಿ ಹೇಳುವ ದನಿ ಇದೆ., ವರ್ಷಾನುಗಟ್ಟಲೆ ಬರೆದ ಆತ್ಮ ಕಥೆಗೂ ನಿನಗೂ ಸಂಬಂಧವಿಲ್ಲ ಎನ್ನುವವರ ಜೊತೆ ಕಾದುವ ಮನಸ್ಸಿದೆ. ಗೌರಿ, ಮಂಗಳೆಯೆಂಬ ಗೋವುಗಳ ನಡುವೆ ಜಂಜಾಟಗಳನ್ನು ಇಲ್ಲವಾಗಿಸಿಕೊಳ್ಳುವ ಲೋಕವನ್ನು ಕಟ್ಟಿಕೊಳ್ಳುವುದೂ ಗೊತ್ತಿದೆ.
ಈ ಎಲ್ಲಾ ಕಾರಣಕ್ಕೂ ಹಾಗೂ ನಾಳೆ ರಾಜ್ಯೋತ್ಸವ ಎನ್ನುವ ಕಾರಣಕ್ಕೂ, ನುಡಿಸಿರಿಯ ಮೊದಲ ಮಹಿಳಾ ಅಧ್ಯಕ್ಷರು ಎಂಬ ಕಾರಣಕ್ಕೂ ಹೀಗೆ ಸುಮ್ ಸುಮ್ನೆ ಒಂದಷ್ಟು ನೆಪ ಹಿಡಿದುಕೊಂಡು ವೈದೇಹಿಯ ಮೆರವಣಿಗೆ ನಡೆಸಿದ್ದೇವೆ. ಯಥಾಪ್ರಕಾರ ನಿಮ್ಮ ಓದಿಗಾಗಿ-





0 Comments